ನಿರೀಕ್ಷೆಯಂತೆ ಮೇಲ್ಮನೆ/ಬಿಜೆಪಿಗೆ ಸಂಕೇಶ್ವರ್ ರಾಜೀನಾಮೆ

mlc-vijay-sankeshwar-resigns-from-bjp-mlc-in-belgaum
ಹುಬ್ಬಳ್ಳಿ, ಡಿ.11: ಮಾಜಿ ಸಿಎಂ ಯಡಿಯೂರಪ್ಪ ಅವರ KJP ಜತೆ ಇತ್ತೀಚೆಗೆ ಗಾಢವಾಗಿ ಗುರುತಿಸಿಕೊಂಡಿದ್ದ ಬಿಜೆಪಿಯ ಮೇಲ್ಮನೆ ಸದಸ್ಯ, ಪತ್ರಿಕೋದ್ಯಮಿ ವಿಜಯ ಸಂಕೇಶ್ವರ್ ಅವರು MLC ಸ್ಥಾನಕ್ಕೆ ನಿರೀಕ್ಷೆಯಂತೆ ರಾಜೀನಾಮೆ ನೀಡಿದ್ದಾರೆ. ಇನ್ನೂ ಅನೇಕ MLCಗಳು ಇಂದು ರಾಜೀನಾಮೆ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡಿರುವ ವಿಜಯ ಸಂಕೇಶ್ವರ ಅವರು ಇದೀಗ ತಾನೆ ತಮ್ಮ ರಾಜೀನಾಮೆ ಪತ್ರವನ್ನು ಪರಿಷತ್ತಿನ ಸಭಾಪತಿಗೆ ತಲುಪಿಸಿದ್ದು, ಬಿಜೆಪಿ ಜತೆಗಿನ ಸುದೀರ್ಘ ಸಂಬಂಧವನ್ನು ಕಡಿದುಕೊಂಡಿದ್ದಾರೆ.

ಇದೇ ವೇಳೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿರುವ ಸಂಕೇಶ್ವರ, BJPಯಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ. RSS ಹಿಡಿತದಲ್ಲಿ BJP ಸಿಲುಕಿದೆ. ಬಿಜೆಪಿ ಈಗ ಶಿಸ್ತಿನ ಪಕ್ಷವಾಗಿ ಉಳಿದಿಲ್ಲ. ಆದ್ದರಿಂದ ಪಕ್ಷದೊಂದಿಗೆ ಸಂಬಂಧ ಕಡಿದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

KJP ಜತೆ ಗುರುತಿಸಿಕೊಂಡಿರುವ ಮೇಲ್ಮನೆ ಸದಸ್ಯರ ಬಗ್ಗೆ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಮಂತ್ರಾಲೋಚಿಸಲು ಮಾಜಿ ಸಿಎಂ ಸದಾನಂದ ಗೌಡ ನೇತೃತ್ವದಲ್ಲಿ ಬಿಜೆಪಿ ನಾಯಕರು ಸಭೆ ಸೇರಿರುವ ಸಮಯದಲ್ಲೇ ಇತ್ತ ಸಂಕೇಶ್ವರ ಅವರು ಸಭಾಪತಿ ಡಿಎಚ್ ಶಂಕರಮೂರ್ತಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಸಂಕೇಶ್ವರ ರಾಜೀನಾಮೆಯನ್ನು ಸಭಾಪತಿ ಅಂಗೀಕರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+