ವಾಜಪೇಯಿ, ಬಿಎಸ್‌ವೈಗೆ ಹೋಲಿಕೆ ಮಾಡಿದ ಸಿಟಿ ರವಿ

vajpayee-never-greedy-for-power-like-yeddyurapa-ct-ravi
ಚಿಕ್ಕಮಗಳೂರು, ಜ.22: ಬಿಜೆಪಿ ಆಡಳಿತ ಅವಸಾನದ ಅಂಚಿಗೆ ಬಂದು ನಿಂತಿದೆ. ಒಬ್ಬೊಬ್ಬರೇ ವಿದಾಯಯ ಮಾತುಗಳನ್ನಾಡುತ್ತಿದ್ದಾರೆ. ಒಬ್ಬೊಬ್ಬರ ರಾಜೀನಾಮೆಗೂ ಒಂದೊಂದು ಮುಖವಿದ್ದಂತೆ ಕಾಣುತ್ತಿದೆ. ಆದರೆ ಅನೇಕರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸರಕಾರದಿಂದ ನಿರ್ಗಮಿಸುತ್ತಿರುವುದು ಪರಿಸ್ಥಿತಿಯ ವ್ಯಂಗ್ಯವೇ ಸರಿ.

ಬಿಜೆಪಿ ಬಿಟ್ಟು ಹೋಗಲು ಹವಣಿಸುತ್ತಿರುವ ಶಾಸಕ/ಸಚಿವರು ರಾಜೀನಾಮೆ ಪ್ರಸ್ತಾಪವನ್ನು ಮುಂದಿಡುತ್ತಿರುವುದು ಸಾಮಾನ್ಯ. ಆದರೆ ಬಿಜೆಪಿ ಮಂತ್ರಿಯೇ ತಾನಿನ್ನು ಸಚಿವನಾಗಿರೋದು ಕೇವಲ ಇಪ್ಪತ್ತೆಂಟೇ ದಿನ ಎಂದು ಘೋಷಿಸಿದ್ದಾರೆ.

ಹೀಗೆ ರಾಜೀನಾಮೆ ವಿಷಯವನ್ನು ಪ್ರಕಟಿಸಿದ ಉನ್ನತ ಶಿಕ್ಷಣ ಸಚಿವ ಸಿಟಿ ರವಿ ತನ್ಮೂಲಕ, ರಾಜ್ಯ ವಿಧಾನಸಭೆ ಚುನಾವಣೆ ಸನ್ನಿಹಿತವಾಗಿದೆ ಎಂಬ ಸುಳಿವನ್ನೂ ನೀಡಿದ್ದಾರೆ.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಮಾತನಾಡಿದ ಅವರು, ತಾವಿನ್ನು ಸಚಿವರಾಗಿರುವುದು 28 ದಿನವಷ್ಟೇ. ಸದ್ಯದಲ್ಲೇ ಚುನಾವಣಾ ವೇಳಾಪಟ್ಟಿ ಪ್ರಕಟಗೊಳ್ಳಲಿದೆ. ಅಷ್ಟರಲ್ಲಿ ಹೆಚ್ಚು ಒಳ್ಳೆಯ ಕೆಲಗಳನ್ನು ಮಾಡಬೇಕು ಎಂದು ಅವರು ಆಶಿಸಿದರು.

ಮೊದಲ ಬಾರಿಗೆ ಅಧಿಕಾರ ಹಿಡಿದಿದ್ದರಿಂದ ಅನುಭವದ ಕೊರತೆ ಎದುರಾಗಿತ್ತು. ಇದರಿಂದ ಸಣ್ಣಪುಟ್ಟ ತಪ್ಪುಗಳಾಗಿವೆ. ಆದರೆ ನೂರುಪಟ್ಟು ಒಳ್ಳೆಯ ಕೆಲಸಗಳಾಗಿವೆ. ಈ ಕೆಲಸಗಳನ್ನು ಮುಂದಿಟ್ಟುಕೊಂಡು ಮತಯಾಚಿಸಲು ಮುಂದಾಗಬೇಕು ಎಂದು ರವಿ ಹೇಳಿದರು.

ವಾಜಪೇಯಿ, ಯಡಿಯೂರಪ್ಪಗೆ ಹೋಲಿಕೆ:
ಬಿಜೆಪಿ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಅನಾಮತ್ತು 40 ವರ್ಷ ಕಾಲ ವಿರೋಧ ಪಕ್ಷದಲ್ಲೇ ಕಾರ್ಯ ನಿರ್ವಹಿಸಿದರು. ಅಧಿಕಾರ ಕೊಡಿಸಲು ಅಥವಾ ಅಧಿಕಾರ ಹಿಡಿಯಲು ಅವರೆಂದಿಗೂ ಮನಸ್ಸು ಮಾಡಲಿಲ್ಲ. ಅಧಿಕಾರ ದಕ್ಕಿಸಿಕೊಳ್ಳಲು ಅವರೆಂದೂ ಅನ್ಯಮಾರ್ಗ ಹಿಡಿಯಲಿಲ್ಲ. ರಾಜ ಮಾರ್ಗದಲ್ಲಿಯೇ ನಡೆದರು ಎಂದು ಹೆಸರು ಹೇಳದೆಯೇ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ ಯಡಿಯೂರಪ್ಪಗೆ ಸಚಿವ ರವಿ ಕುಟುಕಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+