ದೆಹಲಿ ಸಂತ್ರಸ್ತೆ ಹೆಸರು ಬಹಿರಂಗ, ಮಾಧ್ಯಮಗಳ ನಿರ್ಬಂಧ
ನವದೆಹಲಿ, ಜ.7: ದೆಹಲಿಯಲ್ಲಿ ಖಾಸಗಿ ಬಸ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ದುರಂತ ಸಾವನ್ನಪ್ಪಿದ 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನಿಜವಾದ ಹೆಸರು ಬಹಿರಂಗಗೊಂಡಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಹೆಸರು ಬಹಿರಂಗಗೊಂಡಿರುವುದನ್ನು ಮುಕ್ತವಾಗಿ ಸ್ವಾಗತಿಸಲಾಗಿದೆ.
ಆದರೆ, ಸಿಎನ್ ಎನ್ ಐಬಿಎನ್ ಲೈವ್, ಟೈಮ್ಸ್ ನೌ, ಎನ್ ಡಿಟಿವಿ ಸೇರಿದಂತೆ ಪ್ರಮುಖ ಮಾಧ್ಯಮಗಳು ಹೆಸರು ಬಹಿರಂಗಗೊಳಿಸಿರಲಿಲ್ಲ.
Rajdeep Sardesai @sardesairajdeep : Many have asked why we are not giving braveheart's name on network. Section 228 A provides a legal framework. We are following the same. ಎಂದು ಉತ್ತರಿಸಿದ್ದರು.
ನಿರ್ಭಯ ಅಲಿಯಾಸ್ ದಾಮಿನಿ ಅಲಿಯಾಸ್ ಅಮಾನತ್ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಭಾರತದ ಮಗಳಾಗಿ ಎಲ್ಲರನ್ನೂ ಒಗ್ಗೂಡಿಸಿದ್ದ ವಿದ್ಯಾರ್ಥಿನಿ ನಿಜವಾದ ಹೆಸರು ಜ್ಯೋತಿ ಸಿಂಗ್ ಪಾಂಡೆ ಎಂದು ಆಕೆ ತಂದೆ ನೀಡಿರುವ ಹೇಳಿಕೆ ನಿಜವಲ್ಲ ಎಂಬ ಸುದ್ದಿಯೂ ಹಬ್ಬಿದೆ.

"ನನ್ನ ಮಗಳು ಏನು ತಪ್ಪು ಮಾಡಿಲ್ಲ, ದುಷ್ಕರ್ಮಿಗಳ ವಿರುದ್ಧ ಹೋರಾಟ ನಡೆಸಿದ್ದಾಳೆ. ಅವಳ ದುರಂತ ಸಾವು ಬೇರೆಯವರಿಗೆ ಪಾಠವಾಗಬೇಕು. ಇಡೀ ವಿಶ್ವಕ್ಕೆ ಆಕೆ ಹೆಸರು ತಿಳಿಯಲಿ. ಇಂಥ ಪಾತಕಗಳ ವಿರುದ್ಧ ಹೋರಾಟ ನಡೆಸಲು ನನ್ನ ಮಗಳು ಸ್ಪೂರ್ತಿಯಾಗಲಿ" ಎಂದು ಮೃತ ಯುವತಿಯ 53 ವರ್ಷದ ತಂದೆ ಬದ್ರಿ ಸಿಂಗ್ ಪಾಂಡೆ ಹೇಳಿದ್ದಾರೆ.
ಯುಕೆ ಮೂಲದ ಮಿರರ್ ಪತ್ರಿಕೆ ಮೊಟ್ಟ ಮೊದಲ ಬಾರಿಗೆ ದೆಹಲಿ ಅತ್ಯಾಚಾರ ಸಂತ್ರಸ್ತೆ ಹೆಸರನ್ನು ಬಹಿರಂಗಗೊಳಿಸಿದೆ.
ಮಗಳನ್ನು ಕಳೆದುಕೊಂಡ ನಂತರ ದೆಹಲಿ ಬಿಟ್ಟು ತಮ್ಮ ಊರಾದ ಉತ್ತರ ಪ್ರದೇಶದ ಬಿಲ್ಲಿಯ ಗ್ರಾಮಕ್ಕೆ ಬದ್ರಿಸಿಂಗ್ ಕುಟುಂಬ ಬಂದಿದೆ.
ಬದ್ರಿ ಸಿಂಗ್ ಹಾಗೂ ಪತ್ನಿ ಆಶಾ ಆವರು ತಮ್ಮ ಮಗಳನ್ನು ಹುರಿದು ಮುಕ್ಕಿದ ಮೃಗಗಳಿಗೆ ಶಿಕ್ಷೆಯಾಗುವುದನ್ನು ಕಾಣಲು ಹಾತೊರೆಯುತ್ತಿದ್ದಾರೆ.
ಘಟನೆ ನಡೆದ ದಿನ ಆಕೆ ಜೊತೆಗಿದ್ದಿದ್ದು ಬಾಯ್ ಫ್ರೆಂಡ್ ಆಲ್ಲ. ಕ್ಲೋಸ್ ಫ್ರೆಂಡ್ ಅನ್ನಬಹುದು. 28 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಅವಿಂದ್ರಾ ಪಾಂಡೆ ಆಕೆಯನ್ನು ಉಳಿಸಲು ಸಾಕಷ್ಟು ಶ್ರಮಪಟ್ಟು ಸೋತಿದ್ದಾನೆ.
ಜ್ಯೋತಿ ಮದುವೆ ಬಗ್ಗೆ ಯಾವುದೇ ಯೋಚನೆ ಮಾಡಿರಲಿಲ್ಲ. ಅವಿಂದ್ರಾ ಜೊತೆ ಗೆಳೆತನ ಮಾತ್ರ ಇತ್ತು. ಮದುವೆ ಪ್ರಸ್ತಾಪ ಬಂದಿರಲಿಲ್ಲ ಎಂದು ಬದ್ರಿ ಹೇಳಿದ್ದಾರೆ.
ಜ್ಯೋತಿ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿದಿರುವುದು ಕಂಡು ಹೃದಯ ತುಂಬಿ ಬಂದಿದೆ. ದೇಶದ ಯುವ ಶಕ್ತಿಗೆ ನನ್ನ ಮಗಳು ಸ್ಪೂರ್ತಿ ತುಂಬಲಿ. ಆಕೆ ಇಲ್ಲ ಎಂದು ಹೇಳಲು ಮನಸ್ಸಾಗುತ್ತಿಲ್ಲ.
ಆಕ್ಕನನ್ನು ಕಳೆದುಕೊಂಡ ಗೌರವ್ ಸಿಂಗ್(20), ಸೌರವ್ ಸಿಂಗ್(15) ಕಂಗಾಲಾಗಿದ್ದಾರೆ. ಜ್ಯೋತಿ ಹೆಸರು ಬಹಿರಂಗಗೊಳಿಸಿದ ಅಪ್ಪ ಬದ್ರಿ ಸದ್ಯಕ್ಕೆ ಆಕೆ ಅಸಲಿ ಚಿತ್ರ ಹೊರ ಬರುವುದು ಬೇಡ ಎಂದು ಮಿರರ್ ವರದಿಗಾರರನ್ನು ಕೇಳಿಕೊಂಡಿದ್ದಾರೆ.
ಈ ನಡುವೆ Dipendra Gogoi @dgogoi : RIP Jyoti Singh Pandey. So Delhi Police are you trying to file an FIR with Interpol against this UK Paper for revealing her real name #Shame ಎಂಬ ಟ್ವೀಟ್ ಸೇರಿದಂತೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಜ್ಯೋತಿ ಸಿಂಗ್ ಪಾಂಡೆ ಪದ ಟಾಪ್ ಟ್ವೀಟ್ ಆಗಿದೆ.












Click it and Unblock the Notifications