• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಗ್ರರಿಗೆ ಸೇತುವೆಯಾದ ಎಚ್ಎಸ್ ಬಿಸಿಗೆ ಭಾರಿ ದಂಡ

By Mahesh
|

ಲಂಡನ್, ಡಿ.12: ಅಕ್ರಮ ಹಣ ರವಾನೆ, ಅಕ್ರಮ ಔಷಧಿ ಸಾಗಾಟ, ಭಯೋತ್ಪಾದಕ ಸಂಘಟನೆಗಳಿಗೆ ಹಣ ವರ್ಗಾವಣೆ, ಅಕ್ರಮ ಹಣ ಸಕ್ರಮಗೊಳಿಸಿದ ಆರೋಪ ಹೊತ್ತಿರುವ ಬ್ಯಾಂಕಿಂಗ್ ಸಂಸ್ಥೆ ಎಚ್ ಎಸ್ ಬಿಸಿ ಈಗ ಭಾರಿ ದಂಡ ತೆರಲು ಮುಂದಾಗಿದೆ. ಅಮೆರಿಕದ ಕಾನೂನು ಉಲ್ಲಂಘಿಸಿದ ಆರೋಪಕ್ಕೆ 1.92 ಬಿಲಿಯನ್ ಡಾಲರ್ ನಷ್ಟು ಭಾರಿ ಮೊತ್ತ ತೆರಲು ಸಿದ್ಧವಾಗಿದೆ.

ಉಗ್ರರ ಮನಿ ಲಾಂಡ್ರಿಂಗ್ ಚಟುವಟಿಕೆ ಹತ್ತಿಕ್ಕುವಲ್ಲಿ ಪ್ರತಿಷ್ಠಿತ ಬ್ಯಾಂಕ್ ಎಚ್ಎಸ್ ಬಿಸಿ ಸಂಪೂರ್ಣ ವಿಫಲವಾಗಿದೆ. ಲಂಡನ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಚ್‌ಎಸ್‌ಬಿಸಿ, ಭಯೋತ್ಪಾದಕ ಸಂಘಟನೆಗಳಿಗೆ ಹಣ ವರ್ಗಾವಣೆ, ಅಕ್ರಮ ಹಣ ಸಕ್ರಮ ಮತ್ತು ಮಾದಕವಸ್ತು ಚಟುವಟಿಕೆಗೆ ಹಣ ವರ್ಗಾವಣೆಗೆ ನೆರವು ನೀಡಿದೆ. ಆ ಮೂಲಕ ಇಲ್ಲಿನ ಹಣಕಾಸು ವ್ಯವಸ್ಥೆ ದುರ್ಬಳಕೆ ಮಾಡಿಕೊಂಡು ವಂಚಿಸಿದೆ ಎಂದು ಅಮೆರಿಕದ ಸಂಸತ್ ನಲ್ಲಿ ಆರೋಪಿಸಲಾಗಿತ್ತು.

ಆಮೆರಿಕ ಮತ್ತು ಭಾರತ ಸೇರಿದಂತೆ ಜಗತ್ತಿನೆಲ್ಲೆಡೆ ಉಗ್ರರ ವ್ಯಾಪಕ ಜಾಲಕ್ಕೆ ಅಕ್ರಮ ಹಣ ವರ್ಗಾವಣೆ ಆಧಾರವಾಗಿದೆ. ಅಲ್ ಖೈದಾ ಉಗ್ರ ಸಂಘಟನೆಯ ಜಾಲದ ವ್ಯಕ್ತಿ ಸ್ಥಾಪಿತ ಸೌದಿ ಅರೇಬಿಯಾದ ಅಲ್ ರಝಿ ಬ್ಯಾಂಕ್(Al Rajhi Bank) ಜೊತೆ ಎಚ್ ಎಸ್ ಬಿಸಿ ವ್ಯವಹಾರ ಇಟ್ಟುಕೊಂಡಿದೆ.

ಸೌದಿ ಅರೇಬಿಯಾ, ಬಾಂಗ್ಲಾದೇಶ, ಸಿರಿಯಾ, ಕ್ಯೂಬಾ, ಮೆಕ್ಸಿಕೋ, ಇರಾನ್, ಉತ್ತರ ಕೊರಿಯಾ, ಬರ್ಮಾ, ಕೇಮ್ಯಾನ್ ಐಲ್ಯಾಂಡ್ಸ್, ಜಪಾನ್ ಮತ್ತು ರಷ್ಯಾದ ವಿವಿಧ ಸಂಸ್ಥೆಗಳ ಜತೆ ಈ ಬ್ಯಾಂಕ್ ಹಲವಾರು ಪ್ರಶ್ನಾರ್ಹ ಹಣಕಾಸಿನ ವ್ಯವಹಾರ ನಡೆಸಿದೆ.

ಭಯೋತ್ಪಾದಕರಿಗೆ ಹಣಕಾಸು ನೀಡುತ್ತಿರುವ ಸೌದಿ ಅರೇಬಿಯಾ ಮತ್ತು ಬಾಂಗ್ಲಾದೇಶದ ಕೆಲವು ಬ್ಯಾಂಕುಗಳಿಗೆ ಎಚ್ಎಸ್.ಬಿಸಿ ಬ್ಯಾಂಕ್ ಮೂಲಕ ಭಾರಿ ಮೊತ್ತದ ಅಮೆರಿಕನ್ ಡಾಲರ್ ಗಳನ್ನು ವರ್ಗಾಯಿಸಿರುವುದು ಕಂಡುಬಂದಿದೆ.

ಬ್ಯಾಂಕಿಂಗ್ ನಿಯಮ ಮೀರಲಾಗಿದೆ: ಅಮೆರಿಕದ ಬ್ಯಾಂಕಿಂಗ್ ನಿಯಮಗಳನ್ನು ಗಾಳಿಗೆ ತೂರಿ ಯುಎಸ್ ಡಾಲರ್ ಸೇವೆಗಳನ್ನು ಒದಗಿಸಲು ಎಚ್.ಎಸ್.ಬಿ.ಸಿ ತನ್ನ ಅಮೆರಿಕನ್ ಶಾಖೆಗಳನ್ನು ಹೆಬ್ಬಾಗಿಲಿನಿಂತೆ ಬಳಸಿಕೊಳ್ಳುತ್ತಿದೆ ಎಂದು ತನಿಖಾ ಸಮಿತಿಯ ಮುಖ್ಯಸ್ಥ ಕಾರ್ಲ್ ಲೆವಿನ್ ಹೇಳಿದ್ದರು.

ಎಚ್.ಎಸ್.ಬಿ.ಸಿಯ ಮೆಕ್ಸಿಕನ್ ಸಹವರ್ತಿ ಬ್ಯಾಂಕು, 2007-08ರ ನಡುವೆ ಇತರ ಮೆಕ್ಸಿಕನ್ ಬ್ಯಾಂಕುಗಳನ್ನು ಹಿಂದಿಕ್ಕಿ 7 ಶತಕೋಟಿ ಯುಎಸ್ ಡಾಲರ್ ಗಳನ್ನು ಎಚ್.ಎಸ್.ಬಿ.ಯುಎಸ್ ಗೆ ಭೌತಿಕವಾಗಿ ಸಾಗಣೆ ಮಾಡಿದೆ. ಅದೇ ವೇಳೆಗೆ ಅಮೆರಿಕದಲ್ಲಿ ಅಕ್ರಮ ಔಷಧಗಳ ಮಾರಾಟ ಹೆಚ್ಚಿರುವುದು ಪತ್ತೆಯಾಗಿದೆ.

ಹಣಕಾಸು ಭಯೋತ್ಪಾದನೆ ನಡೆಸುತ್ತಿರುವ ಸೌದಿ ಅರೇಬಿಯಾದ ಅಲ್ ರಝಿ ಬ್ಯಾಂಕಿಗೆ ಭಾರತದ ರೂಪಾಯಿಯನ್ನು ಪೂರೈಸಲು 2009ರಲ್ಲಿ ಎಚ್.ಎಸ್.ಬಿ.ಸಿ ತನ್ನ ಭಾರತೀಯ ಸಹವರ್ತಿ ಬ್ಯಾಂಕಿಗೆ ಅಧಿಕಾರ ನೀಡಿತ್ತು. 2007ರಿಂದ 2010ರ ನಡುವೆ ಅಮೆರಿಕದ ಎಚ್.ಎಸ್.ಬಿ.ಸಿ ಬ್ಯಾಂಕು ತನ್ನ ಲಂಡನ್ ಶಾಖೆಯ ಮೂಲಕ ಸೌದಿ ಅರೇಬಿಯಾದ ಅಲ್ ರಝಿ ಬ್ಯಾಂಕಿಗೆ ಲಕ್ಷಾಂತರ ಡಾಲರ್ ಗಳನ್ನು ಪೂರೈಸಿದೆ.

ಸುಮಾರು 80 ದೇಶಗಳಲ್ಲಿ 7,20೦ ಕಚೇರಿಗಳನ್ನು ಹೊಂದಿದ್ದು, ಅಮೆರಿಕದ HBUS 470 ಬ್ರ್ಯಾಂಚ್ ಗಳ ಮೂಲಕ 4 ಮಿಲಿಯನ್ ಗ್ರಾಹಕರನ್ನು ಹೊಂದಿದೆ. HBUS ನಂಬಿಕೊಂಡು 1,200 ಸಣ್ಣ ಪುಟ್ಟ ಬ್ಯಾಂಕ್ ಗಳು ಕಾರ್ಯ ನಿರ್ವಹಿಸುತ್ತಿದೆ.

ಇನ್ಫಿ ಮೂರ್ತಿ ಹಿಂದಕ್ಕೆ: 2012ರ ಅಂತ್ಯಕ್ಕೆ ಎಚ್ ಎಸ್ ಬಿಸಿ ಮಂಡಳಿ ನಿರ್ದೇಶಕ ಸ್ಥಾನದಿಂದ ನಿವೃತ್ತಿ ಪಡೆಯಲು ಇನ್ಫಿ ಮೂರ್ತಿ ಬಯಸಿದ್ದಾರೆ

ಎನ್ ಆರ್ ನಾರಾಯಣ ಮೂರ್ತಿ ಅವರು ನಿವೃತ್ತಿ ಬಯಸುತ್ತಿರುವುದಕ್ಕೆ ಸರಿಯಾದ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ. ಅವರ ಅಧಿಕಾರ ಅವಧಿ ಮುಕ್ತಾಯವಾಗಿದ್ದರೂ ಮುಂದಿನ ಅವಧಿಗೂ ಮುಂದುವರೆಯಬಹುದಾಗಿತ್ತು. ಅದರೆ, ಇತ್ತೀಚಿಗೆ ಎಚ್ಎಸ್ ಬಿಸಿ ಸಂಸ್ಥೆಯಲ್ಲಿ ಅದ ಬೆಳವಣಿಗೆಗಳು ಆರೋಪಗಳು ಮುಂತಾದವು ಎನ್ನಾರೆನ್ ಅವರನ್ನು ಬಾಧಿಸಿತ್ತು ಎನ್ನಲಾಗಿದೆ.

English summary
HSBC said it will pay out a total of $1.92 billion to US authorities to settle long-running investigations into breaches of US anti money-laundering rules. Global banking giant HSBC failed in preventing money laundering by drug cartels and terrorists not only in the US, but also other parts of the world, possibly including India, US investigation said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more