ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ 3000 ಕೋಟಿ ರು ಷೇರು ಖರೀದಿಸಿದ LIC

By Mahesh
|
Google Oneindia Kannada News

LiC
ಬೆಂಗಳೂರು, ಜ.9: ಆರ್ಥಿಕ ಸಂಕಷ್ಟದಲ್ಲಿರುವ ದೇಶದ ಪ್ರತಿಷ್ಥಿತ ಐಟಿ ಕಂಪನಿ ಇನ್ಫೋಸಿಸ್ ಗೆ ಸೇರಿದ ಸುಮಾರು 3,000 ಕೋಟಿ ರೂ ಮೌಲ್ಯದ ಷೇರುಗಳನ್ನು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿ ಭಾರತೀಯ ಜೀವ ವಿಮಾ ನಿಗಮ (LIC) ಖರೀದಿಸಿದೆ. ಇದರೊಂದಿಗೆ Infosysನಲ್ಲಿ LICಯ ಪಾಲು ಶೇ. 6.3 ರಿಂದ ಶೇ 7ಕ್ಕೇರಿದೆ.

ಪ್ರಸಕ್ತ ಆರ್ಥಿಕ ವರ್ಷದ ಆರಂಭದಲ್ಲಿ ಏ.1,2012ರ ಎಣಿಕೆಯಂತೆ ಇನ್ಫೋಸಿಸ್ ನಲ್ಲಿ ಎಲ್ ಐಸಿಯ ಪಾಲು ಶೇ 4.92ರಷ್ಟಿತ್ತು. ಷೇರು ಪೇಟೆ ಅತಿದೊಡ್ಡ ಹೂಡಿಕೆದಾರ ಸಂಸ್ಥೆಯಾಗಿ LIC ರೂಪುಗೊಂಡಿದೆ. ಈಗ ಒಟ್ಟಾರೆ ಇನ್ಫೋಸಿಸ್ ನಲ್ಲಿ ಎಲ್ ಐಸಿ ಷೇರುಗಳ ಪಾಲು ಶೇ. 7.24ನಷ್ಟಿದೆ.

ಬುಧವಾರ(ಜ.9) ಮಧ್ಯಾಹ್ನ 1.30ರ ವೇಳೆಗೆ ಇನ್ಫೋಸಿಸ್ ಸಂಸ್ಥೆ ಷೇರುಗಳು 2339.00 ರು ನಂತೆ ಶೇ ೦.೦9ರಷ್ಟು ಕುಸಿತ ಕಂಡಿತ್ತು. ಇದೇ ವೇಳೆಯಲ್ಲಿ ಎನ್ ಎಸ್ ಇನಲ್ಲಿ 2337.00 ರು ನಂತೆ ಶೇ 0.30ರಷ್ಟು ಇಳಿದಿದೆ.

ವಿದೇಶಿ ಹೂಡಿಕೆ ಸಂಸ್ಥೆಗಳು (FII) Infosys ಷೇರುಗಳಿಂದ ಮಾರು ದೂರವಾಗುತ್ತಿರುವಾಗ LIC ಕೈಹಿಡಿದಿರುವುದು Infosys ಪ್ರತಿಷ್ಠೆಯನ್ನು ಹೆಚ್ಚಿಸಿದೆ.

2002ರಲ್ಲಿ ಮೊದಲ ಬಾರಿಗೆ Infosysನಲ್ಲಿ ಶೇ. 2ರಷ್ಟು ಷೇರುಗಳನ್ನು ಖರೀದಿಸಿದ LIC ಸತತವಾಗಿ ಆ ಷೇರುಗಳನ್ನು ಖರೀದಿಸುತ್ತಿದೆ.

ಅದಕ್ಕೂ ಮುನ್ನ ದೇಶದ ಷೇರು ವಹಿವಾಟಿನಲ್ಲಿ ಅತಿ ಹೆಚ್ಚು ಹೂಡಿಕೆ ಮಾಡುತ್ತಿದ್ದ ಹಿಂದಿನ Unit Trust of India (UTI) ಸಂಸ್ಥೆಯು Infosysನಲ್ಲಿ ಶೇ. 8ರಷ್ಟು ಷೇರುಗಳನ್ನು ಖರೀದಿಸಿತ್ತು. ಕೊನೆಗೆ ಅದು ಮುಚ್ಚಿಕೊಂಡು ಹೋಗುವ ವೇಳೆಗೆ 2003ರಲ್ಲಿ ಶೇ. 1ಕ್ಕೆ ಕುಸಿದಿತ್ತು.

2012ರಲ್ಲಿ LIC ಅಲ್ಲದೆ, ಅನೇಕ ವಿದೇಶಿ ಹೂಡಿಕೆದಾರರು ಇನ್ಫೋಸಿಸ್ ಮೇಲೆ ನಂಬಿಕೆ ಇಟ್ಟರು. Oppenheimer, Franklin Templeton, Aberdeen ಹಾಗೂ Vanguard ಪ್ರಮುಖ ಹೂಡಿಕೆ ಸಂಸ್ಥೆಗಳಾಗಿದೆ.

English summary
State—run insurer LIC has hiked its stake in Infosys to 7.24 per cent, raising its holding in the IT major for third straight quarter with an estimated purchase of shares worth over Rs 3,000 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X