ನನಗ್ಯಾರೂ ಅಳಿಯಂದಿರು ಇಲ್ಲ,ನಾ ಕಲಿಯುಗದ ಹನುಮಂತ

ರಾಮಾಯಣದ ಹನುಮಂತ ಭಕ್ತಿ ಮತ್ತು ಸೇವೆಯ ಕಟ್ಟಾಳು. ಈ ನಿಮ್ಮ ಮೋದಿ ಆರು ಕೋಟಿ ಗುಜರಾತಿಗರ ಸೇವೆ ಮಾಡುವ ಕಟ್ಟಾಳು. ನಿಮ್ಮ ಸೇವೆ ಮಾಡುವ ಭಾಗ್ಯ ನನಗೆ ಸಿಕ್ಕಿರುವುದು ನನ್ನ ಪುಣ್ಯ. ನಾನು ಗುಜರಾತಿಗರ ಪಾಲಿಗೆ 'ಕಲಿಯುಗದ ಹನುಮಂತ' ಎಂದು ಕಾಂಗ್ರೆಸಿಗರಿಗೆ ಮೋದಿ ತಿರುಗೇಟು ನೀಡಿದ್ದಾರೆ.
ನನಗೆ ಯಾರೂ ಅಳಿಯಂದಿರು ಇಲ್ಲ. ನನಗೆ ಗುಜರಾತಿಗರೇ ಸರ್ವಶ್ವ. ಕುಟಂಬ ರಾಜಕಾರಣಕ್ಕೆ ತಿಲಾಂಜಲಿ ಇಟ್ಟು, ಹೊಸ ರಾಜಕೀಯ ಶಕೆ ಆರಂಭಿಸೋಣ. ಕೆಲವರಿಗೆ ರಾಜಕೀಯ ಎನ್ನುವದು ಬ್ಯೂಸಿನೆಸ್ ಆಗಿದೆ ಎಂದು ಕಾಂಗ್ರೆಸ್ ಪಕ್ಷವನ್ನು ಮತ್ತು ಸೋನಿಯಾ ಗಾಂಧಿಯವರನ್ನು ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಿಕ್ಕಿರಿದು ಸೇರಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ಗುಜರಾತಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿಕೆ ನೀಡುವ ಕಾಂಗ್ರೆಸಿಗರು, ಮೊದಲು ರಾಷ್ಟ್ರದ ರಾಜಧಾನಿ 'ಕ್ರೈಂ ಕ್ಯಾಪಿಟಲ್' ಆಗಿರುವುದನ್ನು ಮರೆಯಬಾರದು ಎಂದು ಟಾಂಗ್ ನೀಡಿದ್ದಾರೆ.
ಮೊದಲ ಹಂತದ ಬಹಿರಂಗ ಪ್ರಚಾರಕ್ಕೆ ಇಂದು ತೆರೆ: ಮೊದಲ ಹಂತದ ಚುನಾವಣಾ ಪ್ರಚಾರಕ್ಕೆ ಇಂದು (ಡಿ 11) ತೆರೆ ಬೀಳಲಿದೆ. 87 ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ (ಡಿ 13) ಮೊದಲ ಹಂತದ ಚುನಾವಣೆ ನಡೆಯಲಿದೆ.
ಸೋಮವಾರ (ಡಿ 17) 95 ಕ್ಷೇತ್ರಗಳಲ್ಲಿ ಎರಡನೇ ಮತ್ತು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಮಣಿನಗರ ಕ್ಷೇತ್ರದಿಂದ ನರೇಂದ್ರ ಮೋದಿ ಸ್ಪರ್ಧಿಸಿದರೆ, ಅವರ ಕಟ್ಟಾ ರಾಜಕೀಯ ಎದುರಾಳಿ ಕೇಶುಭಾಯಿ ಪಟೇಲ್ ವಿಶಾವದಾರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಗುರುವಾರದಂದು (ಡಿ 20) ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯದ ಅಸೆಂಬ್ಲಿ ಚುನಾವಣೆಯ ಮತಎಣಿಕೆ ಕಾರ್ಯ ನಡೆಯಲಿದೆ.












Click it and Unblock the Notifications