ಭಾರತಕ್ಕೆ ಪ್ರವೇಶಕ್ಕೆ ವಾಲ್ಮಾರ್ಟ್ 'ಚಿಲ್ಲರೆ' ವ್ಯವಹಾರ

ಜಾಗತಿಕ ಚಿಲ್ಲರೆ ದೈತ್ಯ ವಾಲ್‌ಮಾರ್ಟ್ ಭಾರತ ಪ್ರವೇಶಕ್ಕಾಗಿ ಅಮೆರಿಕದಲ್ಲಿ ಲಾಬಿ ಮುಂದುವರೆಸಿದೆ. ವಾಲ್‌ಮಾರ್ಟ್ 2012ರಲ್ಲಿ ಅಮೆರಿಕದ ಸಂಸದೀಯ ಪಟುಗಳ ಜತೆ ವ್ಯವಹಾರ ಕುದುರಿಸಲು 33 ಕೋಟಿ ರೂ.(6.13 ಮಿಲಿಯನ್ ಯುಎಸ್‌ಡಿ) ಖರ್ಚುಮಾಡಿದೆ. ಈ ಮಧ್ಯೆ, 2008ರಿಂದ ಲಾಬಿಗಾಗಿ ವಾಲ್‌ಮಾರ್ಟ್ ಖರ್ಚು ಮಾಡಿರುವುದು ಬರೋಬ್ಬರಿ 180 ಕೋಟಿ ರು ಎಂದು ತಿಳಿದು ಬಂದಿದೆ.
ಅಮೆರಿಕದ ಶಾಸನ ಸಭೆ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, 2012 ರ ಡಿ.31ಕ್ಕೆ ಅಂತ್ಯ ಕಂಡ ಕೊನೆಯ ತ್ರೈಮಾಸಿಕದಲ್ಲಿ ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಕುರಿತ ಚರ್ಚೆ ಸೇರಿದಂತೆ ವಿವಿಧ ವಿಷಯ ಲಾಬಿಗಾಗಿ ಅಮೆರಿಕ ಮೂಲದ ವಾಲ್ ಮಾರ್ಟ್ ಮಳಿಗೆಗಳು ಒಟ್ಟು 8 ಕೋಟಿ ರೂ.(1.48 ಮಿಲಿಯನ್ ಯುಎಸ್‌ಡಿ) ವೆಚ್ಚಮಾಡಿವೆ. 2012ನೇ ವರ್ಷದಲ್ಲಿ ಕಂಪನಿ ನಡೆಸಿದ ಲಾಬಿಯ ಮೊತ್ತ ಒಟ್ಟು 33 ಕೋಟಿ ರೂ. ಎಂದು ಅಮೆರಿಕದ ಸೆನೆಟ್ ಬಹಿರಂಗಪಡಿಸಿದೆ.
ಅಮೆರಿಕದ ಸಂಸತ್ ಸದಸ್ಯರ ಜತೆ ವಾಲ್ ಮಾರ್ಟ್ ಪ್ರತಿ ತ್ರೈಮಾಸಿಕದಲ್ಲೂ ಹತ್ತಾರು ವಿಷಯಗಳ ಬಗ್ಗೆ ಲಾಬಿ ನಡಸುತ್ತದೆ. ಆದರೆ, ಅಮೆರಿಕದ ಕಾನೂನಿನ ಅಡಿಯಲ್ಲೇ ಆ ಮಾಹಿತಿಯನ್ನು ಬಹಿರಂಗ ಪಡಿಸಲಾಗುತ್ತದೆ.
ತನಿಖೆ ಆರಂಭ :ಇತ್ತೀಚೆಗಷ್ಟೆ, ದೇಶದ ಮಾರುಕಟ್ಟೆ ಪ್ರವೇಶಿಸಲು ಅಮೆರಿಕದಲ್ಲಿ ವಾಲ್‌ಮಾರ್ಟ್ ನಡೆಸಿದ ಲಾಬಿ ಚಟುವಟಿಕೆಗಳ ಬಗ್ಗೆ ಭಾರತದ ತನಿಖೆ ಆರಂಭಿಸಲಾಗಿದೆ. ಲಾಬಿ ಸಂಬಂಧ ಈ ಹಿಂದೆ ಮಾಹಿತಿ ಬಹಿರಂಗವಾದಾಗ ವಾಲ್‌ಮಾರ್ಟ್ ವ್ಯವಹಾರದ ದೇಶದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಯಿತು.
ಅಮೆರಿಕ ಬಹಿರಂಗಪಡಿಸಿರುವ ಮಾಹಿತಿ ಪ್ರಕಾರ, ವಾಲ್‌ಮಾರ್ಟ್ ಭಾರತದಲ್ಲಿ ವ್ಯಾಪಾರ ನಡೆಸಲು ಮತ್ತು ಇತರೆ ವಿಷಯಗಳ ಬಗ್ಗೆ ಸೆನೆಟ್ ಸದಸ್ಯರ ಜತೆ ಚರ್ಚಿಸಲು ಮಾತ್ರ ಲಾಬಿ ನಡೆಸಿದೆ. ಆದರೆ, ಈ ಸಂಬಂಧ ಭಾರತ ಸರ್ಕಾರದ ಅಧಿ ಕಾರಿಗಳ ಜತೆ ಮತ್ತು ರಾಜಕಾರಣಿಗಳ ಜತೆ ಕಂಪನಿವ್ಯವಹಾರ ನಡೆಸಿಲ್ಲ.
ವಾಲ್‌ಮಾರ್ಟ್, ಅತ್ಯಂತ ಲಾಭದಾಯಕ ಭಾರತದ ಮಾರುಕಟ್ಟೆ ಪ್ರವೇಶಿಸಲು 2008ರಿಂದ ಅಮೆರಿಕದ ಸಂಸತ್ ಸದಸ್ಯರೊಂದಿಗೆ ಲಾಬಿ ನಡೆಸುತ್ತಿದೆ. 2008 ರಿಂದ ಕಂಪನಿ ಲಾಬಿಗಾಗಿ ಒಟ್ಟು 180 ಕೋಟಿ ರೂ. ಖರ್ಚು ಮಾಡಿದೆ.
ದೇಶದ ಬಹು ಬ್ರಾಂಡ್ ಚಿಲ್ಲರೆ ಮಾರುಕಟ್ಟೆಯಲ್ಲಿ ಎಫ್‌ಡಿಐ ಪ್ರವೇಶಕ್ಕೆ ವಿಪಕ್ಷಗಳ ತೀವ್ರ ವಿರೋಧದ ನಡುವೆ ಸಂಸತ್ ಇತ್ತೀಚೆಗೆ ಅನುಮೋದನೆ ನೀಡಿದೆ. (ಪಿಟಿಐ)
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications