ಉದಾಸಿ ಮಾತಿಗೆ ಬೆಲೆಕೊಟ್ಟು ಸರಕಾರ ಉಳಿಸಿದ ಬಿಎಸ್ವೈ

ಬಿಜೆಪಿ ಆಪ್ತ ಮೂಲಗಳ ಪ್ರಕಾರ ಯಡಿಯೂರಪ್ಪ ಪರ ಮತ್ತು ಶೆಟ್ಟರ್ ಸರಕಾರದ ವಿರುದ್ದ ಸಹಿ ಹಾಕಿರುವ 14 ಶಾಸಕರು ರಾಜ್ಯಪಾಲರನ್ನು ಭೇಟಿಯಾಗಿ ಬೆಂಬಲ ವಾಪಾಸ್ ಪತ್ರ ನೀಡಲು ನಿರ್ಧರಿಸಿದ್ದರು.
ಆದರೆ ಕೊನೇ ಕ್ಷಣದಲ್ಲಿ ಉದಾಸಿ ಮಾತಿಗೆ ಬೆಲೆಕೊಟ್ಟು ಯಡಿಯೂರಪ್ಪ ತಮ್ಮ ನಿರ್ಧಾರ ಬದಲಿಸಿದರು ಎನ್ನುತ್ತವೆ ಖಚಿತ ಮೂಲಗಳು.
ಲೋಕೋಪಯೋಗಿ ಇಲಾಖೆಯ ಬಹಳಷ್ಟು ಕಡತಗಳು ಮುಖ್ಯಮಂತ್ರಿಗಳ ಸಹಿಗಾಗಿ ಕಾದಿದೆ.
ಅಷ್ಟೇ ಅಲ್ಲದೆ ಬಹಳಷ್ಟು ಶಾಸಕರ ಕ್ಷೇತ್ರದ ಅಭಿವೃದ್ದಿಗೆ ಸಂಬಂಧಪಟ್ಟ ಕೆಲಸಗಳ ಕಡತಗಳಿಗೆ ಮುಖ್ಯಮಂತ್ರಿಗಳ ಸಹಿ ಆಗ ಬೇಕಿದೆ.
ಈ ಸಂದರ್ಭದಲ್ಲಿ ನೀವು ಸರಕಾರ ಉರುಳಿಸಿದರೆ ಅಭಿವೃದ್ದಿ ಕೆಲಸಕ್ಕೆ ಹಿನ್ನಡೆಯಾಗುತ್ತದೆ. ನಿಮ್ಮಿಂದ ಅಭಿವೃದ್ದಿ ಕೆಲಸಗಳಿಗೆ ಕಲ್ಲು ಬಿತ್ತು ಎನ್ನುವ ಅಪವಾದ ಬರಬಾರದು.
ಸಂಕ್ರಾಂತಿಯ ನಂತರ ನೀವು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನೂ ಬದ್ದನಾಗಿರುತ್ತೇನೆ.
ಈಗ ನೀವು 14 ಶಾಸಕರನ್ನು ಕರೆದುಕೊಂಡು ಹೋದರೆ ಸರಕಾರ ಬೀಳಿಸಲು ಮತ್ತೆ ಇತರ ಪಕ್ಷಗಳ ಬೆಂಬಲ ಅಗತ್ಯ. ಇದರಿಂದ ನೀವು ಏನೂ ಸಾಧಿಸಿದಂತೆ ಆಗುವುದಿಲ್ಲ. ಇದನ್ನೇ ದಾಳವಾಗಿ ಬಿಜೆಪಿ ಮುಂದಿನ ಚುನಾವಣೆಯಲ್ಲಿ ನಿಮ್ಮ ವಿರುದ್ದ ಬಳಸಿಕೊಳ್ಳಬಾರದು.
ಸಂಕ್ರಾಂತಿಯ ನಂತರ ಇನ್ನಷ್ಟು ನಿಮ್ಮ ಬೆಂಬಲಿಗ ಶಾಸಕರು ಮತ್ತು ಸಚಿವರು ಸೇರಿ ಸುಮಾರು 45 ಜನಪ್ರತಿನಿಧಿಗಳ ಸಹಿಯೊಂದಿಗೆ ರಾಜ್ಯಪಾಲರನ್ನು ಭೇಟಿಯಾಗೋಣ.
ಈ ಹಿಂದೆ ನಿಮ್ಮ ಬೆಂಬಲಕ್ಕೆ ನಿಂತ ಶಾಸಕರು, ಸಚಿವರು ಈಗಲೂ ನಿಮ್ಮ ಜೊತೆಗೇ ಇದ್ದಾರೆ. ಸಂಕ್ರಾಂತಿಯ ನಂತರ ಒಟ್ಟಿಗೆ ರಾಜೀನಾಮೆ ನೀಡಿ ರಾಜ್ಯಪಾಲರ ಬಳಿ ಹೋಗೋಣ ಎಂದು ಉದಾಸಿ ಮನವಿ ಮಾಡಿಕೊಂಡಿದ್ದರಿಂದ ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಕೊನೇ ಕ್ಷಣದಲ್ಲಿ ತಮ್ಮ ನಿರ್ಧಾರಿಂದ ಹಿಂದಕ್ಕೆ ಸರಿದರು ಎನ್ನಲಾಗಿದೆ.












Click it and Unblock the Notifications