ನೌಕರರ ಭವಿಷ್ಯನಿಧಿ ವ್ಯವಹಾರಕ್ಕೆ ಆಧಾರ್ ಅಗತ್ಯ

ಪ್ರಸಕ್ತ ಇರುವ 5 ಕೋಟಿಗೂ ಹೆಚ್ಚು ಇಪಿಎಫ್‌ಒ ಚಂದಾದಾರರು ಈ ವರ್ಷ ಜೂನ್ 30ರೊಳಗೆ ಸಂಸ್ಥೆಗೆ ತಮ್ಮ ಆಧಾರ್ ಸಂಖ್ಯೆಗಳನ್ನು ಒದಗಿಸಬೇಕಾಗಿದೆ. ಹೊಸ ಸದಸ್ಯರು ಕೂಡಾ 2013 ಮಾ.1 ರಿಂದ (Know Your Customer) ಕೆವೈಸಿ ಪರಿಶೀಲನೆಯ ಭಾಗವಾಗಿ ತಮ್ಮ ಆಧಾರ್ ಸಂಖ್ಯೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ.
2013 ಮಾ.1ರಂದು ಅಥವಾ ನಂತರ ಸೇರ್ಪಡೆಗೊಳ್ಳುವ ಹೊಸ ಸದಸ್ಯರಿಗೆ ಆಧಾರ್ ಸಂಖ್ಯೆಗಳನ್ನು ಕಡ್ಡಾಯವಾಗಿಸಲು ನಿರ್ಧರಿಸಲಾಗಿದೆ. ಈಗ ಇರುವ ಸದಸ್ಯರಿಗೆ ಸಂಬಂಧಿಸಿ ಕಾಲಮಿತಿ ನೆಲೆಯಲ್ಲಿ ಆಧಾರ ಸಂಖ್ಯೆಯನ್ನು ನಮೂದಿಸಿಕೊಳ್ಳಬೇಕು ಎಂದು ಕ್ಷೇತ್ರ ಸಿಬ್ಬಂದಿಗಳಿಗೆ ಕಳುಹಿಸಲಾದ ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
ನೌಕರರೊಬ್ಬ ಆಧಾರ್ ಸಂಖ್ಯೆಯನ್ನು ಹೊಂದಿಲ್ಲವಾದಲ್ಲಿ ಉದ್ಯೋಗದಾತನು ಸಂಸ್ಥೆಯ ಮಾರ್ಗದರ್ಶನಗಳನುಸಾರ ನೇಮಕಾತಿ ಐಡಿ ಒದಗಿಸಬಹುದು. ಈ ಇಐಡಿ(Enrolment Id )ಯನ್ನು ಕ್ರಮೇಣ ಆಧಾರ್ ಸಂಖ್ಯೆಯಾಗಿ ಪರಿವರ್ತಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.ಸಂಸ್ಥೆಯು ತನ್ನ ಪಿಂಚಣಿದಾರರ ಆಧಾರ್ ಸಂಖ್ಯೆಗಳನ್ನು ಬ್ಯಾಂಕ್‌ಗಳಿಂದ ಕೂಡಾ ಪಡೆಯಲಿದೆ.
ತನ್ನ ಸೇವೆಗಳನ್ನು ಸುಧಾರಣೆಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯ KYC ರುಜುವಾತು ಆಗಿ ಬಳಸಲು ಇಪಿಎಫ್‌ಒ ನಿರ್ಧರಿಸಿದೆ. ಪಿಂಚಣಿದಾರರು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕಿನ ಪಿಂಚಣಿ ಪಾವತಿಸುವ ಶಾಖೆಗೆ ಅಥವಾ ಇಪಿಎಫ್‌ಒ ಕಚೇರಿಗೆ ಸಲ್ಲಿಸಬಹುದು. ಇದಕ್ಕೆ ಮೊದಲು ಇಪಿಎಫ್‌ಒ ತನ್ನ ಸದಸ್ಯರ ಖಾತೆ ಸಂಖ್ಯೆಯನ್ನು ಆಧಾರ್ ಸಂಖ್ಯೆಯೊಂದಿಗೆ ಬದಲಿಸಲು ಯೋಚಿಸಿತ್ತು.
ತಮ್ಮ ಹೊಸ ಉದ್ಯೋಗದಾತನೊಂದಿಗಿನ ಹೊಸ ಖಾತೆಗೆ ಪಿಎಫ್ ಹಣವನ್ನು ವರ್ಗಾಯಿಸಲು ಅರ್ಜಿ ಸಲ್ಲಿಸಬೇಕಾಗುವ ಸದಸ್ಯರಿಗೆ ಅನನುಕೂಲವಾಗುವುದನ್ನು ತಪ್ಪಿಸಲು ಈ ಯೋಚನೆ ಮಾಡಲಾಗಿತ್ತು. ಇದೀಗ ಕೇಂದ್ರೀಯ ಡಾಟಾಬೇಸ್ ಒಂದನ್ನು ಸೃಷ್ಟಿಸಲು ಇಪಿಎಫ್‌ಒ ಮುಂದಾಗಿದೆ.
ಇದರಲ್ಲಿ ಎಲ್ಲಾ ಸದಸ್ಯರು ಒಂದು ವಿಶಿಷ್ಟ ಖಾತೆ ಸಂಖ್ಯೆಯನ್ನು ಹೊಂದಲಿದ್ದು ಉದ್ಯೋಗ ಬದಲಿಸುವ ಸಂದರ್ಭದಲ್ಲಿ ಪಿಎಫ್ ಹಣವನ್ನು ಇನ್ನೊಂದಕ್ಕೆ ವರ್ಗಾಸಬೇಕಾದ ಅಗತ್ಯ ಬೀಳುವುದಿಲ್ಲ.(ಪಿಟಿಐ)
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications