ನೀರಸ ಪ್ರತಿಕ್ರಿಯೆ: ಪಾದಯಾತ್ರೆಗೆ ಕಾಂಗ್ರೆಸ್ ಬೈಬೈ

State Congress intended to stop Padayatre before assembly election
ಬೆಂಗಳೂರು, ಜ 10: ಅಬ್ಬರದಿಂದ ಆರಂಭವಾದ 'ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ' ಪಾದಯಾತ್ರೆಗೆ ನಿರೀಕ್ಷಿತ ಜನಬೆಂಬಲ ಸಿಗದ ಹಿನ್ನಲೆಯಲ್ಲಿ ಪಾದಯಾತ್ರೆಯ ಸಹವಾಸವೇ ಬೇಡ ಎನ್ನುವ ತೀರ್ಮಾನಕ್ಕೆ ಕಾಂಗ್ರೆಸ್ ಬಂದಿದೆ ಎನ್ನಲಾಗಿದೆ.

ಜನವರಿ 7ರಿಂದ ಆರಂಭವಾಗಿರುವ ಹೊಸಪೇಟೆಯಿಂದ ಕೂಡಲ ಸಂಗಮದವರಿನ ಪಾದಯಾತ್ರೆಗೆ ಮೊದಲ ದಿನ ಬಿಟ್ಟರೆ ಕಾಂಗ್ರೆಸ್ ಪಕ್ಷ ನಿರೀಕ್ಷಿಸದಷ್ಟು ಜನರ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಅಲ್ಲದೇ ರಾಜ್ಯದ ಪ್ರಮುಖ ನಾಯಕರು ಪಾದಯಾತ್ರೆಗೆ ಆಬ್ಸೆಂಟ್ ಆಗುತ್ತಿದ್ದಾರೆ.

ಹೀಗಾಗಿ ಈಗ ಆರಂಭಿಸಿರುವ ಪಾದಯಾತ್ರೆಯನ್ನು ಹೇಗಾದರೂ ಮುಗಿಸಿ, ಬರುವ ಚುನಾವಣೆಯ ತನಕ ಯಾವುದೇ ಪಾದಯಾತ್ರೆ ಹಮ್ಮಿಕೊಳ್ಳುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

ಪಾದಯಾತ್ರೆಯ ಎರಡನೇ ಹಂತದಲ್ಲಿ ಫೆಬ್ರವರಿ 3ರಿಂದ 9ರವರೆಗೆ ಬಸವ ಕಲ್ಯಾಣದಿಂದ ಜೇವರ್ಗಿವರೆಗೆ ಮತ್ತು ಉಳ್ಳಾಲದಿಂದ ಉಡುಪಿ ತನಕ ಮತ್ತು ಕೊನೆಯ ಹಂತದಲ್ಲಿ ಮೈಸೂರಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಲು ಕಾಂಗ್ರೆಸ್ ನಿರ್ಧರಿಸಿತ್ತು.

ಚುನಾವಣೆ ಸಮೀಪಿಸುತ್ತಿರುವುದರಿಂದ ಪಾದಯಾತ್ರೆ ಬದಲಿಗೆ ಬೇರೆ ಪ್ರಚಾರ ಮಾರ್ಗ ಬಳಸುವಂತೆ ಹೈಕಮಾಂಡ್‌ ಸೂಚನೆ ನೀಡಿದೆ ಎನ್ನುವ ಕಾರಣ ಒಡ್ಡಿ ಪಾದಯಾತ್ರೆ ಕೈಬಿಡಲು ಪಕ್ಷ ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

'ಕಾಂಗ್ರೆಸ್ ನಡಿಗೆ- ಕೃಷ್ಣೆಯ ಕಡೆಗೆ' ಪಾದಯಾತ್ರೆಯ ಅಂಗವಾಗಿ ಮೂರನೇ ದಿನ (ಜ 9) ಕೊಪ್ಪಳ ತಾಲೂಕು ಟಣಕನಕಲ್ಲು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪರಮೇಶ್ವರ್, ಬಿಜೆಪಿ ಹಾಗೂ ಜೆಡಿಎಸ್ಸಿನ ಶಾಸಕರು ಪಕ್ಷ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಕಣ್ಮುಚ್ಚಿಕೊಂಡು ಇತರ ಪಕ್ಷಗಳ ನಾಯಕರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷಾಂತರಿಗಳಿಗೆ ಸಂದೇಶ ರವಾನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+