ಚಿತ್ರದುರ್ಗಕ್ಕೆ ನೀರು ಹರಿಸುತ್ತೇನೆ ಎಂದ ರಾಮುಲು

BS Sriramulu on Upper Bhadra Project
ಚಿತ್ರದುರ್ಗ, ಡಿ.17: ಮುಂಬರುವ ಚುನಾವಣೆಗೆ ಎಲ್ಲಾ ಪಕ್ಷಗಳಿಗೆ ಮತದಾರರು ನೀರು ಕುಡಿಸುವ ಮೊದಲೇ, ರಾಜಕಾರಣಿಗಳು ಕುಡಿಯುವ ನೀರನ್ನು ಮುಖ್ಯ ಅಜೆಂಡಾ ಮಾಡಿಕೊಂಡಂತಿದೆ. ಕುಮಾರಸ್ವಾಮಿ ನಂತರ ಬಿಎಸ್ ಶ್ರೀರಾಮುಲು ಅವರು ಜನರ ನೀರಿನ ದಾಹ ಇಂಗಿಸುವ ಮಾತಾಡಿದ್ದಾರೆ.

'ನಾನೇನಾದ್ರೂ ಸಿಎಂ ಆದ್ರೆ 48 ಗಂಟೆಗಳಲ್ಲಿ ನೇತ್ರಾವತಿ ಮನೆ ನಿಮ್ಮ ಮನೆ ಬಾಗಿಲಿಗೆ ಹರಿಸುತ್ತೇನೆ. ಭದ್ರಾ ಕುಡಿಯುವ ನೀರಿನ ಯೋಜನೆ ಶೀಘ್ರವೇ ಸಾಕಾರಗೊಳಿಸುತ್ತೇನೆ. ಕುಡಿಯುವ ನೀರಿನ ಸಮಸ್ಯೆ ಎಂಬುದು ರಾಜ್ಯದಲ್ಲಿ ಸಂಪೂರ್ಣವಾಗಿ ಮಾಯವಾಗಲಿದೆ' ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇತ್ತೀಚೆಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಇದಕ್ಕೆ ಜನತೆ ಕೂಡಾ ಖಾರವಾಗಿ ಪ್ರತಿಕ್ರಿಯಿಸಿತ್ತು.

ಈಗ ಬಿಎಸ್ ಆರ್ ಕಾಂಗ್ರೆಸ್ ಪಕ್ಷದ ಸಂಕಲ್ಪ ಯಾತ್ರೆ ನಡೆಸುತ್ತಿರುವ ಪಕ್ಷೇತರ ಶಾಸಕ ಶ್ರೀರಾಮುಲು ಅವರು ಕೂಡಾ ಕುಡಿಯುವ ನೀರನ್ನು ಮುಂದಿಟ್ಟುಕೊಂಡು ಜನರ ಓಲೈಕೆಯಲ್ಲಿ ತೊಡಗಿದ್ದಾರೆ.

ಚಿತ್ರದುರ್ಗದಲ್ಲಿ ಸೋಮವಾರ(ಡಿ.17) ನಡೆದ ಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮುಲು, ಬಿಜೆಪಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಕೂಡಲೇ ಸರ್ಕಾರವನ್ನು ವಜಗೊಳಿಸಬೇಕು ಎಂದು ಹೇಳಿದರು.

ಡಿ.27,28 ರಂದು ಉಪವಾಸ ಸತ್ಯಾಗ್ರಹ ಮಾಡುತ್ತೇನೆ.ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ(ಗಿನಾ) ಚಿತ್ರದುರ್ಗಕ್ಕೆ ಶಾಶ್ವತ ಕುಡಿಯುವ ನೀರು ಹರಿಸುತ್ತೇನೆ. ಭದ್ರಾ ಮೇಲ್ಡಂಡೆ ಯೋಜನೆ ತಕ್ಷನವೇ ಜಾರಿಗೊಳಿಸುತ್ತೇನೆ. ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಸಿಗುವಂತೆ ಮಾಡುತ್ತೇನೆ ಎಂದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ 164 ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆಗೇರುವುದು ಖಚಿತ' ಎಂದು ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಧಿನೇತಾ ಶ್ರೀರಾಮುಲು ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೇವಲ ಪಾದಯಾತ್ರೆ/ ಸಂಕಲ್ಪಯಾತ್ರೆಗಳನ್ನೇ ನೆಚ್ಚಿಕೊಂಡಿದ್ದರೆ ಸಾಲದು. ಹೇಗೂ ಉತ್ತರ ಕರ್ನಾಟಕದ ನಾಲ್ಕಾರು ಜಿಲ್ಲೆಗಳಲ್ಲಿ ಜನ ಬಿಎಸ್ಆರ್ ಕಾಂಗ್ರೆಸ್ ಪಕ್ಷದತ್ತ ಒಲವು ತೋರಿದ್ದಾರೆ. ಅದನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದು ತಮ್ಮ ಶ್ರಮಕ್ಕೆ ಆಧುನಿಕ ತಂತ್ರಜ್ಞಾನದ ಟಚ್ ನೀಡಲು ನಿರ್ಧರಿಸಿದ್ದಾರೆ ಕೂಡಾ, ವೆಬ್ ಸೈಟ್ ಗೆ ಕಾಯಕಲ್ಪ, ಸಾಮಾಜಿಕ ಜಾಲತಾಣಗಳ ಸದ್ಬಳಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+