ಲಕ್ಷುರಿ ಬಸ್ಸಿನಲ್ಲಿ ವಿದ್ಯಾರ್ಥಿನಿ ರೇಪ್: ತಾಜಾ ಏನು?

ತಾಜಾ ವರದಿಗಳ ಪ್ರಕಾರ ದೆಹಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ಈ ಮಧ್ಯೆ ಘಟನೆಗೆ ಸಾಕ್ಷಿಯಾದ ಲಕ್ಷುರಿ ಬಸ್ಸನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
* ಭಾನುವಾರವಾದ್ದರಿಂದ ಸಾಕೇತ್ ನಲ್ಲಿ ಪಿಕ್ಚರ್ ನೋಡಿಕೊಂಡು ಇಬ್ಬರೂ ವಾಪಸಾಗುತ್ತಿದ್ದರು.
* ಬಾಧಿತ ವಿದ್ಯಾರ್ಥಿನಿ ವೈದ್ಯಕೀಯ ವಿದ್ಯಾರ್ಥಿನಿ ಅಲ್ಲ. ಆದರೆ ಅರೆ ವೈದ್ಯಕೀಯ ಸೇವಾರ್ಥಿ.
* ಪ್ರಿಯಕರ ಟೆಕ್ಕಿಯಾಗಿದ್ದು IAS ಪರೀಕ್ಷೆಗೆ ತಯಾರಾಗುತ್ತಿದ್ದಾನೆ.
* ಪೊಲೀಸರು ಸುತ್ತಮುತ್ತ ಕಟ್ಟಡಗಳಲ್ಲಿರುವ CCTV ಕ್ಯಾಮರಾಗಳ ಮೇಲೆ ಕಣ್ಣುಹಾಯಿಸುತ್ತಿದ್ದಾರೆ.
* ಉತ್ತರಾಕಾಂಡ ಮೂಲದ ಬಾಧಿತ ಯುವತಿಯ ಸ್ಥಿತಿ ಚಿಂತಾಜನಕವಾಗಿದ್ದು, ವೆಂಟಿಲೇಟರಿನಲ್ಲಿದ್ದಾರೆ.
* ಬಸ್ಸಿನಲ್ಲಿ ಬೇರೆ ಯಾವುದೇ ಪ್ರಯಾಣಿಕರು ಇರಲಿಲ್ಲ.
* ಬಸ್ಸು 31 ಕಿಮೀ ದೂರ ಚಲಿಸುವವರೆಗೂ ಅತ್ಯಾಚಾರಿಗಳ ಅಟ್ಟಹಾಸ.
* ರಾಜಧಾನಿ ದೆಹಲಿ ಅತ್ಯಾಚಾರಿಗಳ ಅಡ್ಡೆಯಾಗುತ್ತಿದ್ದು ಪೊಲೀಸರ ವಿರುದ್ಧ ಜನ ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮೇಲೆ ಹೆಚ್ಚಿದ ಒತ್ತಡ.
* ಮಧ್ಯ ರಾತ್ರಿ 1.15ರಲ್ಲಿ ಪ್ರಿಯಕರ ಪೊಲೀಸರಿಗೆ ದೂರು ನೀಡಿದ್ದಾನೆ.
ಪ್ರಾಥಮಿಕ ವರದಿ: ಪ್ರಿಯಕರನ ಎದುರೇ ಈ ದುಷ್ಕೃತ್ಯ ನಡೆದಿದ್ದು, ಘಟನೆಯ ನಂತರ ಪ್ರಿಯಕರ ಮತ್ತು ಬಾಧಿತ ವಿದ್ಯಾರ್ಥಿನಿಯನ್ನು ಬಸ್ಸಿನಿಂದ ಕೆಳಗೆ ತಳ್ಳಿ, ಅಪರಿಚಿತ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಬಾಯ್ ಫ್ರೆಂಡ್ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಪ್ರತಿಷ್ಠಿತ ಕಂಪನಿಯೊಂದರ ಉದ್ಯೋಗಿ. ಘಟನೆಯ ನಂತರ ಮಹಿಪಾಲಪುರ ಮೇಲ್ಸೇತುವೆಯಿಂದ ಇಬ್ಬರನ್ನೂ ಕೆಳಗೆ ತಳ್ಳಲಾಗಿದೆ.
ಬಾಧಿತ ವಿದ್ಯಾರ್ಥಿನಿ ಮತ್ತು ಆಕೆಯ ಪ್ರಿಯಕರನನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ಸೇರಿಸಲಾಗಿದೆ. ವಿದ್ಯಾರ್ಥಿನಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ದಕ್ಷಿಣ ದೆಹಲಿಯ ವಸಂತ ವಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಸಂತ ವಿಹಾರದಲ್ಲಿರುವ ಮುನೀರಕಾ ಪ್ರದೇಶದಲ್ಲಿ ರಾತ್ರಿ 11 ಗಂಟೆಯಲ್ಲಿ ಸದರಿ ವೈದ್ಯಕೀಯ ವಿದ್ಯಾರ್ಥಿನಿ ತನ್ನ ಬಾಯ್ ಫ್ರೆಂಡ್ ಜತೆ ಬಸ್ಸೇರಿದ್ದಾರೆ. ದ್ವಾರಕಾದಲ್ಲಿರುವ ಹುಡುಗಿಯ ಮನೆಗೆ ಬಿಟ್ಟು ಬರಲು ಬಾಯ್ ಫ್ರೆಂಡ್ ಆಕೆಯ ಜತೆಯಲ್ಲಿದ್ದ.
5 ಮಂದಿ ಅಪರಿಚಿತ ದುಷ್ಕರ್ಮಿಗಳು ಮೊದಲು ಬಾಯ್ ಫ್ರೆಂಡ್ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಆನಂತರ ವಿದ್ಯಾರ್ಥಿನಿಯನ್ನು ಥಳಿಸಿದ್ದು, ಲೈಂಗಿಕವಾಗಿ ಹಲ್ಲೆ ಮಾಡಿದ್ದಾರೆ. ಬಳಿಕ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications