ಪಾಕಿಸ್ತಾನದಲ್ಲಿ ನೆಲೆಸಲು ಶಾರೂಖ್ ಖಾನಿಗೆ ಆಹ್ವಾನ

ಶಾರೂಖ್ ಖಾನಿಗೆ ಪಾಕಿಸ್ತಾನದಲ್ಲಿ ತುಂಬಾ ಗೌರವವಿದೆ. ಪಾಕಿಸ್ತಾನದಲ್ಲಿ ನೆಲೆಸಲು ಶಾರೂಖಿಗೆ ಬೇಕಾದ ಸಹಾಯ ನಾನೇ ಮಾಡುತ್ತೇನೆ ಎಂದು ಪಾಕಿಸ್ತಾನದ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಯೀದ್ ಹೇಳಿದ್ದಾರೆ.
ಔಟ್ ಲುಕ್ ಟರ್ನಿಂಗ್ ಪಾಯಿಂಟ್ ಮ್ಯಾಗಜಿನ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ 'ಮುಸ್ಲಿಮನಾಗಿ ಭಾರತದಲ್ಲಿ ನನ್ನ ಜೀವನದ' ಬಗ್ಗೆ ಮಾತನಾಡುತ್ತಿದ್ದ ಶಾರೂಖ್, ಭಾರತದಲ್ಲಿರುವ ಮುಸ್ಲಿಮರೆಲ್ಲರೂ ಭಯೋತ್ಪಾದಕರು ಎಂದು ಇಲ್ಲಿನ ರಾಜಕಾರಿಣಿಗಳು ತಪ್ಪಾಗಿ ಯೋಚಿಸುತ್ತಿದ್ದಾರೆ.
ನಾನೊಬ್ಬ ಭಾರತೀಯ. ನನ್ನ ತಂದೆ ಸ್ವಾತಂತ್ರ್ಯ ಹೋರಾಟಗಾರ. ಬಹಳಷ್ಟು ಬಾರಿ ನನ್ನ ತಂದೆಯನ್ನು ಭಾರತದ ರಾಜಕಾರಿಣಿಗಳು ಕಡೆಗಣಿಸಿದ್ದಾರೆ ಎಂದು ಶಾರೂಖ್ ಈ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದರು.
ನನ್ನ ಸ್ವಂತ ದೇಶಕ್ಕಿಂತ ನೆರೆ ರಾಷ್ಟ್ರಗಳ ಆರೋಪಕ್ಕೆ ನಾನು ಅಮಾಯಕನಾಗಿ ತುತ್ತಾಗಿದ್ದೇನೆ. ನನ್ನ ಮೂಲ ಊರಿಗೆ ಹಿಂದಿರುಗುವಂತೆ ಕೂಡಾ ಭಾರತದ ರಾಜಕಾರಿಣಿಗಳು ನನಗೆ ಸೂಚಿಸಿದ್ದರು ಎಂದು ಶಾರೂಖ್ ಕಾರ್ಯಕ್ರಮದಲ್ಲಿ ಬೇಸರ ವ್ಯಕ್ತ ಪಡಿಸಿದ್ದರು.
ಶಾರೂಖ್ ಖಾನ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಜಮಾತ್-ಉದ್-ದಾವ ಮುಖ್ಯಸ್ಥ ಹಫೀಜ್ ಮೊಹಮ್ಮದ್ ಸಯೀದ್, ಶಾರೂಖ್ ಅವರಿಗೆ ಪಾಕಿಸ್ತಾನದಲ್ಲಿ ಬಂದು ನೆಲೆಸಲು ಆಹ್ವಾನ ನೀಡಿದ್ದಾರೆ.












Click it and Unblock the Notifications