ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗ್ಳೂರ್ ಬಿಟ್ಟು ಹುಬ್ಬಳ್ಳಿಯತ್ತ ಐಟಿ ಕ್ಷೇತ್ರದ ಕಣ್ಣು

By Mahesh
|
Google Oneindia Kannada News

Hubli It hub
ಹುಬ್ಬಳ್ಳಿ, ಅ.3: ಉತ್ತರ ಕರ್ನಾಟಕದಲ್ಲಿ ಐಟಿ ಕ್ರಾಂತಿ ಹುಟ್ಟುಹಾಕಲು ಕರ್ನಾಟಕ ರಾಜ್ಯ ಇಲೆಕ್ಟ್ರಾನಿಕ್ ಅಭಿವೃದ್ಧಿ ನಿಯಮಿತ ಲಿ(ಕಿಯೋನಿಕ್ಸ್) ಹತ್ತು ಹಲವು ಆಕರ್ಷಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಕಳೆಗುಂದುತ್ತಿರುವ ಬೆಂಗಳೂರಿನ ಐಟಿ ಕಿರೀಟದ ಹೊಳಪನ್ನು ಹುಬ್ಬಳ್ಳಿಯಲ್ಲಿ ಕಾಣಲು ಕಿಯೋನಿಕ್ಸ್ ಚಿಂತಿಸಿದೆ.

ಬೆಂಗಳೂರು ಐಟಿ ಸಾಮ್ರಾಜ್ಯಕ್ಕೆ ಮುಳುವಾದ ಮೂಲಸೌಕರ್ಯ, ವಸತಿ ಕೊರತೆಯ ಲಾಭ ಪಡೆದು ಹುಬ್ಬಳ್ಳಿಗೆ ಐಟಿ ಕಂಪನಿಗಳನ್ನು ಕೊಂಡು ತರಲು ಕಿಯೋನಿಕ್ಸ್ ಪಣತೊಟ್ಟಿದೆ.

* ಬೆಂಗಳೂರಿಗಿಂತ ಹುಬ್ಬಳ್ಳಿ ಧಾರವಾಡ ಶೇ.38ರಷ್ಟು ಆರ್ಥಿಕವಾಗಿ ಕಡಿಮೆ ದರದಲ್ಲಿ ಎಲ್ಲಾ ಸೌಕರ್ಯವನ್ನು ಒದಗಿಸಬಲ್ಲದು ಎಂಬ ನ್ಯಾಸ್ ಕಾಮ್ ನ ವರದಿಯನ್ನು ಕಂಪನಿಗಳ ಮುಂದಿಡಲಾಗುತ್ತಿದೆ.

* ಐಟಿ ಕಂಪನಿಗಳಿಗೆ ವಿಶೇಷ ಬಾಡಿಗೆ ಪ್ಯಾಕೇಜ್ ಅನ್ನು ಹುಬ್ಬಳ್ಳಿ ಐಟಿ ಪಾರ್ಕ್ ನ ವ್ಯವಸ್ಥಾಪಕ ಎಚ್ ದೇವರಾಜ್ ಘೋಷಿಸಿದ್ದಾರೆ.

* ಚದರ ಅಡಿಗೆ ರು.5 ರು ಲೆಕ್ಕದಂತೆ ಪ್ರತಿ ತಿಂಗಳ ಬಾಡಿಗೆ ಪಡೆಯಲು ನಿರ್ಧರಿಸಲಾಗಿದೆ. ಕಂಪನಿಗಳ ಅಗತ್ಯಕ್ಕೆ ತಕ್ಕಂತೆ ಸೌಕರ್ಯ ಒದಗಿಸಲು ಹುಬ್ಬಳ್ಳಿ ಐಟಿ ಪಾರ್ಕ್ ಬದ್ಧವಾಗಿದೆ.

*ಐಯಾನ್ ಐಡಿಯಾ, ಸಂಕಲ್ಪ್ ಸೆಮಿಕಂಡೆಕ್ಟರ್, ನಾರ್ಬೊಸ್, ನೈಲ್ ಸಾಫ್ಟ್, ಪ್ರೊ ಸಲ್ಯೂಷನ್ಸ್, ಕ್ಲಿಕ್ ಹುಬ್ಳಿ, ವೆಬ್ ಡ್ರೀಮ್ಸ್ ಹಾಗೂ ಅಬ್ಲ್ ಡಿಸೈನ್ ಇಂಜಿನಿಯರಿಂಗ್ ಸರ್ವೀಸ್ ಹುಬ್ಬಳ್ಳಿಯಲ್ಲಿರುವ ಪ್ರಮುಖ ಕಂಪನಿಗಳು. ಇದಲ್ಲದೆ ಬಿವಿಬಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲೇ ಅನೇಕ ಕಂಪನಿಗಳು ಕಾರ್ಯ ನಿರ್ವಹಿಸುತ್ತಿದೆ.

* ಕಿಯೋನಿಕ್ಸ್ ಈಗಾಗಲೇ ಎರಡು ಕಂಪನಿಗಳನ್ನು ಹುಬ್ಬಳ್ಳಿಯತ್ತ ಕರೆತಂದಿದೆ. ಸ್ಥಳೀಯ ಪದವೀಧರರಿಗೆ ಉದ್ಯೋಗ ಅವಕಾಶ ನೀಡಿದೆ.

ಒಟ್ಟಿನಲ್ಲಿ ಹುಬ್ಬಳ್ಳಿಗೆ ಇನ್ನು ಒಂದೆರಡು ಎಂಎನ್ ಸಿಗಳು ಬಂದರೆ, ಬೆಂಗಳೂರಿಗೆ ಉದ್ಯೋಗ ಅರಸಿ ಹೋಗುವ ಉತ್ತರ ಕರ್ನಾಟಕ ಮಂದಿ, ಸ್ವಂತ ಊರಲ್ಲೇ ತಮ್ಮ ವೃತ್ತಿ ಜೀವನ ಆರಂಭಿಸಬಹುದು ಎಂದು ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ಅಶೋಕ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.

English summary
IT Park-Hubli Manager H. Devanand has come up with a plan to promote IT industry in Hubli. New IT rent plan of Rs 5 a square feet a month has been announced. Keonics recently successed in pulling two companies from Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X