ಬೆದರಿಕೆಗೆ ಬಗ್ಗದ ಬಿಜೆಪಿಯಿಂದ ಚುನಾವಣಾ ಕಹಳೆ

BJP decides to gets ready for assembly election
ಬೆಂಗಳೂರು, ಜ. 5 : ಸಂಕ್ರಾಂತಿಯ ನಂತರ ಜನವರಿ 23ಕ್ಕೆ ಬಿಜೆಪಿ ಸರಕಾರ ಪತನಗೊಳ್ಳುವುದು ಖಚಿತ ಎಂದು ಕರ್ನಾಟಕ ಜನತಾ ಪಕ್ಷ ಎಚ್ಚರಿಕೆ ಹಿನ್ನೆಲೆಯಲ್ಲಿ, ಪ್ರತಿತಂತ್ರ ರೂಪಿಸುವಲ್ಲಿ ನಿರತವಾಗಿರುವ ಭಾರತೀಯ ಜನತಾ ಪಕ್ಷ, ಸರಕಾರವನ್ನು ಉಳಿಸಿಕೊಳ್ಳಲು ಹರಸಾಹಸಪಡುವ ಬದಲು ವಿಧಾನಸಭೆ ಚುನಾವಣೆಗೆ ಸಜ್ಜುಗೊಳ್ಳುವುದು ಮೇಲೆಂದು ಚುನಾವಣಾ ಕಹಳೆಯನ್ನು ಊದಿದೆ.

ಬೆಂಗಳೂರು ಹೊರವಲಯದ ರೆಸಾರ್ಟಿನಲ್ಲಿ ಶನಿವಾರ ನಡೆದ ಬಿಜೆಪಿ 'ಚಿಂತನ್ ಮಂಥನ್ ಬೈಠಕ್' ಮತ್ತು ಕೋರ್ ಕಮಿಟಿ ಸಭೆಯ ನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, ಜ.20ರಿಂದ 27ರವರೆಗೆ ಮನೆಮನೆಗೆ ತೆರಳಿ ಪ್ರಚಾರ ಕಾರ್ಯ ಆರಂಭಿಸುವುದಾಗಿ ಹೇಳಿದ್ದಾರೆ. ಚುನಾವಣೆಗೆ ಈ ಕ್ಷಣದಿಂದಲೇ ಬಿಜೆಪಿ ಸಿದ್ಧತೆ ನಡೆಸುವುದು ನಿಶ್ಚಿತವಾಗಿದೆ.

ಕರ್ನಾಟಕದ ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಪ್ರಧಾನ್ ಅವರ ನೇತೃತ್ವದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಜಗದೀಶ್ ಶೆಟ್ಟರ್, ಈಶ್ವರಪ್ಪ, ಆರ್ ಅಶೋಕ್, ವಿಶ್ವೇಶ್ವರ ಹೆಗಡೆ ಕಾಗೇರಿ, ಆನಂದ್ ಸಿಂಗ್, ಸುರೇಶ್ ಕುಮಾರ್, ರಾಮದಾಸ್, ಅರವಿಂದ್ ಲಿಂಬಾವಳಿ, ನಾರಾಯಣಸ್ವಾಮಿ, ಬೆಳ್ಳುಬ್ಬಿ, ಗೋವಿಂದ ಕಾರಜೋಳ, ಅಪ್ಪಚ್ಚು ರಂಜನ್, ಸಿಟಿ ರವಿ, ಕೋಟಾ ಶ್ರೀನಿವಾಸ್ ಪೂಜಾರಿ ಮುಂತಾದವರು ಭಾಗವಹಿಸಿದ್ದರು.

ಸಭೆಯಲ್ಲಿ, ಯಡಿಯೂರಪ್ಪ ಸರಕಾರ ಬೀಳಿಸಲು ಯತ್ನಿಸದರೆ ಯಾವ ತಂತ್ರ ರೂಪಿಸಬೇಕು, ಚುನಾವಣೆಗೆ ಯಾವ ರೀತಿ ಸಿದ್ಧತೆ ನಡೆಸಬೇಕು, ಕೆಜೆಪಿಯನ್ನು ಬೆಂಬಲಿಸುತ್ತಿರುವ ಯಾರನ್ನು ಇಟ್ಟುಕೊಳ್ಳಬೇಕು, ಯಾರನ್ನು ಓಡಿಸಬೇಕು ಮುಂತಾದ ವಿಷಯ ಕುರಿತು ಸಾಕಷ್ಟು ಚರ್ಚೆ ನಡೆಸಲಾಯಿತು ಎಂದು ಪ್ರಹ್ಲಾದ್ ಜೋಶಿ ನುಡಿದರು.

ಇದೇ ಜ.10ರಂದು ಕಾರ್ಯಕರ್ತರ ಮಟ್ಟದ ವಿಶೇಷ ಸಮಾವೇಶ ನಡೆಸಲಾಗುವುದು. ಮೊದಲ ಹಂತದ ಪ್ರಚಾರ ಕಾರ್ಯವನ್ನು ಜ.20ರಿಂದ 27ರವರೆಗೆ ನಡೆಸಲಾಗುವುದು. ಜ.27ರಿಂದ ಫೆ.10ರವರೆಗೆ ಬೂತ್ ಮಟ್ಟದ ಸಮಾವೇಶ ಮಾಡಲಾಗುವುದು. ಫೆ.27ರಿಂದ ಮಾ.3ರವರೆಗೆ 5 ತಂಡಗಳು ಇಡೀ ರಾಜ್ಯದ ಪ್ರವಾಸ ಕೈಗೊಳ್ಳಲಿವೆ. ಈ ಪ್ರವಾಸದಲ್ಲಿ ಹಿರಿಯ ನಾಯಕರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕೂಡ ಭಾಗಿಯಾಗಲಿದ್ದಾರೆ.

ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ, ಸದಾನಂದ ಗೌಡ, ಆರ್ ಅಶೋಕ್ ಮತ್ತು ಅನಂತ್ ಕುಮಾರ್ ಅವರ ನೇತೃತ್ವದಲ್ಲಿ 5 ತಂಡಗಳು ಇಡೀ ಕರ್ನಾಟಕದಾದ್ಯಂತ ಸಂಚರಿಸಿ ಎಲ್ಲ 224 ಕ್ಷೇತ್ರಗಳಲ್ಲಿ ಮತ ಯಾಚಿಸಲಿವೆ. ನಂತರ ಮಾರ್ಚ್ 3ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗುವುದು. ಜಗದೀಶ್ ಶೆಟ್ಟರ್ ಅವರೇ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಜೋಶಿ ಸ್ಪಷ್ಟಪಡಿಸಿದರು. ಈ ನಡುವೆ, ಯಡಿಯೂರಪ್ಪನವರ ಕೆಜೆಪಿಯೊಂದಿಗೆ ಗುರುತಿಸಿಕೊಂಡವರನ್ನು ಪ್ರಚಾರ ಕಾರ್ಯದಲ್ಲಿ ಸೇರಿಸಿಕೊಳ್ಳದಿರಲು ಕೂಡ ನಿಶ್ಚಯಿಸಲಾಗಿದೆ ಎಂದು ಅವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+