ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಕಂಪೆನಿ ಸ್ಥಾಪನೆ

NR Narayana Murthy
ಹುಬ್ಬಳ್ಳಿ, ಜ.30 : ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಕಂಪೆನಿ ಸ್ಥಾಪನೆಯಾಗಲಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ. ಆದರೆ, ಇದಕ್ಕೆ ಉತ್ತರವಾಗಿ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಇನ್ನೂ ಕಾಲ ಕೂಡಿ ಬಂದಿಲ್ಲ ಎಂದಿದ್ದಾರೆ.

ಉತ್ತರ ಕರ್ನಾಟಕದ ತಾಂತ್ರಿಕ ಮತ್ತು ವ್ಯವಹಾರ ನಿರ್ವಹಣೆ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸ್ವ ಉದ್ಯೋಗ ಪ್ರಾರಂಭಿಸಲು ಹಾಗೂ ಪ್ರೋತ್ಸಾಹಿಸುವ ಸಲುವಾಗಿ ಮಂಗಳವಾರ ಹಮ್ಮಿಕೊಂಡಿದ್ದ 'ಉದ್ಯಮಿಯಾಗು ಉದ್ಯೋಗ ನೀಡು' ಎಂಬ ಪ್ರೇರಣಾ ಶಿಬಿರಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಸಚಿವ ನಿರಾಣಿ ಮಾತನಾಡಿದರು.

ಧಾರವಾಡ ಬಳಿಯ ಸತ್ತೂರಿನಲ್ಲಿರುವ ವೀರೇಂದ್ರ ಹೆಗ್ಗಡೆ ಕಲಾ ಕ್ಷೇತ್ರದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಧಾರವಾಡದ ಸಿಡಾಕ್ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಗರದಲ್ಲಿ ಇನ್ಫೋಸಿಸ್ ಕೈಗಾರಿಕೆ ಆರಂಭಿಸಲು ಸರ್ಕಾರದಿಂದ ಇಲ್ಲಿನ ಏರ್‌ಪೋರ್ಟ್ ಬಳಿಯ 50 ಎಕರೆ ಜಮೀನು ನೀಡಲಾಗಿದೆ ಎಂದರು. ಇಲ್ಲೊಂದು ಫುಡ್ ಪಾರ್ಕ್ ಸ್ಥಾಪಿಸುವ ಯೋಜನೆ ಇದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಇದಕ್ಕೆ ಸಬ್ಸಿಡಿ ದೊರೆಯಲಿದ್ದು,ಪ್ರತಿ ಜಿಲ್ಲೆಯಲ್ಲಿಯೂ ಒಂದೊಂದು ಸೆಕ್ಟರ್ ಆರಂಭಿಸುವ ಯೋಚನೆ ಮಾಡಲಾಗಿದೆ ಎಂದು ನಿರಾಣಿ ಹೇಳಿದರು.

ದೇಶದ ಪ್ರತಿಷ್ಠಿತ ಟಾಟಾ ಕಂಪೆನಿಯ ರತನ್ ಟಾಟಾ ಅವರನ್ನೂ ರಾಜ್ಯದಲ್ಲಿ ಉದ್ಯಮ ಸ್ಥಾಪನೆಗೆ ಕೇಳಿಕೊಳ್ಳುವುದಾಗಿ ತಿಳಿಸಿದ ನಿರಾಣಿ, ಉತ್ತರ ಕರ್ನಾಟಕದಲ್ಲಿ ಹಲವು ಕೈಗಾರಿಕೆಗಳ ಸ್ಥಾಪನೆ ಗುರಿಹೊಂದಲಾಗಿದೆ ಎಂದರು. [ಹುಬ್ಬಳ್ಳಿಯತ್ತ ಐಟಿ ಕ್ಷೇತ್ರದ ಕಣ್ಣು]

ಎನ್ನಾರೆನ್ ಪ್ರತಿಕ್ರಿಯೆ: ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಕಂಪನಿಗಳ ಸ್ಥಾಪನೆ ಅಷ್ಟು ಸುಲಭವಲ್ಲ. ಹುಬ್ಬಳ್ಳಿ ಭಾಗಕ್ಕೆ ಐಟಿ ಕಂಪನಿಗಳ ಪರಿಚಯ ಇದ್ದೇ ಇದೆ. ಆದರೆ, ಹುಬ್ಬಳ್ಳಿ-ಧಾರವಾಡದಲ್ಲಿ ಮೂಲ ಸೌಕರ್ಯ ಕೊರತೆ ಇದೆ. ಫೈವ್ ಸ್ಟಾರ್ ಹೋಟೆಲ್ ಗಳು, ಪ್ರಮುಖ ಮೆಟ್ರೋ ನಗರಗಳಿಗೆ ಸಂಪರ್ಕ ಒದಗಿಸುವ ವಿಮಾನ ನಿಲ್ದಾಣ, ಆಂಗ್ಲ ಮಾಧ್ಯಮ ಶಾಲೆಗಳು ಹೆಚ್ಚಾಗಬೇಕು. ಹೆಚ್ಚೆಚ್ಚು ವೃತ್ತಿಪರರನ್ನು ಇಲ್ಲೇ ಸೃಷ್ಟಿಸಿದರೆ, ಸ್ಥಳೀಯರಿಗೆ ಉದ್ಯೋಗ ಹಾಗೂ ಸಂಸ್ಥೆ ಸ್ಥಾಪನೆ ಕಷ್ಟವಾಗುವುದಿಲ್ಲ ಎಂದು ಎನ್ ಆರ್ ನಾರಾಯಣ ಮೂರ್ತಿ ಪ್ರತಿಕ್ರಿಯಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಪ್ರತಿಭೆಗಳಿಗೆ ಬರವಿಲ್ಲ. ಆದರೆ, ಮೂಲ ಸೌಕರ್ಯ ಅಭಿವೃದ್ಧಿಯಾಗದಿದ್ದರೆ ಯಾವ ಕಂಪನಿಯೂ ಇತ್ತ ಕಡೆ ಮುಖ ಮಾಡುವುದಿಲ್ಲ. ಸರ್ಕಾರ, ಎನ್ ಜಿಒಗಳು ಹಾಗೂ ಸಾರ್ವಜನಿಕರು ಈ ಪ್ರದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಐಟಿ ಕಂಪನಿಗಳು ಬಂದರೆ ಭರಪೂರ ಉದ್ಯೋಗ ಅವಕಾಶಗಳನ್ನು ಹೊತ್ತು ತರುವುದಂತೂ ನಿಜ ಎಂದು ನಾರಾಯಣ ಮೂರ್ತಿ ಹೇಳಿದರು.

ಇನ್ನೊಂದು ಕಾರ್ಯಕ್ರಮದಲ್ಲಿ ಸುಧಾಮೂರ್ತಿ ಅವರು ಮಾತನಾಡುತ್ತಾ, ಕನ್ನಡದಲ್ಲಿ ಸಾಫ್ಟ್ ವೇರ್ ಅಭಿವೃದ್ಧಿಯಾಗಬೇಕಾದರೆ ಬೇಡಿಕೆ ಕೂಡಾ ಹೆಚ್ಚಬೇಕು ಎಂದರು. ಸುಧಾ ಮೂರ್ತಿ ಅವರ 'ಋಣ' ಕಾದಂಬರಿ ಮಠಾಠಿ ಭಾಷೆಯಲ್ಲಿ ಚಲನಚಿತ್ರವಾಗುತ್ತಿದೆ. ಮತ್ತೊಂದು ಕಾದಂಬರಿಯನ್ನು ಚಿತ್ರ ಮಾಡಲು ಟಿಎಸ್ ನಾಗಾಭರಣ ಬಯಸಿದ್ದಾರೆ ಎಂಬ ವಿಷಯ ಕೂಡಾ ಹೊರಬಂತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+