ಚಂಚಲಗುಡದಲ್ಲಿ ವರ್ತೂರ್ ಪ್ರಕಾಶ್ -ಗಾಲಿ ರೆಡ್ಡಿ ಭೇಟಿ

Varthur Prakash meets Gali Janardhan Reddy
ಬೆಂಗಳೂರು, ಡಿ.24: ಜವಳಿ ಖಾತೆ ಸಚಿವ ವರ್ತೂರು ಪ್ರಕಾಶ್ ಅವರು ಚಂಚಲಗುಡ ಜೈಲಿನಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಬಂದಿದೆ.

ಬಟ್ಟೆ ಬದಲಿಸುವಷ್ಟೇ ವೇಗವಾಗಿ ಪಕ್ಷ ಬದಲಿಸುವಲ್ಲಿ ನಿಷ್ಣಾತರಾಗಿರುವ ವರ್ತೂರ್ ಪ್ರಕಾಶ್ ಅವರು ಬಿಎಸ್ ಆರ್ ಕಾಂಗ್ರೆಸ್ ಸೇರುವ ಬಗ್ಗೆ ಈ ಹಿಂದೆ ಕೂಡಾ ಒನ್ ಇಂಡಿಯಾ ಕನ್ನಡದಲ್ಲಿ ಸುದ್ದಿ ಪ್ರಕಟಿಸಲಾಗಿತ್ತು.

ಬಿಎಸ್ ಆರ್ ಕಾಂಗ್ರೆಸ್ ಸೇರುವ ಹಿನ್ನೆಲೆಯಲ್ಲಿ ಸೋಮವಾರ(ಡಿ.24) ಜನಾರ್ದನ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿರುವ ವರ್ತೂರ್ ಪ್ರಕಾಶ್ ಅವರು ಬಿಜೆಪಿಯಿಂದ ಒಂದು ಕಾಲು ಹೊರಗಡೆ ಇಟ್ಟಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಗುಸು ಗುಸು ಶುರುವಾಗಿ ಎರಡು ಮೂರು ತಿಂಗಳು ಕಳೆದಿದೆ.

'ನಾನು, ರಾಮುಲು ಸೋದರರಿದ್ದಂತೆ. ಅಹಿಂದ ಕಡೆಗೆ ರಾಮುಲುದು ಅಖಂಡ ನಿಷ್ಠೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಶೋಷಿತ ವರ್ಗದವರು ಈ ರಾಜ್ಯದ ಚುಕ್ಕಾಣಿ ಹಿಡಿಯುವ ದಿನಗಳು ದೂರವಿಲ್ಲ. ಈ ನಿಟ್ಟಿನಲ್ಲಿ ನಾವಿಬ್ಬರೂ ಒಟ್ಟಿಗೆ ಕೆಲ್ಸ ಮಾಡ್ತೇವೆ' ಎಂದು ವರ್ತೂರು ಘೋಷಿಸಿದ್ದಾರೆ.

ಬಿಜೆಪಿ ತೊರೆಯಲ್ಲ: ಈ ನಡುವೆ ಎಂಥ ಸಂದರ್ಭ ಬಂದರೂ ನಾನು ಬಿಜೆಪಿ ತೊರೆಯುವುದಿಲ್ಲ.ನನ್ನ ನಿಷ್ಠೆ ಎಂದಿದ್ದರೂ ಬಿಜೆಪಿಗೆ ಮಾತ್ರ. ನಾನು ಬಿಜೆಪಿ ತೊರೆದು ಕೆಜೆಪಿಗೆ ಸೇರುತ್ತೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಸಣ್ಣ ಕೈಗಾರಿಕಾ ಸಚಿವ ರಾಜೂಗೌಡ ಹೇಳಿದ್ದಾರೆ.

ಕೆಜೆಪಿ ಅಧ್ಯಕ್ಷ ಅವರು ತಮ್ಮ ಬೆಂಬಲಿಗರಿಗೆ ಜ.20ರೊಳಗೆ ನಿರ್ಧಾರ ಕೈಗೊಳ್ಳುವಂತೆ ಡೆಡ್ ಲೈನ್ ವಿಧಿಸಿರುವ ಹಿನ್ನೆಲೆಯಲ್ಲಿ ರಾಜೂಗೌಡ ಅವರು ಪ್ರತಿಕ್ರಿಯಿಸಿ, ಯಡಿಯೂರಪ್ಪ ಅವರು ಅಂದುಕೊಂಡಂತೆ ಯಾವುದೂ ಆಗಲ್ಲ. ಬಿಜೆಪಿ ಸರ್ಕಾರಕ್ಕೆ ಯಾವುದೇ ಆತಂಕ, ತೊಂದರೆಯಿಲ್ಲ ಎಂದಿದ್ದಾರೆ.

ವರ್ತೂರು ಅವರು ಬಳ್ಳಾರಿ ಗ್ರಾಮಾಂತರ ವಿಧಾನಸಭೆ ಉಪಚುನಾವಣೆಯಲ್ಲಿ ರಾಮುಲು ವಿರುದ್ಧ ಪ್ರಚಾರ ಮಾಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಕೋಲಾರದ ಶಾಸಕ ವರ್ತೂರು ಪ್ರಕಾಶ್ ಅವರ ಮಗ ವರ್ತೂರು ತೇಜಸ್ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಇನ್ನೂ ಪ್ರಥಮ ಪಿಯುಸಿ ಓದುತ್ತಿರುವ ತೇಜಸ್ ಎರಡನೇ ನಾಯಕ ನಟನಾಗಿ ಅಭಿನಯಿಸುತ್ತಿರುವ 'ಬಿಸ್ಕೆಟ್' ಚಿತ್ರ ಕಂಠೀರವ ಸ್ಟುಡಿಯೋದಲ್ಲಿ ಇತ್ತೀಚೆಗೆ ಸೆಟ್ಟೇರಿದೆಯಂತೆ ಮುಂದೆ ಓದ್ಕೊಳ್ಳಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+