ಅಕ್ರಮ: 111 ಕಾಲೇಜುಗಳ ಮೇಲೆ ಸಿಐಡಿ ತನಿಖೆ

CID probe into 'irregularities' in BeD colleges
ಬೆಂಗಳೂರು, ಜ.10: ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ 111 ಬಿಎಡ್ ಕಾಲೇಜಿನಲ್ಲಿ ನಡೆದಿದೆ ಎನ್ನಲಾದ ಅಕ್ರಮ, ಅವ್ಯವಹಾರಗಳ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ ರವಿ ಗುರುವಾರ(ಜ.10) ಹೇಳಿದ್ದಾರೆ.

ಕಾಲೇಜುಗಳ ಅಕ್ರಮಗಳ ಬಗ್ಗೆ ತನಿಖೆ ನಡೆಸಿ 6 ತಿಂಗಳೊಳಗೆ ತನಿಖೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ತಕ್ಷನ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರವಿ ಹೇಳಿದರು.

ಎಸ್ ಎಸ್ ಎಲ್ ಸಿ ಪಾಸಾಗದೇ ಇರುವವರಿಗೂ ಕೂಡಾ ಬೆಂಗಳೂರು ವಿವಿಯಲ್ಲಿ ಪದವಿ ಸಿಗುತ್ತದೆ. ಎಲ್ಲವೂ ಸೇಲ್ ಗಿದೆ ಎಂದು ಹೊರರಾಜ್ಯಗಳಲ್ಲಿ ಇಲ್ಲಸಲ್ಲದ ಅಪಪ್ರಚಾರ ನಡೆಸಲಾಗುತ್ತಿದೆ ಎಂಬ ದೂರು ಬಂದಿದೆ.

ಕೆಲವು ಕಡೆ ಕಾಲೇಜುಗಳು ಮಾನ್ಯತೆ ಪಡೆಯದೇ ಇದ್ದರೂ ಬೋರ್ಡ್ ಹಾಕಿಕೊಂಡು ವಂಚನೆ ಮಾಡಿರುವ ಪ್ರಕರಣಗಳು ಇವೆ. ಆದ್ದರಿಂದ ಸಮಗ್ರ ತನಿಖೆಯಾಗಬೇಕೆಂದು ಸಿಂಡಿಕೇಟ್ ಸಮಿತಿ ಅಧ್ಯಕ್ಷ ಕರಣ್ ಕುಮಾರ್ ಅವರು ವರದಿ ನೀಡಿದ್ದಾರೆ. ವಿವಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸುರಕ್ಷತೆಗೆ 11 ಅಂಶಗಳ ಮಾರ್ಗಸೂಚಿಯನ್ನು ತಯಾರಿಸಲಾಗಿದೆ.

23 ಕಾಲೇಜುಗಳಲ್ಲಿ ತರಗತಿಗಳನ್ನು ನಡೆಸದೇ ಸರ್ಟಿಫಿಕೇಟ್ ನೀಡುವ ದಂಧೆ ನಡೆದಿದೆ. ಇನ್ನೂ 20 ಕಾಲೇಜುಗಳು ಅಸ್ತಿತ್ವದಲ್ಲೆ ಇಲ್ಲದೆ ಕೇವಲ ಲೆಟರ್ ಹೆಡ್ ಮೂಲಕ ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದೆ. ಇಂಥ ಕಾಲೇಜುಗಳ ಮಾನ್ಯತೆ ರದ್ದು ಮಾಡಲು ನಿರ್ಣಯಿಸಲಾಗಿದೆ ಎಂದು ಸಚಿವ ರವಿ ಹೇಳಿದರು.

ಕಪ್ಪು ಪಟ್ಟಿಯಲ್ಲಿ ಕಾಲೇಜುಗಳು: ಬೆಂಗಳೂರಿನ ಸುಮಾರು 23 ಕಾಲೇಜುಗಳನ್ನು AICTE ಕಪ್ಪು ಪಟ್ಟಿಗೆ ಸೇರಿಸಿದೆ. AICTE ಮಾನ್ಯತೆ ಪಡೆಯದೆ ತಾಂತ್ರಿಕ ವಿಷಯಗಳನ್ನು ಬೋಧನೆ ಮಾಡುತ್ತಿರುವ ಆರೋಪವನ್ನು ಈ ಕಾಲೇಜುಗಳ ಮೇಲೆ ಹೇರಲಾಗಿದೆ. [ಕಪ್ಪು ಪಟ್ಟಿಯಲ್ಲಿರುವ ಕಾಲೇಜುಗಳ ಪಟ್ಟಿ ನೋಡಿ]

ಒಂದು ಕಾಲೇಜಿಗೆ 120 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವ ಅವಕಾಶ ಒದಗಿಸಿದ್ದರೆ ಅಲ್ಲಿ 120 ಡೆಸ್ಕ್ ಟಾಪ್ ಕಂಪ್ಯೂಟರ್ ಗಳು ಹಾಗೂ ಅದಕ್ಕೆ ತಕ್ಕ ಉಪಕರಣಗಳು, ಸಾಧನಗಳು ಇರಲೇಬೇಕು ಎಂದು AICTE ನಿಯಮ ಹೇಳುತ್ತದೆ. ಇದಲ್ಲದೆ ಮಾನ್ಯತೆ ಪಡೆಯದೆ ಕೆಲವು ಕೋರ್ಸ್ ಗಳನ್ನು ನಡೆಸಲಾಗುತ್ತಿದೆ. ಬೋಧಕ ವರ್ಗದ ಅನುಭವದ ಬಗ್ಗೆಯೂ ಅನುಮಾನವಿದೆ. ತಾತ್ಕಾಲಿಕ ಲ್ಯಾಬ್ ಗಳಲ್ಲಿ ಪಾಠ ಮಾಡುವುದು ಮುಂತಾದ ಸಮಸ್ಯೆಗಳನ್ನು ಹೊತ್ತುಕೊಂಡಿರುವ ವಿದ್ಯಾಸಂಸ್ಥೆಗಳಿಗೆ AICTE ನಡುಕ ಹುಟ್ಟಿಸಿದೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+