ಆದಿಚುಂಚನಗಿರಿ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ

ಕ್ಷೇತ್ರದ ಕಾಲಭೈರವೇಶ್ವರ ದೇಗುಲದ ಅನುಭವ ಮಂಟಪದಲ್ಲಿ 'ನಾಥ' ಸಂಪ್ರದಾಯದ ಪ್ರಕಾರ ಕಿರಿಯ ಸ್ವಾಮೀಜಿ ನಿರ್ಮಲಾನಂದ ಶ್ರೀಗಳು ಧಾರ್ಮಿಕ ವಿಧಿವಿಧಾನ ಪೂರೈಸಲಿದ್ದಾರೆ. ಶ್ರೀಗಳ ಕಳೇಬರವನ್ನು ಮಣ್ಣಿನಲ್ಲಿ ಹೂಳಲಾಗುವುದು.
ಬೆಂಗಳೂರು ವಿಜಯನಗರದ ಶಾಖಾ ಮಠದಲ್ಲಿ ಇಂದು ಬೆಳಗ್ಗೆ 10ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. 10.15ಕ್ಕೆ ಮೆರವಣಿಗೆ ಮೂಲಕ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ವಿಜಯನಗರ ಮಠ - ಡಾ. ರಾಜಕುಮಾರ್ ಸಮಾಧಿ - ಹೇಸರಘಟ್ಟ ಸರ್ಕಲ್ - ನೆಲಮಂಗಲ ಮೇಲ್ಸೇತುವೆ - -ಕುಣಿಗಲ್ - ಯಡಿಯೂರು - ಬೆಳ್ಳೂರು ಕ್ರಾಸ್ ಮೂಲಕ ಆದಿಚುಂಚಂಚನಗಿರಿ ಮಠಕ್ಕೆ ಸಾಗಲಿದೆ.
ಪಾರ್ಥಿವ ಶರೀರದ ಮೆರವಣಿಗೆಯ ತಯಾರಿಯನ್ನು ಉಪಮುಖ್ಯಮಂತ್ರಿ ಅಶೋಕ್ ಮತ್ತು ಬೆಂಗಳೂರು ಪೋಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಖುದ್ದು ಪರಿಶೀಲಿಸಿದ್ದಾರೆ.












Click it and Unblock the Notifications