ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಗ್ಧ ಮಕ್ಕಳ ಸಾವಿಗೆ ಕಂಬನಿ ಮಿಡಿದ ಒಬಾಮಾ

By Prasad
|
Google Oneindia Kannada News

Barack breaks down as he addresses nation
ಕನೆಕ್ಟಿಕಟ್, ಡಿ. 15 : "ಈ ಹೃದಯವಿದ್ರಾವಕ ಕೃತ್ಯದಿಂದ ನನ್ನ ಹೃದಯ ಛಿದ್ರಛಿದ್ರವಾಗಿದೆ. ಇನ್ನೂ ಅನೇಕ ಹುಟ್ಟುಹಬ್ಬ, ಪದವಿ, ಮದುವೆ, ಮಕ್ಕಳನ್ನು ನೋಡಬೇಕಿದ್ದ ಈ ಮುಗ್ಧ ಸುಂದರ ಜೀವಗಳು ಮುರುಟಿಹೋಗಿವೆ. ಆ ಮಕ್ಕಳ ಮತ್ತು ಜೀವತೆತ್ತ ಶಿಕ್ಷಕರ ಸಂಬಂಧಿಗಳಿಗೆ ನನ್ನ ಸಂತಾಪ. ಈ ಮಾತನ್ನು ನಾನು ಅಮೆರಿಕಾದ ಅಧ್ಯಕ್ಷನಾಗಿ ಹೇಳುತ್ತಿಲ್ಲ, ಒಬ್ಬ ಪಾಲಕನಾಗಿ ಹೇಳುತ್ತಿದ್ದೇನೆ."

ಎಂದು ವೈಟ್ ಹೌಸ್‌ನಿಂದ ಸಂತಾಪಸೂಚಕ ಭಾಷಣ ಮಾಡಿರುವ ಬರಾಕ್ ಒಬಾಮಾ, ಕೊರಳುಬ್ಬಿಬಂದು ದುಃಖ ತಡೆಯಲಾರದೆ ಜೀವ ಕಳೆದುಕೊಂಡ 5ರಿಂದ 10 ವರ್ಷದ ಮಕ್ಕಳಿಗಾಗಿ ಕಣ್ಣೀರುಗರೆದಿದ್ದಾರೆ. ಮಾತುಗಳನ್ನು ಆಡುತ್ತಿದ್ದಾಗಲೇ ತಮ್ಮ ತೋರುಬೆರಳಿನಿಂದ ಕಣ್ಣೀರನ್ನು ಒರೆಸಿಕೊಳ್ಳುತ್ತ, ರಾಜಕೀಯವನ್ನು ಬದಿಗೊತ್ತಿ ಇಂತಹ ದುರ್ಘಟನೆ ಮರುಕಳಿಸದಂತೆ, ಗನ್ ಸಂಸ್ಕೃತಿ ತಡೆಯಬೇಕೆಂದು ಕರೆ ನೀಡಿದ್ದಾರೆ.

"ಕಳೆದ ಹಲ ವರ್ಷಗಳಲ್ಲಿ ಇಂತಹ ಅನೇಕ ಘಟನೆಗಳನ್ನು ಅಮೆರಿಕ ನೋಡಿದೆ. ನ್ಯೂಟೌನ್‌ನ ಶಾಲೆಯೇ ಆಗಲಿ, ಓರೆಗಾಂವ್‌ನ ಶಾಪಿಂಗ್ ಮಾಲ್ ಆಗಲಿ, ವಿಸ್ಕನ್‌ಸಿನ್‌ನ ದೇವಸ್ಥಾನ ಆಗಲಿ, ಆರೋರಾದ ಸಿನೆಮಾ ಮಂದಿರವಾಗಲಿ, ಶಿಕಾಗೋದ ಬೀದಿಯೇ ಆಗಲಿ, ಇಂತಹ ಅನೇಕ ದುರ್ಘಟನೆಗಳನ್ನು ಅಮೆರಿಕ ಕಂಡಿದೆ. ಸತ್ತವರೆಲ್ಲ ನಮ್ಮವರೆ, ಈ ಶಾಲೆಯ ಮಕ್ಕಳು ನಮ್ಮ ಮಕ್ಕಳೆ" ಎಂದು ದುಃಖತಪ್ತರಾಗಿ ಭಾವುಕರಾಗಿ ಕಂಬನಿ ಮಿಡಿದ್ದಾರೆ.

"ಇಂದು ಸಂಜೆ ಅಮೆರಿಕದ ಎಲ್ಲ ಪಾಲಕರು ಮಾಡುವಂತೆ ಮನೆ ಸೇರಿದ ಮಕ್ಕಳನ್ನು ನಾನು ಮತ್ತು ಮಿಷೆಲ್ ಪ್ರೀತಿಯಿಂದ ಮತ್ತಷ್ಟು ಗಟ್ಟಿಯಾಗಿ ತಬ್ಬಿಕೊಳ್ಳುತ್ತೇವೆ. ನಾವು ಅವರನ್ನೆಷ್ಟು ಪ್ರೀತಿಸುತ್ತೇವೆ ಎಂದು ಮುದ್ದಿಸಿ ಹೇಳುತ್ತೇವೆ. ಆದರೆ, ಕನೆಕ್ಟಿಕಟ್‌ನಲ್ಲಿರುವ ಅನೇಕ ಪಾಲಕರು ಇಂದು ರಾತ್ರಿ ಹೀಗೆ ಮಾಡಲಾರರು. ಆ ಪಾಲಕರಿಗೆ ಇಂತಹ ಪ್ರೀತಿಯ ಅಪ್ಪುಗೆಯ ಅವಶ್ಯಕತೆಯಿದೆ. ನನ್ನ ಕೈಯೆಲ್ಲಿ ಏನೆಲ್ಲ ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡುತ್ತೇನೆ" ಎಂದು ಒಬಾಮಾ ಮನದಾಳದ ಮಾತು ಹೇಳಿದ್ದಾರೆ.

ಹಿಂದೆಂದೂ ಕಂಡುಕೇಳರಿಯದಂತಹ ಭೀಕರ ಹತ್ಯಾಕಾಂಡದಲ್ಲಿ 20 ವರ್ಷದ ಬಂದೂಕುಧಾರಿಯೊಬ್ಬ ಕನೆಕ್ಟಿಕಟ್‌ನಲ್ಲಿರುವ ಸ್ಯಾಂಡಿ ಹುಕ್ ಎಲಿಮೆಂಟರಿ ಶಾಲೆಗೆ ನುಗ್ಗಿ ಮನಬಂದಂತೆ ಗುಂಡುಹಾರಿಸಿ 5ರಿಂದ 10 ವರ್ಷ ವಯಸ್ಸಿನ 20 ಮಕ್ಕಳು ಮತ್ತು ಶಿಕ್ಷಕರು ಸೇರಿದಂತೆ 28 ಜನರನ್ನು ಶುಕ್ರವಾರ ಬೆಳಗಿನ ಜಾವ 9.30ಕ್ಕೆ ಭೀಕರವಾಗಿ ಹತ್ಯೆಗೈದಿದ್ದಾನೆ.

English summary
A tearful Barack Obama has called for meaningful action to prevent further tragedies. A 20-year-old gun man has shot dead 28 people including 20 children at a elementary school in Connecticut, USA on 14th December, 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X