ಬಾಲಕಿಯ ಮುಖವನ್ನು ಕಿತ್ತು ತಿಂದ ಬೀದಿ ನಾಯಿಗಳು

Stray dogs attack girl in Bangalore
ಬೆಂಗಳೂರು, ಜ. 24 : ಟ್ಯೂಷನ್‌ಗೆಂದು ಮನೆಯಿಂದ ಹೊರಗೆ ಕಾಲಿಟ್ಟ ಬಾಲಕಿಯ ಮುಖವನ್ನು ಬೀದಿ ನಾಯಿಗಳು ಹರಿದುಹಾಕಿದ ಹೃದಯ ಕಲಕುವ ಘಟನೆ ಇಂದಿರಾನಗರದ 10ನೇ ಕ್ರಾಸಿನಲ್ಲಿ ಗುರುವಾರ ಸಂಜೆ ನಡೆದಿದ್ದು, ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿಗಳ ಹಳೆ ಕಥೆಯನ್ನು ತೆರೆದಿಟ್ಟಿದೆ.

6 ವರ್ಷದ ಸಂಜನಾ ಎಂಬ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದು ಆಕೆಯನ್ನು ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಪುಟ್ಟ ಬಾಲಕಿಯ ಗಲ್ಲ ಮತ್ತು ಕಣ್ಣುಗಳನ್ನು ಬೀದಿ ನಾಯಿಗಳು ಕಿತ್ತುಹಾಕಿವೆ. ಆರಂಭದಲ್ಲಿ ಚಿನ್ಮಯಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದ್ದು, ನಂತರ ಕಿಮ್ಸ್ ಆಸ್ಪತ್ರೆಯಲ್ಲಿ ಸಂಜನಾಳನ್ನು ದಾಖಲಿಸಲಾಗಿತ್ತು.

ಗುರುವಾರ ಸಂಜೆ 5 ಗಂಟೆಯ ಹೊತ್ತಿಗೆ ಮನೆಪಾಠಕ್ಕೆಂದು ಸಂಜನಾ ಮನೆಯಿಂದ ಹೊರಗೆ ಕಾಲಿಡುತ್ತಿದ್ದಂತೆ ಆಕೆಯ ಮೇಲೆ ಬೀದಿ ನಾಯಿಗಳು ಎರಗಿವೆ. ಆಕೆಯ ಕಿರುಚಾಟ ಕೇಳಿ ದಾರಿಹೋಕರು ನಾಯಿಗಳನ್ನು ಓಡಿಸಿದ್ದಾರೆ. ಆದರೆ, ಅಷ್ಟರಲ್ಲಿ ಸಂಜನಾಳ ಬಲಭಾಗದ ಗಲ್ಲ ಮತ್ತು ಎಡಭಾಗದ ಕಣ್ಣಿನ ಕೆಳಗಿನ ಭಾಗವನ್ನು ನಾಯಿಗಳು ಹರಿದು ತಿಂದಿದ್ದವು.

ಚಿನ್ಮಯಿ ಆಸ್ಪತ್ರೆಯ ನಂತರ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಲ್ಲಿ ಚಿಕಿತ್ಸೆ ಆರಂಭಿಸಲು ಮೂರು ಗಂಟೆ ತೆಗೆದುಕೊಂಡರು ಎಂದು ಪೋಷಕರು ಆರೋಪಿಸುತ್ತಾರೆ. ಅಲ್ಲದೆ, ಈ ಪ್ರದೇಶದಲ್ಲಿ ಬೀದಿ ನಾಯಿಗಳ ಉಪಟಳ ವಿಪರೀತ ಹೆಚ್ಚಾಗಿದ್ದು, ದೂರು ನೀಡಿದರೂ ಪ್ರಯೋಜನಕ್ಕೆ ಬಂದಿಲ್ಲ. ಈ ಘಟನೆ ನಡೆದ ಬಳಿಕವೂ ಪಾಲಿಕೆಯ ಯಾರು ಕೂಡ ಇತ್ತ ಸುಳಿದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ನಗರದಲ್ಲಿ ಕಸ ವಿಲೇವಾರಿ ಸರಿಯಾದ ರೀತಿಯಲ್ಲಿ ಆಗದಿರುವುದು ಬೀದಿ ನಾಯಿಗಳ ಸಂಖ್ಯೆ ಮತ್ತು ಹಾವಳಿ ಹೆಚ್ಚಾಗುವಂತೆ ಮಾಡಿದೆ. ಬೆಳಗಿನ ಜಾವ ಮತ್ತು ರಾತ್ರಿಯ ಹೊತ್ತು ಜನರು ನಿರಾತಂಕವಾಗಿ ಅಡ್ಡಾಡದಂತಾಗಿದೆ. ಈ ಬಗ್ಗೆ ಪಾಲಿಕೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹೀಗೆ ಅನಾಹುತಗಳು ಸಂಭವಿಸಿದ ಮೇಲೆಯೇ ಎಚ್ಚೆತ್ತುಕೊಂಡರೆ ಏನು ಪ್ರಯೋಜನ ಎಂದು ಸ್ಥಳೀಯ ನಾಗರಿಕರು ಪಾಲಿಕೆ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+