ವಿಧಾನಸಭೆ ವಿಸರ್ಜಿಸಿ, ಶೆಟ್ಟರ್ ಗೆ ಯಡಿಯೂರಪ್ಪ ಸವಾಲು

Karnataka Janata Paksha Launch Haveri
ಹಾವೇರಿ, ಡಿ.9: ಜಗದೀಶ್ ಶೆಟ್ಟರ್ ಅವರದು ಸಮ್ಮಿಶ್ರ ಸರ್ಕಾರ. ಅಮಾಯಕರ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಬಿಜೆಪಿ ಸಂಬಂಧ ಕಡಿದು ಹೋಗಿದೆ. ಇಷ್ಟ ಇದ್ರೆ ಸರ್ಕಾರ ನಡೆಸಿ ಇಲ್ಲದಿದ್ದರೆ ವಿಧಾನಸಭೆ ವಿಸರ್ಜಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸವಾಲು ಹಾಕಿದ್ದಾರೆ.

ಬಿಜೆಪಿಗೆ ತಾಕತ್ತಿದ್ದರೆ ಚುನಾವಣೆ ಎದುರಿಸಲಿ. ರಾಜ್ಯದೆಲ್ಲೆಡೆ ಪ್ರವಾಸ ನಡೆಸುತ್ತೇನೆ. ಬೀದರ್ ನಿಂದ ಪ್ರವಾಸ ಆರಂಭವಾಗಲಿದೆ ಎಂದು ಬಿಎಸ್ ಯಡಿಯೂರಪ್ಪ ಅವರು ಶಿವರಾಜ್ ಸಜ್ಜನ್ ಮನೆಯಲ್ಲಿ ಉಪಹಾರ ಸೇವಿಸಿದ ನಂತರ ಚುಟುಕಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಹಾವೇರಿ ಹಾನಗಲ್ ರಸ್ತೆಯಿಂದ ಹೊರಟ ಯಡಿಯೂರಪ್ಪ ಅವರು ತೆರೆದ ಜೀಪ್ ನಲ್ಲಿ ಕೊಳ್ಳಿ ಪಾಲಿಟೆಕ್ನಿಕ್ ನಿಂದ ಕೆಜೆಪಿ ಉದ್ಘಾಟನಾ ಸಮಾರಂಭಕ್ಕೆ ಸಜ್ಜಾಗಿರುವ ಸಿದ್ದಯ್ಯ ಮೈದಾನದ ತನಕ ಮೆರವಣಿಗೆಯಲ್ಲಿ ಸಾಗಿದ್ದಾರೆ.

ಕರ್ನಾಟಕದ ಜನತೆಗೆ ಮುಖ್ಯಮಂತ್ರಿ ಗೊತ್ತಿದೆ ನನ್ನ ಜೊತೆ ಎಷ್ಟು ಜನ ಶಾಸಕರು ಇದ್ದಾರೆ ಎಂಬುದು ಗೊತ್ತಿದೆ. ವೇದಿಕೆ ಏರುವಂತೆ ನಾವು ಯಾವ ಶಾಸಕರು, ಸಚಿವರು, ಸಂಸದರಿಗೂ ಕರೆ ನೀಡಿಲ್ಲ. ನನ್ನ ಮೇಲಿನ ಅಭಿಮಾನದಿಂದ ಎಲ್ಲರೂ ಬಂದಿದ್ದಾರೆ ಹೊರತು ಯಾರ ಮೇಲೂ ಒತ್ತಡ ಹೇರಿಲ್ಲ ಎಂದು ಯಡಿಯೂರಪ್ಪ ಹೇಳಿದರು.

ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ. ನನ್ನ ಮೇಲಿನ ಕೋಪಕ್ಕೆ ಬಿಜೆ ಪುಟ್ಟಸ್ವಾಮಿ ಅವರನ್ನು ಸಂಪುಟದಿಂದ ತೆಗೆದು ಹಾಕಲಾಗಿದೆ ಹಾಗೂ ಸಂಸದ ಬಸವರಾಜು ಅವರನ್ನು ಅಮಾನತುಗೊಳಿಸಿದ್ದಾರೆ.

ನನ್ನ ಜೊತೆ 50ಕ್ಕೂ ಅಧಿಕ ಶಾಸಕರು ನನ್ನ ಜೊತೆಗಿದ್ದಾರೆ. ಸರ್ಕಾರ ಉಳಿಸಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟಿದ್ದು, ನಾನು ಆ ಬಗ್ಗೆ ಆಸಕ್ತಿವಹಿಸಿಲ್ಲ ಎಂದು ಯಡಿಯೂರಪ್ಪ ಹೇಳಿದರು. [ಕೆಜೆಪಿ ವೇದಿಕೆಯಲ್ಲಿ ಯಾರಿದ್ದಾರೆ?]

ವೇದಿಕೆಯಲ್ಲಿ ಸುಮಾರು 100ಕ್ಕೂ ಅಧಿಕ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಮಧ್ಯ ಭಾಗದಲ್ಲಿರುವ ಹಾವೇರಿಯಲ್ಲಿ ಹಂಗಾಮಿ ಅಧ್ಯಕ್ಷ ಧನಂಜಯ್ ಕುಮಾರ್ ಅವರು ಬಿಎಸ್ ಯಡಿಯೂರಪ್ಪ ಅವರಿಗೆ ಅಧ್ಯಕ್ಷ ಪಟ್ಟವನ್ನು ಹಸ್ತಾಂತರಗೊಳಿಸಲಿದ್ದಾರೆ ಎಂದು ಲಕ್ಷ್ಮಿನಾರಾಯಣ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+