ಬೆಂಗಳೂರಿನಲ್ಲಿ ಮಾಧ್ಯಮ ಘಟಾನುಘಟಿಗಳ ಚರ್ಚೆ

ಬೆಂಗಳೂರು, ಜ. 24 : ದೃಶ್ಯ ಮಾಧ್ಯಮದಲ್ಲಿ ಐಂದ್ರಿಕ ಸುಖ ಮತ್ತು ಅಸಭ್ಯತೆಯ ನಡುವೆ ಗೆರೆ ಎಳೆಯಲು ಸಾಧ್ಯವೆ? ನಮ್ಮ ಉತ್ಪನ್ನ ಮತ್ತು ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಅಂತರ್ ಚಾನಲ್ ಮಾರ್ಕೆಟಿಂಗ್ ಈಗಿನ ಅಗತ್ಯತೆಯೆ? ಸಿನೆಮಾ ನಿರ್ಮಾಣ ಕಲೆಯಾ, ಕೌಶಲ್ಯವೆ ಅಥವಾ ಬಾಕ್ಸ್ ಆಫೀಸಾ?

ಇಂಥ ಅನೇಕ ಗಹನವಾದ ಮತ್ತು ಚರ್ಚಾತ್ಮಕ ವಸ್ತುಗಳನ್ನಿಟ್ಟುಕೊಂಡು ಸಿಂಬಯಾಸಿಸ್ ಇನ್‌ಸ್ಟಿಟ್ಯೂಟ್ ಮೀಡಿಯಾ ಅಂಡ್ ಕಮ್ಯೂನಿಕೇಷನ್ (SIMC - B)ನಲ್ಲಿ CQ'13 ಎಂಬ ವಿಚಾರ ಸಂಕಿರಣವನ್ನು ಗುರುವಾರ, ಜ.24ರಂದು ಇಟ್ಟುಕೊಂಡಿದೆ. ಖ್ಯಾತ ಪತ್ರಕರ್ತ ಡಾ. ದಿಲೀಪ್ ಪಡಗಾಂವ್‌ಕರ್ ಅವರ ಮುಂದಾಳತ್ವದಲ್ಲಿ ಸಂವಹನಾ ಮಾಧ್ಯಮದ ಘಟಾನುಘಟಿಗಳೆಲ್ಲ ಒಂದೆಡೆ ಕಲೆತು ಚರ್ಚಿಸುತ್ತಿದ್ದಾರೆ.

ನೂಪುರ್ ಬಸು (ಸ್ವತಂತ್ರ ಪತ್ರಕರ್ತೆ ಮತ್ತು ಸಿನೆಮಾ ನಿರ್ಮಾಪಕಿ), ಅರುಣಾ ಸಿ. ನ್ಯೂಟನ್ (ಉಪಾಧ್ಯಕ್ಷೆ, ಇನ್ಫೋಸಿಸ್ ಟೆಕ್ನಾಲಜಿ), ಶ್ರೀವಿದ್ಯಾ ವರ್ಚಸ್ವಿ (ಆರ್ಟ್ ಆಫ್ ಲೀವಿಂಗ್ ಸಿಬ್ಬಂದಿ), ಆಶಾ ಎಸ್ (ಸಂಸ್ಥಾಪಕಿ ಮತ್ತು ಸಿಇಓ, ಫ್ರೆಸ್ಕೋ ಸೋಷಿಯಲ್), ಕೆ. ಗಿರಿಪ್ರಕಾಶ್ (ಬ್ಯೂರೋ ಚೀಫ್, ಹಿಂದು ಬಿಸಿನೆಸ್ ಲೈನ್) ಮುಂತಾದ ಮೀಡಿಯಾ ದಿಗ್ಗಜರು ತಮ್ಮ ಅನುಭವದ ಹೂರಣವನ್ನು ಎರಕಹೊಯ್ಯಲಿದ್ದಾರೆ.

Mega communication carnival in Bangalore

ದೃಶ್ಯ ಮಾಧ್ಯಮದಲ್ಲಿ ಐಂದ್ರಿಕ ಸುಖ ಮತ್ತು ಅಸಭ್ಯತೆಯ ನಡುವೆ ಗೆರೆ ಎಳೆಯಲು ಸಾಧ್ಯವೆ? ಎಂಬ ವಿಷಯ ಕುರಿತು ಗಿರಿಪ್ರಕಾಶ್ ವಿಚಾರ ಮಂಡನೆ ಮಾಡಲಿದ್ದಾರೆ. ಸಿನೆಮಾ ನಿರ್ಮಾಣ ಕಲೆ ಹೌದಾ ಅಲ್ಲವಾ ಎಂಬ ವಿಷಯ ಕುರಿತ ಚರ್ಚಾ ವೇದಿಕೆಯಲ್ಲಿ ಮಾಸ್ ಕಮ್ಯೂನಿಕೇಷನ್ ಎಚ್ಓಡಿ ಪದ್ಮಜಾ ಷಾ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ನಿರ್ದೇಶಕ ನರಹರಿ ರಾವ್, ಕನ್ನಡದ ಖ್ಯಾತ ರಂಗಭೂಮಿ ಕಲಾವಿದ ಪ್ರಕಾಶ್ ಬೆಳವಾಡಿ ಮುಂತಾದವರು ಭಾಗವಹಿಸಲಿದ್ದಾರೆ.

ಇನ್ನೂ ಹಲವಾರು ವಿಷಯಗಳ ಬಗ್ಗೆ ಇಡೀ ದಿನ ಚರ್ಚೆ ನಡೆಯಲಿದೆ. ಈ ಸೆಮಿನಾರಿನಲ್ಲಿ, ಭಾರತದ ನಂ.1 ಪ್ರಾಂತೀಯ ಭಾಷಾ ಪೋರ್ಟಲ್ ಆಗಿರುವ ಒನ್ಇಂಡಿಯಾ ಕೂಡ ಸ್ಟಾಲ್ ತೆರೆದಿದೆ. ಈ ವಿಚಾರ ಸಂಕಿರಣದ ಬಗ್ಗೆ ಇನ್ನೂ ಹೆಚ್ಚಿನ ವಿಚಾರ ತಿಳಿಯಬೇಕಿದ್ದರೆ .(ಒನ್ಇಂಡಿಯಾ ಕನ್ನಡ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+