ಫೇಸ್ ಬುಕ್ ನಲ್ಲಿ ದೆಹಲಿ ವಿದ್ಯಾರ್ಥಿನಿ ನಕಲಿ ಚಿತ್ರ

ನಿರ್ಭಯ ಅಲಿಯಾಸ್ ದಾಮಿನಿ ಅಲಿಯಾಸ್ ಅಮಾನತ್ ಹೆಸರಿನ ವಿದ್ಯಾರ್ಥಿನಿ ಫೋಟೊ ಎಂದು ಹೇಳಿ ಕೇರಳ ಮೂಲದ ವಿದ್ಯಾರ್ಥಿಯ ಫೋಟೊ ಹಾಕಿರುವ ದುಷ್ಕರ್ಮಿಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ರೀತಿ ಎರಡು ಫೋಟೋಗಳು ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ. ವಿದ್ಯಾರ್ಥಿನಿ ನಿರ್ಭಯಳ ಪ್ರಕರಣ ಕೇರಳದಲ್ಲಿ ಹೊಸ ಸಂಚಲನ ಮೂಡಿಸಿದೆ.
ನಕಲಿ ಚಿತ್ರದ ಅಸಲಿ ಯುವತಿಗೆ ದುಷ್ಕರ್ಮಿಗಳ ಕೃತ್ಯದಿಂದ ಭಾರಿ ಮುಜುಗರ ಉಂಟಾಗಿದೆ. ಈಗಾಗಲೇ ಹಲವಾರು ಜನ ಫೇಸ್ ಬುಕ್ ನಲ್ಲಿ ಹರಿದಾಡುತ್ತಿರುವ ಈ ಭಾವ ಚಿತ್ರಗಳು ನಕಲಿ ನಂಬಬೇಡಿ.. ನಿರ್ಭಯಳ ಅಸಲಿ ಚಿತ್ರವನ್ನು ಆಕೆ ಕುಟುಂಬದವರಾಗಲಿ, ಆಸ್ಪತ್ರೆಯವರಾಗಲಿ ಬಹಿರಂಗಗೊಳಿಸಿಲ್ಲ ಎಂದು ಕಾಮೆಂಟ್ ಹಾಕುತ್ತಿದ್ದಾರೆ.
ಆದರೂ, ನಕಲಿ ಚಿತ್ರಗಳ ಭರಾಟೆ ಮುಂದುವರೆದಿದೆ. ಇದರಿಂದ ಬೇಸತ್ತ ಕೇರಳ ವಿದ್ಯಾರ್ಥಿನಿಯ ಪೋಷಕರು ತಿರುವನಂತಪುರದಲ್ಲಿರುವ ಸೈಬರ್ ಕ್ರೈಂ ಪೊಲೀಸ್ ಘಟಕಕ್ಕೆ ದೂರು ನೀಡಿದ್ದಾರೆ.
ಫೇಸ್ ಬುಕ್ ನಲ್ಲಿ ತಮ್ಮ ಮಗಳ ಚಿತ್ರವನ್ನು ಯಾರೋ ಹಾಕಿದ್ದಾರೆ. ಈ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸುವಂತೆ ದೂರಿನಲ್ಲಿ ಕೇಳಿಕೊಂಡೀದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ದೆಹಲಿ ವಿದ್ಯಾರ್ಥಿನಿಗೆ ನ್ಯಾಯ ದೊರೆಕಿಸಿಕೊಡಲು ವಿದ್ಯಾರ್ಥಿ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್(ಜ.3) ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಖಾಸಗಿ ಬಸ್ ನಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮಂಗಳವಾರ(ಜ.1) ನ್ಯಾಯಾಲಯಕ್ಕೆ ಇ- ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.
ದೇಶದಲ್ಲಿ ಸಂಚಲನ ಮೂಡಿಸಿರುವ ಈ ಪ್ರಕರಣದ 6 ಜನ ಆರೋಪಿಗಳ ವಿರುದ್ಧ ಸುಮಾರು 1000 ಪುಟಗಳ ಚಾರ್ಚ್ ಶೀಟ್ ಹಾಕಲಾಗಿದೆ. ಸಿಂಗಪುರದ ಮೌಂಟ್ ಎಲೆಜಬೆತ್ ಆಸ್ಪತ್ರೆಯಿಂದ ಮರಣೋತ್ತರ ಪರೀಕ್ಷಾ ವರದಿ ಬಂದ ನಂತರ ದೆಹಲಿ ಪೊಲೀಸರು ಆರೋಪ ಪಟ್ಟಿ ಸಿದ್ಧಪಡಿಸಿ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಸಿಂಗಪುರದ ಮೌಂಟ್ ಎಲಿಜೆಬತ್ ಆಸ್ಪತ್ರೆಯ ವೈದ್ಯರು, ದೆಹಲಿ ಆಸ್ಪತ್ರೆ ವೈದ್ಯರು, ಗೆಳೆಯ ಸಾಫ್ಟ್ ವೇರ್ ಇಂಜಿನಿಯರ್, ವಿದ್ಯಾರ್ಥಿನಿ ನೀಡಿರುವ ಹೇಳಿಕೆ ಎಲ್ಲವೂ ಸಾಕ್ಷಿ ಪಟ್ಟಿಯಲ್ಲಿ ಸೇರಿದೆ.
ಚಾರ್ಚ್ ಶೀಟ್ ಪ್ರಕಾರ ಆರೋಪಿಗಳು ಅತ್ಯಾಚಾರಕ್ಕೆ ಒಳಗಾದ ವಿದ್ಯಾರ್ಥಿನಿ ಹಾಗೂ ಆಕೆ ಗೆಳೆಯ ಇಬ್ಬರನ್ನು ಬಸ್ ಚಕ್ರದಡಿ ಹಾಕಿ ಜಜ್ಜಿ ಹಾಕಲು ಯೋಜಿಸಿದ್ದರು ಎಂದು ತಿಳಿದು ಬಂದಿದೆ.
ಬಾಧಿತೆಯ ಪೋಷಕರೂ ಸೇರಿದಂತೆ ಕೇಂದ್ರ ಮಾನವ ಸಂನ್ಮೂಲ ಸಚಿವ ಶಶಿ ತರೂರ್ ಅವರು ಸಹ ಅತ್ಯಾಚಾರ ವಿರೋಧಿ ತಿದ್ದುಪಡಿ ಶಾಸನಕ್ಕೆ ಸಂತ್ರಸ್ತೆಯ ಹೆಸರನ್ನೇ ಇಡಬೇಕು ಎಂದು ಹೇಳಿದ್ದಾರೆ.
ದೆಹಲಿ ಗ್ಯಾಂಗ್ ರೇಪ್ ಬಾಧಿತೆಯ ಹೆಸರನ್ನು ಹೀಗೆ ಶಾಸನದ ಹೆಸರಿನ ಮೂಲಕ ಬಹಿರಂಗಪಡಿಸಿದರೆ ಮುಂದೆಯೂ ಅತ್ಯಾಚಾರ ಪೀಡಿತ ಹೆಣ್ಣುಮಕ್ಕಳ ಹೆಸರನ್ನು ಬಹಿರಂಗಪಡಿಸಬೇಕಾಗುತ್ತದೆ. ಅದಕ್ಕೆ ಮೇಲೆ ಹೇಳಿದ್ದು ಭಾರತಕ್ಕೆ ಇದು ಸಮಂಜಸವಾಗದು ಎಂಬ ಕೂಗೆದ್ದಿದೆ.












Click it and Unblock the Notifications