ಸಾಲ ತಿರುಗಿಸದ ವ್ಯಕ್ತಿಯ ಪತ್ನಿಯ ಅತ್ಯಾಚಾರ

Woman abused as husband fails to repay loan
ಅಹ್ಮದಾಬಾದ್, ಜ. 22 : ಆಘಾತಕಾರಿ ಘಟನೆಯೊಂದರಲ್ಲಿ, ಮಾಡಿದ ಸಾಲವನ್ನು ಹಿಂದಿರುಗಿಸಲು ಗಂಡ ವಿಫಲನಾಗಿದ್ದಕ್ಕೆ, ಸಾಲ ನೀಡಿದವ ಸಾಲ ಪಡೆದವನ ಹೆಂಡತಿಯನ್ನು ಅಪಹರಿಸಿ ಆಕೆಯ ಮೇಲೆ ಐದಾರು ದಿನಗಳ ಕಾಲ ಅತ್ಯಾಚಾರವೆಸಗಿದ್ದಾನೆ.

ಇದಕ್ಕೆ ಸಂಬಂಧಿಸಿದಂತೆ ಅತ್ಯಾಚಾರವೆಸಗಿದ ಸಾಲ ನೀಡಿದ ವಿಶಾಲ್ ಗುಪ್ತಾ ಮತ್ತು ಈ ಕೃತ್ಯವೆಸಗಲು ಸಹಾಯ ಮಾಡಿದ ಶಭಾ ಖಾನ್ ಮತ್ತು ಬಿಲಾಲ್ ಎಂಬ ಇಬ್ಬರ ಮೇಲೆ ದೂರು ದಾಖಲಾಗಿದ್ದು, ಅತ್ಯಾಚಾರವೆಸಗಿದ ಗುಪ್ತಾ ತಲೆಮರೆಸಿಕೊಂಡಿದ್ದು, ಉಳಿದಿಬ್ಬರನ್ನು ಭಾನುವಾರ ಜ.20ರಂದು ಬಂಧಿಸಲಾಗಿದೆ.

ಘಟನೆಯ ವಿವರ : ಗೃಹಿಣಿ ಸವಿತಾ(ಹೆಸರು ಬದಲಿಸಲಾಗಿದೆ)ಳ ಗಂಡ ನರೋಡಾದಲ್ಲಿ ಆಮ್ಲೇಟ್ ತಯಾರಿಸಿ ಮಾರುವ ಅಂಗಡಿ ಇಟ್ಟುಕೊಂಡಿದ್ದಾನೆ. ಆತ ಗುಪ್ತಾನಿಂದ ಶೇ.10 ಬಡ್ಡಿಯ ಮೇಲೆ 1 ಲಕ್ಷ ರು. ಸಾಲ ಪಡೆದಿದ್ದ. ಆದರೆ, ಕಾರಣಾಂತರಗಳಿಂದ ಆತನಿಗೆ ಸಂಪೂರ್ಣ ಹಣವನ್ನು ತಿರುಗಿಸಲು ಆಗಿರಲಿಲ್ಲ.

ಇದರಿಂದ ಸಿಟ್ಟಿಗೆದ್ದಿದ್ದ ಗುಪ್ತಾ ಗಂಡ ಮನೆಯಲ್ಲಿ ಇಲ್ಲದಾಗ ಮನೆಗೆ ನುಗ್ಗಿ ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗಿಬಿಟ್ಟ ಮತ್ತು ಅವನ್ನು ವಾಪಸ್ ಪಡೆಯಬೇಕೆಂದಿದ್ದರೆ ನರೋಲ್ ವೃತ್ತಕ್ಕೆ ಬರಬೇಕೆಂದು ಗೃಹಿಣಿಗೆ ತಿಳಿಸಿದ್ದ. ಆ ಸ್ಥಳಕ್ಕೆ ಹೋದ ಆಕೆಯನ್ನು ಗುಪ್ತಾ ಅಪಹರಿಸಿ ತನ್ನ ಬಳಿ ಇಟ್ಟುಕೊಂಡು, ಪೂರ್ಣ ಹಣ ನೀಡದಿದ್ದರೆ ಆಕೆಯನ್ನು ಕೊಲ್ಲುವುದಾಗಿ ಬೆದರಿಸಿದ್ದಾನೆ.

ನಂತರ ಆಕೆಯನ್ನು ಫತೇವಾಡಿ ಎಂಬ ಸ್ಥಳಕ್ಕೆ ಕರೆದುಕೊಂಡು ಹೋಗಿ ಶಭಾ ಮತ್ತು ಬಿಲಾಲ್ ಎಂಬುವವರ ಮನೆಯಲ್ಲಿ ಇರಿಸಿದ್ದಾನೆ. ಆಕೆಗೆ ಬಲವಂತವಾಗಿ ಮತ್ತು ಬರಿಸುವ ವಸ್ತು ಸೇರಿಸಿದ ಮದ್ಯ ಕುಡಿಸಿ ಇಬ್ಬರೂ ಜಾಗ ಖಾಲಿ ಮಾಡಿದ್ದಾರೆ. ಆಗ ಪಾನಮತ್ತನಾಗಿದ್ದ ವಿಶಾಲ್ ಗುಪ್ತಾ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ಇದು ಸುಮಾರು ಐದಾರು ದಿನಗಳ ಕಾಲ ನಡೆದಿದೆ. ಅಲ್ಲಿಂದ ಆಕೆಯನ್ನು ಉದಯ್‌ಪುರಕ್ಕೆ ಕರೆದುಕೊಂಡು ಹೋಗಿ ಅಲ್ಲಿಯೂ ಅತ್ಯಾಚಾರವೆಸಗಿದ್ದಾನೆ. ಆಕೆ ಮೈಮೇಲಿದ್ದ ಚಿನ್ನದ ಉಂಗುರ ಮತ್ತು ಇತರ ಆಭರಣಗಳನ್ನು ಕಿತ್ತುಕೊಂಡಿದ್ದಾರೆ. ತನ್ನ ಹೆಂಡತಿ ಮತ್ತು ಆರೋಪಿಗಳು ಇದ್ದ ಸ್ಥಳವನ್ನು ಹೇಗೋ ಪತ್ತೆ ಹಚ್ಚಿದ ಗಂಡ, ಹೆಂಡತಿಯನ್ನು ಅಪಹರಿಸಿದ ದೂರನ್ನು ನೀಡಿದ್ದಾನೆ. ತಲೆಮರೆಸಿಕೊಂಡಿರುವ ಗುಪ್ತಾನ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ. ಗೃಹಿಣಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+