ಬಾಯ್ಬಿಟ್ಟ ಸಿಂಗ್, ದಿಲ್ಲಿ ಪೊಲೀಸರ ಮೇಲೆ ಗುಡುಗು

Prime Minister Singh addresses, appeals for calm
ನವದೆಹಲಿ, ಡಿ.24: ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ದೇಶದಲ್ಲೇ ಕೂಗೆದ್ದಿದ್ದರೂ ಸುಮ್ಮನ್ನಿದ್ದ ಪ್ರಧಾನಿ ಮನಮೋಹನ್ ಸಿಂಗ್ ಕೊನೆಗೂ ಸೋಮವಾರ(ಡಿ.24) ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ.

ಮಹಿಳೆಯರ ಸಂರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸಿ, ದಯವಿಟ್ಟು ಆಕ್ರಮಣಕಾರಿ ಮನೋಭಾವವನ್ನು ಬಿಡಿ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕರೆ ನೀಡಿದ್ದಾರೆ.

ಆದರೆ, ದಿಲ್ಲಿ ಪೊಲೀಸರು ಪರಿಸ್ಥಿತಿ ನಿಭಾಯಿಸಿದರ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಮನಮೋಹನ್ ಸಿಂಗ್, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದೇನೆ. ಈ ವಿಷಯವಾಗಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದೇನೆ ಎಂದಿದ್ದಾರೆ.

ಶನಿವಾರ ಹಾಗೂ ಭಾನುವಾರ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದ ಘಟನೆ ನಡೆದಿತ್ತು. ಇದರಲ್ಲಿ 60 ಜನ ಪೊಲೀಸರು ಸೇರಿದ್ದರು. ರೈಸಿನಾ ಹಿಲ್ಸ್ ನ ರಾಷ್ಟ್ರಪತಿ ಭವನಕ್ಕೆ ಮುತ್ತಿಗೆ ಹಾಕಲು ವಿವಿಧ ವಿದ್ಯಾರ್ಥಿ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಮುಂದಾಗಿದ್ದರು.

ಇಂಡಿಯಾ ಗೇಟ್ ಬಳಿ, ವಿಜಯ್ ಚೌಕ್‌ನಲ್ಲಿ, ರಾಷ್ಟ್ರಪತಿ ಭವನದ ಎದಿರು, ಜಂತರ್ ಮಂತರ್‌ನಲ್ಲಿ ಯುವಸಮೂಹ ಪ್ರತಿಭಟನೆ ನಡೆದಿತ್ತು.

ಪ್ರತಿಭಟನಾಕಾರರು ಜಮಾಯಿಸದಂತೆ ಕಠಿಣ ಕ್ರಮಗಳನ್ನು ಪೊಲೀಸರು ತೆಗೆದುಕೊಂಡಿದ್ದಾರೆ. ಪಟೇಲ್ ಚೌಕ್, ಉದ್ಯೋಗ ಭವನ, ರೇಸ್ ಕೋರ್ಸ್, ಸೆಂಟ್ರಲ್ ಸೆಕ್ರೆಟೇರಿಯೇಟ್, ಖಾನ್ ಮಾರ್ಕೆಟ್, ಬಾರಾಕಂಬಾ ರೋಡ್, ಮಂಡಿ ಹೌಸ್ ಮೆಟ್ರೋ ಸ್ಟೇಷನ್‌ಗಳನ್ನು ಪೊಲೀಸರು ಬಂದ್ ಆಗಿತ್ತು.

ಈ ನಡುವೆ, ಅತ್ಯಾಚಾರಕ್ಕೆ ಒಳಗಾಗಿರುವ 23 ವರ್ಷದ ಯುವತಿಗೆ ಜ್ಞಾನ ಬಂದಿದ್ದರೂ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟವನ್ನು ಮುಂದುವರೆದಿದೆ.

ಶನಿವಾರ(ಡಿ.22) ಮ್ಯಾಜಿಸ್ಟ್ರೇಟರ್ ಅವರಿಗೆ ಪ್ರಕರಣದ ಕುರಿತು ಹೇಳಿಕೆ ನೀಡಿ ದುರಂತದ ನಂತರ ಇದೇ ಮೊದಲ ಬಾರಿಗೆ ಯುವತಿಯ ಗೆಳೆಯ ಆಕೆಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದು ಮಹತ್ವದ ಘಟನೆಯಾಗಿತ್ತು.ಈ ನಡುವೆ ಈ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ 6 ಜನ ಆರೋಪಿಗಳನ್ನು ಬಂಧಿಸಿರುವುದಾಗಿ ದೆಹಲಿ ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+