ಹಿಂದೂರಾಷ್ಟ್ರ ನಿರ್ಮಾಣಕ್ಕೆ ಮೋಹನ್ ಭಾಗವತ್ ಕರೆ

mng-rss-chief-mohan-bhagawat-calls-for-hindu-rashtra
ಕೆಂಜಾರು ಮೈದಾನ (ಬಜಪೆ, ಮಂಗಳೂರು),ಫೆ. 4: ವಿವೇಕಾನಂದರ ಜನ್ಮ ದಿನ ಬಹುಳ ಸಪ್ತಮಿಯಂದು (ಫೆ. 3) ಇಲ್ಲಿ ನಡೆದ ಸಾಂಘಿಕ್ ಸಮಾವೇಶದಲ್ಲಿ ಗಣವೇಷಧಾರಿಗಳು ಸಾಗರ ಪ್ರವಾಹದಂತೆ ಕಂಡುಬಂದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್ ಎಸ್ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ಸ್ವಾಮಿ ವಿವೇಕಾನಂದರ ಜೀವನಾದರ್ಶಗಳನ್ನು ಪಾಲಿಸುವಂತೆ ಕರೆನೀಡಿದರು.

ಇದೇ ವೇಳೆ, ಯಾರನ್ನೂ ನೋಯಿಸದೆ, ವಿರೋಧಿಸದೆ ಕಲ್ಯಾಣ ಬಯಸುವ ಹಿಂದೂ ರಾಷ್ಟ್ರ ನಿರ್ಮಿಸೋಣ ಎಂದೂ ಅವರು ಕರೆ ನೀಡಿದರು. ಸ್ವಚಿಂತನೆ, ಸ್ವಹಿತಾಸಕ್ತಿ ಪೂರೈಸಿಕೊಳ್ಲುವುದರಲ್ಲಿ ಕಳೆದುಹೋಗದೆ ಒಂದಷ್ಟು ಬಲಿದಾನದ ಮೂಲಕ ಪ್ರಾಮಾಣಿಕವಾಗಿ ಪರಿಪೂರ್ಣರಾಗಿ ಸಮಾಜ ಕಟ್ಟುವ ಕೈಕಂರ್ಯದಲ್ಲಿ ತೊಡಗಿಸಿಕೊಳ್ಳೋಣ ಎಂದು ಮೋಹನ್ ಭಾಗವತ್ ಅವರು ಲಕ್ಷ ಮಂದಿಗೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದವರಿಗೆ ಕರೆ ನೀಡಿದರು.

ಕ್ತಿ ಪ್ರದರ್ಶಿಸುವ ಅಗತ್ಯ ನಮಗಿಲ್ಲ. ಶಕ್ತಿ ಇದ್ದರೆ ಅದು ಎದ್ದು ಕಾಣುತ್ತದೆ. ಸಂಘ ಪ್ರೀತಿ ಬಯಸುತ್ತದೆ, ಸೇವೆ ಮಾಡಲು ಇಚ್ಛಿಸುತ್ತದೆ. ಸೇವೆ ಮಾಡುವವರ, ಮಮತೆ ತೋರಿಸುವವರ ಶಕ್ತಿ ಹೆಚ್ಚೇ ಇರುತ್ತದೆ. ಸಮಾವೇಶದಿಂದ ಹೋದ ಬಳಿಕ ಸಂಘದ ವಿಚಾರ ಧಾರೆಗಳನ್ನು ಹಳ್ಳಿ ಹಳ್ಳಿಗಳಲ್ಲಿ ಪಸರಿಸಬೇಕು ಎಂದರು. ಲಕ್ಷೋಪಾದಿಯಲ್ಲಿದ್ದ ಗಣವೇಷಧಾರಿಗಳಿಗೆ ಮೋಹನ್ ಭಾಗವತ್ ಅವರು ಕಿವಿಮಾತು ಹೇಳಿದರು.

ಯಾರೆಲ್ಲಾ ಭಗವಹಿಸಿದ್ದರು?: ಮಾಜಿ ಸಿಎಂ ಸದಾನಂದಗೌಡ, ವಿಧಾನಸಭಾ ಉಪಸಭಾಪತಿ ಯೋಗೀಶ್ ಭಟ್, ಸಚಿವ ಸಿಟಿ ರವಿ, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಶಾಸಕ ಕೃಷ್ಣ ಪಾಲೇಮಾರ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಅಧ್ಯಕ್ಷ ಅನ್ವರ್ ಮಾನಿಪ್ಪಾಡಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಫ್ರಾಂಕ್ಲಿನ್ ಮೊಂತೆರೊ, ತುಳು ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಭಾಗವಹಿಸಿದ್ದರು. ಗೋವಾ ಸ್ಪೀಕರ್ ರಾಜೇಂದ್ರ ಅರಳೀಕರ್ ಕೂಡ ಸಮಾವೇಶಕ್ಕೆ ಆಗಮಿಸಿದ್ದು ಗಮನಾರ್ಹವಾಗಿತ್ತು.

ಸಾಂಘಿಕ್ ಸಮಾವೇಶದಲ್ಲಿ ಬೈಂದೂರಿನಿಂದ ಕುಶಾಲನಗರವರೆಗಿನ ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ 1152 ಗ್ರಾಮಗಳ ಲಕ್ಷಕ್ಕೂ ಅಧಿಕ ಸ್ವಯಂಸೇವಕರು ಹೊಸ ಇತಿಹಾಸ ದಾಖಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+