ಛೇ! ಅನಂತ್ ಗೆ ಸಿಎಂ ಪಟ್ಟ ತಪ್ಪಿ ಹೋಯ್ತು

ಮುಂಬರುವ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದ ಬಿಜೆಪಿ, ಹಾಲಿ ಸಿಎಂ ಜಗದೀಶ್ ಶೆಟ್ಟರ್ ಅವರೇ ಮುಂದಿನ ಬಾರಿಗೂ ಸಿಎಂ ಪಟ್ಟದ ಅಭ್ಯರ್ಥಿ ಎಂದು ಘೋಷಿಸಿತ್ತು.
ಶೆಟ್ಟರ್ ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವುದು ಸಂತೋಷ ತಂದಿದೆ. ಸದ್ಯ ಅನಂತ್ ಕುಮಾರ್ ಅವರನ್ನು ಸಿಎಂ ಅಭ್ಯರ್ಥಿಯಾಗದಿರುವುದು ಬೇಸರ ತರಿಸಿದೆ ಎಂದು ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.
ನಾನು ಈಶ್ವರಪ್ಪ ಮೇಲೆ ಯಾವತ್ತು ಆರೋಪ ಮಾಡಿಲ್ಲ. ಚಿಕ್ಕಮಗಳೂರಿನ ಸಮಾವೇಶದ ಬಗ್ಗೆ ನಾವು ನಮ್ಮ ಗಮನಹರಿಸುತ್ತಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.
ರಾಜಕೀಯ ಇಲ್ಲದೆ ಏನೂ ನಡೆಯಲ್ಲ. ಸುಮ್ಮನೆ ಯಡಿಯೂರಪ್ಪ ಅವರನ್ನು ನಾನು ಜೈಲಿಗೆ ಕಳಿಸಿಲ್ಲ ಎಂದು ಮತ್ತೆ ಮತ್ತೆ ಈಶ್ವರಪ್ಪ ಏಕೆ ಹೇಳುತ್ತಿದ್ದಾರೆ ಗೊತ್ತಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ಕೆಜೆಪಿ ಸಮಾವೇಶಕ್ಕೆ ಅಡ್ಡಿ: ಜ.7 ರಂದು ನಡೆಯಲಿರುವ ಕೆಜೆಪಿ ಸಮಾವೇಶಕ್ಕೆ ಬಿಜೆಪಿ ಅಡ್ಡಿ ಪಡಿಸುತ್ತಿದೆ ಎಂದು ಕೆಜೆಪಿ ಮುಖಂಡ ತೇಜಸ್ ಕುಮಾರ್ ಆರೋಪಿಸಿದ್ದಾರೆ.
ಸಚಿವ ಸಿಟಿ ರವಿ ಅವರ ಶಿಷ್ಯಂದಿರು ರಾತ್ರೋರಾತ್ರಿ ಕೆಜೆಪಿ ಕಟೌಟ್, ಬ್ಯಾನರ್, ಬಂಟಿಂಗ್ ತೆಗೆಸಿದ್ದಾರೆ. ಮುನ್ಸಿಪಾಲಿಟಿ ಸಿಬ್ಬಂದಿಗೆ ದೊಡ್ಡವರಿಂದ ನಿರ್ದೇಶನ ಸಿಕ್ಕಿದೆ.
ನಾವು ಭಾನುವಾರ ಬೆಳಗ್ಗೆ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದೇವೆ. ನಾವು ಪೊಲೀಸ್, ನಗರ ಪಾಲಿಕೆ, ಜಿಲ್ಲಾಡಳಿತದ ಅನುಮತಿ ಪಡೆದು ಸಮಾವೇಶ ಆಯೋಜಿಸಿದ್ದೇವೆ. ಎಲ್ಲೂ ಕೂಡಾ ಕಾನೂನು ಉಲ್ಲಂಘಿಸಿಲ್ಲ.
ಇದು ರಾಜಕೀಯ ಕುತುಂತ್ರ ಎಂಬುದು ಜನರಿಗೆ ತಿಳಿದಿದೆ. ಸಮಾವೇಶ ಸಂಪೂರ್ಣ ಯಶಸ್ವಿಯಾಗಲಿದೆ ಎಂದು ಕೆಜೆಪಿ ಮುಖಂಡ ಆರಾಧ್ಯ ಅವರು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications