ಬಿಎಸ್‌ವೈ ಸರ್ವಾಧಿಕಾರಿ: ಮದನಪಟೇಲ್ ರಾಜೀನಾಮೆ

ಹಾವೇರಿಯಲ್ಲಿ ನಡೆದ ಐತಿಹಾಸಿಕ ಸಮಾವೇಶ ಸೇರಿದಂತೆ ಇತ್ತೀಚೆಗೆ ಕೆಜೆಪಿ ಜತೆ ಗಾಢವಾಗಿ ಗುರುತಿಸಿಕೊಳ್ಳುತ್ತಿದ್ದ ನಟ, ನಿರ್ಮಾಪಕ ಹಾಗೂ ನಿರ್ದೇಶಕ ಮದನ್ ಪಟೇಲ್ ಕೆಜೆಪಿಯಿಂದ ದೂರವಾಗಿದ್ದಾರೆ.
ಇಂದು ಶನಿವಾರ ಪಕ್ಷಕ್ಕೆ ರಾಜೀನಾಮೆ ನೀಡಿ, ತದನಂತರ ಪತ್ರಿಕಾಗೋಷ್ಠಿ ನಡೆಸಿ ಇತ್ತೀಚೆಗೆ ಕೆಜೆಪಿಯಲ್ಲಿ/ಯಡಿಯೂರಪ್ಪ ವಿಷಯದಲ್ಲಿ ಏನೆಲ್ಲ ನಡೆಯಿತು ಎಂಬುದನ್ನು ಸಾಧ್ಯಂತವಾಗಿ ತಿಳಿಸುತ್ತೇನೆ ಎಂದಿದ್ದಾರೆ ಮದನ್.
ಇದೇ ವೇಳೆ, ತಾವು ರಾಜೀನಾಮೆ ನೀಡುತ್ತಿರುವುದಕ್ಕೆ ಕಾರಣ ಏನೆಂಬುದುನ್ನು ಆಪ್ತರ ಮುಂದೆ ಬಹಿರಂಗಪಡಿಸಿರುವ ಮದನ್ ಪಟೇಲ್ 'ಆ ಯಡಿಯೂರಪ್ಪದು ಸರ್ವಾಧಿಕಾರಿ ಧೋರಣೆ ರೀ. ಆತ ಡಿಕ್ಟೇಟರ್. ಅವಯ್ಯ ದೂರ್ವಾಸ ಮುನಿ. ಆಯಪ್ಪನ ಜತೆ ಏಗೋದು ಕಷ್ಟ ಕಷ್ಟ' ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ. ಇನ್ನೂ ಏನೇನು ಎಂಬುದನ್ನು ಬಹಿರಂಗವಾಗಿ ಶನಿವಾರ ಹೇಳುತ್ತೇನೆ' ಎಂದೂ ಮದನ್ ಹೇಳಿದ್ದಾರೆ.
ಮದನ್ ಪಟೇಲ್ ಹೇಳುತ್ತಿರುವುದನ್ನು ನೋಡಿದರೆ ಯಡಿಯೂರಪ್ಪಗೆ ಅವರ ಸರ್ವಾಧಿಕಾರಿ/ಮುಂಗೋಪಿ ವ್ಯಕ್ತಿತ್ವವೇ ಮಾರಕವಾಗುವ ಸಾಧ್ಯತೆಯಿದೆ. ಏಕೆಂದರೆ ಇದು ಒಬ್ಬ ಮದನ್ ಹೇಳಿರುವ ವಿಚಾರವಲ್ಲ. ಯಡಿಯೂರಪ್ಪ ಬೆಂಬಲಿಗರ ಪೈಕಿ ಬಹಳಷ್ಟು ಮಂದಿ ಯಡಿಯೂರಪ್ಪಗೆ ಇದೇ ಸರ್ಟಿಫಿಕೇಟ್ ನೀಡುತ್ತಾರೆ.












Click it and Unblock the Notifications