ಸೈಡ್ ಪ್ಲೀಸ್:ಬಿಜೆಪಿ ಲೀಡರ್ಸ್ ಹೊಂಟ್ರು ಪಕ್ಷ ಬಲವರ್ಧನೆಗೆ

ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿ ಅಶೋಕ್, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಸಂಸದ ಅನಂತ್ ಕುಮಾರ್ ಮತ್ತು ರಾಜ್ಯಾಧ್ಯಕ್ಷ ಈಶ್ವರಪ್ಪ ನೇತೃತ್ವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.
ಮುಂಬರುವ ಚುನಾವಣೆಗೆ ಪಕ್ಷವನ್ನು ಈಗಿಂದಲೇ ಸಂಘಟಿಸಲು ಮತ್ತು ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು ರಾಜ್ಯದ ಪ್ರಮುಖ ನಾಯಕರುಗಳು ಈ ತಿಂಗಳಾಂತ್ಯದವರೆಗೆ ಪ್ರವಾಸ ಮಾಡಲಿದ್ದಾರೆಂದು ರಾಜ್ಯ ಬಿಜೆಪಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಜೆಪಿ ನಾಯಕರುಗಳು ಪ್ರವಾಸ ಮಾಡುವ ಜಿಲ್ಲೆಗಳ ಪಟ್ಟಿಯಿಂತಿದೆ:
1. ಜಗದೀಶ್ ಶೆಟ್ಟರ್ : ಚಿಕ್ಕೋಡಿ, ಬಾಗಲಕೋಟೆ, ಬಿಜಾಪುರ, ಧಾರವಾಡ, ಗದಗ ಮತ್ತು ಬೆಳಗಾವಿ.
2. ಈಶ್ವರಪ್ಪ : ಶಿವಮೊಗ್ಗ, ರಾಯಚೂರು, ಚಿಕ್ಕಮಗಳೂರು ಮತ್ತು ಕೊಪ್ಪಳ.
3. ಅನಂತ್ ಕುಮಾರ್ : ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಬೆಂಗಳೂರು ನಗರ.
4. ಸದಾನಂದ ಗೌಡ : ಉಡುಪಿ, ಚಾಮರಾಜನಗರ, ಮೈಸೂರು, ಹಾಸನ ಮತ್ತು ದಕ್ಷಿಣಕನ್ನಡ.
5. ಅಶೋಕ್ : ಬೀದರ್ ಗುಲ್ಬರ್ಗ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ.












Click it and Unblock the Notifications