KSRTCಗೂ 1968 ಚಾಲಕ ನಿರ್ವಾಹಕ ಇತರೆ ಸಿಬ್ಬಂದಿ ಬೇಕು

ಈ ಮಧ್ಯೆ, ಇತ್ತೀಚೆಗೆ ಬೆಂಗಳೂರು ಮಹಾನಗರದಲ್ಲಿ ಸಂಚರಿಸುವ BMTC ಬಸ್ಸುಗಳಿಗೆ ಒಟ್ಟು 1647 ಚಾಲಕ-ನಿರ್ವಾಹಕರು ಬೇಕಾಗಿದ್ದಾರೆಂದು ಸಂಸ್ಥೆಯು ಆನ್ ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿರುವುದು ನಿಮಗೆಲ್ಲ ತಿಳಿದಿದ್ದು 2012ರ ಡಿಸೆಂಬರ್ 10ರಿಂದ 2013ರ ಜನವರಿ 12 ರವರೆಗೆ ಅಂತರ್ಜಾಲದ ಮೂಲಕ apply ಮಾಡಲು ಸಿದ್ಧತೆ ನಡೆಸಿದ್ದೀರಲ್ಲಾ?
ಮತ್ತೆ KSRTC ನೇಮಕಾತಿ ವಿಷಯಕ್ಕೆ ಬಂದರೆ, ನೇರ ನೇಮಕಾತಿ ಮೂಲಕ ಸಂಚಾರ ನಿರೀಕ್ಷಕರೂ ಸೇರಿದಂತೆ ನಾನಾ ಹುದ್ದೆಗಳಿಗೆ ಅಂತರ್ಜಾಲದ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಒಟ್ಟು 439 ಹುದ್ದೆಗಳು ಖಾಲಿಯಿವೆ. ಅದು ಬಿಟ್ಟು 1529 ಮಂದಿ ಚಾಲಕ-ನಿರ್ವಾಹಕರನ್ನೂ ನೇಮಕ ಮಾಡಿಕೊಳ್ಳಲಿದೆ. ಚಾಲಕ-ನಿರ್ವಾಹಕ ನೇಮಕಕ್ಕಾಗಿ ಅಂತರ್ಜಾಲದ ಮೂಲಕ ಇದೇ 27ರೊಳಗೆ ಅರ್ಜಿ ಸಲ್ಲಿಸಬೇಕಾಗಿದೆ.
ಇದು ಇಡೀ ರಾಜ್ಯದ ನಾಲ್ಕೂ ನಿಗಮಗಳಿಗೆ ನೇಮಕಾತಿ ನಡೆಯಲಿದೆ. ಅರ್ಜಿಯನ್ನು 17.12.2012 ರಿಂದ 07-12-2013 ನಡುವೆ ಇಂಟರ್ ನೆಟ್ ಮೂಲಕವೇ ಸಲ್ಲಿಸಬೇಕಾಗಿದೆ.
ಅರ್ಹ ವಿದ್ಯಾರ್ಹತೆ, ವಯೋಮಿತಿ, ದೈಹಿಕ ಸಾಮರ್ಥ್ಯ, ಹುದ್ದೆಗಳ ವರ್ಗೀಕರಣ, ಅರ್ಜಿ ಸಲ್ಲಿಸುವ ವಿಧಾನ ಇನ್ನಿತರ ಸಂಪೂರ್ಣ ವಿವರಗಳನ್ನು ww.ksrtcjobs.com ವಿಳಾಸದಲ್ಲಿ ನೀಡಲಾಗಿದೆ. ತಡವೇಕೆ, ಇಚ್ಛೆಯಿದ್ದಲ್ಲಿ ಇಂದೇ apply ಮಾಡಿ, ನಮ್ಮ ಕಡೆಯಿಂದ All the Best ನಿಮಗಾಗಿ!












Click it and Unblock the Notifications