4 ವಿದ್ಯಾರ್ಥಿಗಳು ಫುಟ್ ಬೋರ್ಡಿನಿಂದ ಸಾವಿನ ಮನೆಗೆ

ಕಾಂತನಚಾವಡಿ ಬಳಿ ಸೋಮವಾರ ಈ ದುರ್ಘಟನೆ ನಡೆದಿದೆ. ದುರ್ದೈವಿ ಕಾಲೇಜು ಹುಡುಗರು ಪ್ರಯಾಣಿಸುತ್ತಿದ್ದ ಬಸ್ಸಿಗೆ ಲಾರಿಯೊಂದು ಮುತ್ತಿಕ್ಕಿದೆ. ಅಷ್ಟೇ, ನಾಲ್ವರೂ ವಿದ್ಯಾರ್ಥಿಗಳು ರಸ್ತೆಗೆ ಉರುಳಿದ್ದಾರೆ. ಅವರ ಮೇಲೆ ಲಾರಿ ಹರಿದಿದೆ. ಸ್ಥಳದಲ್ಲೇ ಹುಡುಗರು ಪ್ರಾಣಬಿಟ್ಟಿದ್ದಾರೆ. ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದಾರೆ.
ಶೇಖರ್ (18), ಬಾಲಮುರುಗನ್ (14), ಮನೋಜ್ ಕುಮಾರ್ (16) ಮತ್ತು ಸುನಾಮಿ ನಗರದ ವಿಜಯನ್ (16) ಮೃತಪಟ್ಟವರು.
510 ಸಂಖ್ಯೆಯ MTC ಬಸ್ಸು ತಿರುಪೊರೂರ್ ನಿಂದ ಟಿ. ನಗರದತ್ತ ಸಂಚರಿಸುತ್ತಿತ್ತು. ಆಂಧ್ರದ ಸರಕು ಸಾಗಣೆ ಲಾರಿಯ ಡ್ರೈವರ್ ತಿರುವಿನಲ್ಲಿ ಹಿಂದಕ್ಕೆ ಚಲಿಸುವಾಗ ಹಿಂದಿದ್ದ ಬಸ್ಸಿಗೆ ಗುದ್ದಿದ್ದಾನೆ. ತತ್ಪರಿಣಾಮವಾಗಿ ದುರ್ದೈವಿ ವಿದ್ಯಾರ್ಥಿಗಳು ಕೆಳಕ್ಕೆ ಉರುಳಿದ್ದಾರೆ. ಲಾರಿ ಅವರ ಮೇಲೆ ಹತ್ತಿಕೊಂಡು ಹೋಗಿದೆ.












Click it and Unblock the Notifications