ಗಡ್ಕರಿ ರಾಜೀನಾಮೆ, ರಾಜನಾಥ್ ಸಿಂಗ್ ನೂತನ ಅಧ್ಯಕ್ಷ

Rajnath Singh chosen BJP president post
ನವದೆಹಲಿ, ಜ 22: ಅತ್ಯಂತ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪಕ್ಷದ ಹಿರಿಯ ನಾಯಕ ರಾಜನಾಥ್ ಸಿಂಗ್ ಬಿಜೆಪಿಯ ನೂತನ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಬರಬೇಕಾಗಿದೆ.

ಈ ಹಿಂದೆಯೂ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿರುವ ರಾಜನಾಥ್ ಸಿಂಗ್ ಬರಲಿರುವ 9 ರಾಜ್ಯದ ವಿಧಾನಸಭೆ ಚುನಾವಣೆಗಳು ಮತ್ತು 2014ರ ಲೋಕಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಈ ಅಚ್ಚರಿಯ ಆಯ್ಕೆಯ ಹೆಜ್ಜೆ ಇಟ್ಟಿದೆ ಎನ್ನಲಾಗಿದೆ.

ಪಕ್ಷದ ಹಿರಿಯ ನಾಯಕರುಗಳಾದ ಅರುಣ್ ಜೆಟ್ಲೆ ಮತ್ತು ಯಶವಂತ್ ಸಿನ್ಹಾ ಕೂಡಾ ಅಧ್ಯಕ್ಷ ಪದವಿಗೆ ಆಕಾಂಕ್ಷಿಗಳಾಗಿದ್ದರು.

ಇಂದು (ಜ 22) ಬೆಳಗ್ಗೆ ಕೂಡಾ ನಿತಿನ್ ಗಡ್ಕರಿ ಒಡೆತನದ ಪೂರ್ತಿ ಸಂಸ್ಥೆಯ 8 ಕಚೇರಿ ಮೇಲೆ ಆದಾಯ ತೆರಿಗೆಯ ದಾಳಿ ನಡೆದಿತ್ತು ಎನ್ನುವುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ.

ಅಧ್ಯಕ್ಷ ಪದವಿಯ ತೀವ್ರ ಆಕಾಂಕ್ಷಿಯಾಗಿದ್ದ ಅರುಣ್ ಜೆಟ್ಲೆಯವರ ಮುಂದಿನ ನಡೆ ಏನೆಂದು ಸದ್ಯಕ್ಕೆ ತಿಳಿದು ಬಂದಿಲ್ಲ. ರಾಜನಾಥ್ ಸಿಂಗ್ ಆಯ್ಕೆಗೆ RSS ಗ್ರೀನ್ ಸಿಗ್ನಲ್ ನೀಡಿದೆ.

ಎರಡನೇ ಅವಧಿಗೆ ಅಧ್ಯಕ್ಷ ಪದವಿಯ ಆಕಾಂಕ್ಷಿಯಾಗಿದ್ದ ನಿತಿನ್ ಗಡ್ಕರಿ ರಾಜೀನಾಮೆ ನೀಡಿದ್ದಾರೆ ಎನ್ನುವ ಸುದ್ದಿ ಖಚಿತ ಮೂಲಗಳಿಂದ ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+