15ನಿಮಿಷದಲ್ಲಿ ಎಷ್ಟು ಮಂದಿ ಹಿಂದೂಗಳನ್ನು ಕೊಲ್ಲುತ್ತೀರಿ

Court remanded 14-day judicial custody to Akbaruddin Owaisi
ಹೈದರಾಬಾದ್, ಜ 10: ನಿಮ್ಮ ತಂದೆ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ನಿಮ್ಮ ಮತ್ತು ನಿಮ್ಮ ಕುಟುಂಬದ ಏಳಿಗೆಗೆ ದೇಶ ಸಾಕಷ್ಟು ನೀಡಿದೆ ಎನ್ನುವ ಕನಿಷ್ಠ ಬುದ್ದಿ ನಿಮಗಿಲ್ಲವೆ?

15 ನಿಮಿಷದಲ್ಲಿ ಎಷ್ಟು ಮಂದಿ ಹಿಂದೂಗಳನ್ನು ಕೊಲ್ಲುತ್ತೀರಿ? ಇನ್ನೊಂದು ಧರ್ಮದ ವಿರುದ್ದ ಮಾತನಾಡುವುದು ಸರಿಯೇ ? ಹೀಗೆ ಆಂಧ್ರಪ್ರದೇಶ ಹೈಕೋರ್ಟ್ ಧರ್ಮಾಂಧ ಶಾಸಕ ಅಕ್ಬರುದ್ದೀನ್ ಒವೈಸಿಗೆ ಮಂಗಳಾರತಿ ಮಾಡಿದೆ.

ನೂರಾರು ಮುಗ್ದ ಜೀವಗಳನ್ನು ಬಲಿತೆಗೆದುಕೊಂಡ ಉಗ್ರ ಅಜ್ಮಲ್ ಕಸಬ್ ಪರ ಮಾತನಾಡುತ್ತೀರಾ. ನೀವೊಬ್ಬ ಜನರಿಂದ ಆಯ್ಕೆಯಾದ ಪ್ರತಿನಿಧಿ ಅನ್ನೋದನ್ನು ಮರೀಬೇಡಿ.

ಇನ್ನೊಂದು ಧರ್ಮದ ವಿರುದ್ದ ಅವಹೇಳನಕಾರಿ ಭಾಷಣ ಮಾಡುವುದು ದೇಶದ್ರೋಹವಲ್ಲವೇ ಎಂದು ನರಸಿಂಹ ರೆಡ್ಡಿ ಅವರಿದ್ದ ನ್ಯಾಯಪೀಠ ಒವೈಸಿಯನ್ನು ತರಾಟೆಗೆ ತೆಗೆದುಕೊಂಡಿದೆ.

ಹಿಂದೂ ವಿರೋಧಿ ಭಾಷಣ ಮಾಡಿದ ಪ್ರಕರಣದ ಸಂಬಂಧ ತನ್ನ ವಿರುದ್ದ ದಾಖಲಾಗಿರುವ ಎಫ್ಐಆರ್ ರದ್ದು ಮಾಡಬೇಕು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಾನು ಮಾಡಿದ ಭಾಷಣದ ತುಣುಕುಗಳನ್ನು ತೆಗೆಯಲು ನಿರ್ದೇಶನ ನೀಡ ಬೇಕೆಂದು ಒವೈಸಿ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.

ಒವೈಸಿಗೆ ಛೀಮಾರಿ ಹಾಕಿದ ಕೋರ್ಟ್, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಆಂಧ್ರ ಪೊಲೀಸರು ಒವೈಸಿಯನ್ನು ಆದಿಲಾಬಾದ್ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

ಒವೈಸಿಗೆ ಖೈದಿ ನಂಬರ್ 7546 ನೀಡಲಾಗಿದ್ದು ಜನವರಿ 22ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ.

ಕೋರ್ಟ್ ಮುಂದೆ ಅಂಗಿ ಬಿಚ್ಚಿದ ಒವೈಸಿ ಈ ಹಿಂದೆ ನನಗೆ ಗುಂಡಿನ ದಾಳಿ ನಡೆದಿದೆ ಉತ್ತಮ ಚಿಕಿತ್ಸೆಗಾಗಿ ಚಂಚಲಗೂಡ ಜೈಲಿಗೆ ಕಳುಹಿಸಬೇಕೆಂದು ಮನವಿ ಮಾಡಿದ್ದಾನೆ.

ಈ ಮಧ್ಯೆ, ಒವೈಸಿ ಅಭಿಮಾನಿಗಳು ಎರಡು ಸುದ್ದಿವಾಹಿನಿಯ ಓಬಿ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದ್ದಾರೆ.

ಅಕ್ಬರುದ್ದೀನ್ ಒವೈಸಿ ಸಹೋದರ ಮತ್ತು ಸಂಸದನೂ ಆಗಿರುವ ಅಸಾವುದ್ದೀನ್ ಒವೈಸಿ ಹಿಂದೂ ವಿರೋಧಿ ಭಾಷಣದ ಬಗ್ಗೆ ಕ್ಷಮೆ ಯಾಚಿಸಲು ನಿರಾಕರಿಸಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+