ಟಿವಿ ನಿರೂಪಕಿಯರೂ ಅತ್ಯಾಚಾರಕ್ಕೆ ಕಾರಣಕರ್ತರು

TV Anchors dress is also provocative for molestation Ayanur Manjunath
ಶಿವಮೊಗ್ಗ, ಜ.10: ದಂಡುಪಾಳ್ಯದ ಗುಂಗಿನಲ್ಲಿ ಮಾತನಾಡಿರುವ BJP ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ್ ಅವರು, ದೆಹಲಿಯಲ್ಲಿ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಹೇಳಿಕೆಯೊಂದು ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.

'ಕೆಲ ಟಿವಿ ಆ್ಯಂಕರ್‌ಗಳು ತೊಡುವ ಬಟ್ಟೆ, ಅವರ ಹಾವಭಾವ ನೋಡಿದರೆ ಅವರೂ ಕೂಡ ಅತ್ಯಾಚಾರಕ್ಕೆ ಕಾರಣಕರ್ತರೇ ಎಂಬ ಅನುಮಾನ ಬರುತ್ತದೆ' ಎಂದು ಆಯನೂರು ಮಂಜುನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬುಧವಾರ ಶಿವಮೊಗ್ಗ ನಗರದ ಡಿವಿಎಸ್ ರಂಗಮಂದಿರದಲ್ಲಿ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡವ ವೇಳೆ ಆಯನೂರು ಮಂಜುನಾಥ್ ಈ ವಿವಾದಾಸ್ಪದ ಮಾತು ಹೇಳಿದ್ದಾರೆ. ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಅದರಲ್ಲಿಯೂ ಕೆಲ ಕಾರ್ಯಕ್ರಮಗಳ ಟಿವಿ ಆ್ಯಂಕರ್‌ಗಳನ್ನು ನೋಡಿದರೆ ಅವರು ಕೂಡ ಅತ್ಯಾಚಾರಕ್ಕೆ ಕಾರಣಕರ್ತರೇ? ಎಂಬ ಅನುಮಾನ ಕಾಡುತ್ತದೆ. ಕಾರ್ಯಕ್ರಮ ನೋಡುವವರು ಕಾರ್ಯಕ್ರಮ ಬಿಟ್ಟು ಅವರನ್ನೇ ನೋಡುವಂತಾಗಿರುತ್ತದೆ ಎಂದು ಆ್ಯಂಕರ್‌ಗಳು ತೊಡುವ ಬಟ್ಟೆಯ ಕುರಿತಂತೆ ಆಯನೂರು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು.

ವಸ್ತ್ರ ಸಂಹಿತೆಯ ಕುರಿತಂತೆ ನಾನಿಲ್ಲಿ ಮಾತನಾಡುತ್ತಿಲ್ಲ. ಯಾವ ರೀತಿಯ ಬಟ್ಟೆ ಹಾಕಿಕೊಳ್ಳಬೇಕು ಎಂಬುದರ ಕುರಿತಂತೆ ಹೇಳಲು ಹೋಗುವುದಿಲ್ಲ. ಆದರೆ ನಾವು ಹಾಕಿಕೊಳ್ಳುವ ಬಟ್ಟೆಯ ಕುರಿತಂತೆ ಅರಿವು ಇರಬೇಕು ಎಂದು ಮಾರ್ಮಿಕವಾಗಿ ಆಯನೂರು ಹೇಳಿದರು.

'ಮಹಿಳೆಯರೇ, ರಾತ್ರಿ ವೇಳೆ ಅಡ್ಡಾಡಬೇಡಿ. ಪುರುಷರನ್ನು ಪ್ರಚೋದಿಸುವ ಉಡುಪು ಧರಿಸಬೇಡಿ. ಮಕ್ಕಳನ್ನು ಧಾರ್ಮಿಕ ಕಟ್ಟುಪಾಡಿನಲ್ಲಿ ಬೆಳೆಸಿದರೆ ಅತ್ಯಾಚಾರ ಆಗೋಲ್ಲ. ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸಿದ್ದರಿಂದಲೇ ಅತ್ಯಾಚಾರ ಹೆಚ್ಚಾಗುತ್ತಿರುವುದು' ಎಂದೆಲ್ಲ ಮಾತೆ ಮಹಾದೇವಿ ಈ ಹಿಂದೆ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+