ಬ್ರಾಹ್ಮಣರನ್ನು ದೂಷಿಸುವುದು ಫ್ಯಾಷನ್,ಪೇಜಾವರ ಶ್ರೀ

ಬ್ರಾಹ್ಮಣರನ್ನು ಮತ್ತು ಉಡುಪಿ ಮಠಾಧೀಶರನ್ನು ದೂಷಿಸುವುದು ಕೆಲವರಿಗೆ ಒಂದು ಫ್ಯಾಷನ್ ಆಗಿದೆ ಎಂದು ಉಡುಪಿ ಪೇಜಾವರ ಮಠದ ಹಿರಿಯ ಯತಿ ವಿಶ್ವೇಶತೀರ್ಥ ಸ್ವಾಮೀಜಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.
ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ದೇವರಿಗೆ ಇಟ್ಟಿರುವ ಪ್ರಸಾದದಲ್ಲಿ ಎಡೆಸ್ನಾನ ನಡೆಸಬಹುದೆಂದು ಸಲಹೆ ನೀಡಿದ್ದೆ. ನನ್ನ ಸಲಹೆಗೆ ನಿಡುಮಾಮಿಡಿ ಶ್ರೀಗಳು ಸಹಮತ ವ್ಯಕ್ತ ಪಡಿಸಿದ್ದರು.
ಆದರೆ ಅವರೇ ಈಗ ಪೇಜಾವರ ಶ್ರೀಗಳು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆಂದು ಹೇಳಿಕೆ ನೀಡುತ್ತಿದ್ದಾರೆ.
ಬ್ರಾಹ್ಮಣರು, ಬ್ರಾಹ್ಮಣರ ಸಂಪ್ರದಾಯ ಮತ್ತು ಬ್ರಾಹ್ಮಣಶಾಹಿ ಮಠಾಧೀಶರನ್ನು ಟೀಕಿಸುವುದು ಕೆಲವರಿಗೆ ಒಂದು ರೀತಿಯ ಫ್ಯಾಶನ್ ಎಂದು ಪೇಜಾವರ ಶ್ರೀಗಳು ವಿಚಾರವಾದಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.












Click it and Unblock the Notifications