ಬೆಂಗಳೂರಿನಲ್ಲಿ ಶಿಲಾಯುಗದ ಗುಹೆಯೊಳಗೆ ಭೋಜನ

Posted By:
Subscribe to Oneindia Kannada

ಬೆಂಗಳೂರು, ಡಿ. 7 : ಅದೊಂದು ಶಿಲಾಯುಗದ ಗುಹೆಯಂತಹ ನಿರ್ಮಾಣ. ಶಿಲಾಯುಗದಲ್ಲಿ ಮನುಷ್ಯ ಗುಹೆಗಳಲ್ಲೇ ವಾಸ ಮಾಡುತ್ತಿದ್ದುದರ ಸಂಕೇತ. ನಗರದ ಜಂಜಡದಿಂದ ಮತ್ತೆ ಪ್ರಾಚೀನ ಕಾಲಕ್ಕೆ ಹೋಗುವುದು ಸಾಧ್ಯವೇ ಎಂದು ಅದೆಷ್ಟೋ ಮಂದಿ ಬಯಸುತ್ತಿರುತ್ತಾರೆ.

ವಾಸ್ತವದಲ್ಲಿ ಅದು ಅಸಾಧ್ಯವಾದರೂ ಒಂದಿಷ್ಟು ಹೊತ್ತು ಅಂತಹ ಪರಿಸರದಲ್ಲಿ ಸಂಸಾರದ ಜತೆಯಲ್ಲಿ ಕಾಲ ಕಳೆಯುವ ಅವಕಾಶ ದೊರೆತರೆ ಅದೆಷ್ಟು ಮಜವಾಗಿರುತ್ತದೆ ಅಲ್ಲವೇ? ಅಂತಹ ಅವಕಾಶ ಬೆಂಗಳೂರು ನಗರದಲ್ಲಿ ಬಂದುಬಿಟ್ಟಿದೆ. ಅದುವೇ ಬಸವೇಶ್ವರನಗರದಲ್ಲಿ ಸ್ಥಾಪನೆಗೊಂಡಿರುವ 'ಕೇವ್ ಎನ್ ಡೈನ್' ಫ್ಯಾಮಿಲಿ ರೆಸ್ಟೋರೆಂಟ್.

ಕಾಲಚಕ್ರವನ್ನು ಶಿಲಾಯುಗಕ್ಕೆ ತಳ್ಳಿದಂತೆ ಭಾವನೆ ಮೂಡಿಸುವ ಈ ವಿಶಿಷ್ಟವಾದ ಸ್ಥಳದಲ್ಲಿ ಇಡೀ ಕುಟುಂಬದೊಡನೆ ಕುಳಿತುಕೊಂಡು, ವಾರಾಂತ್ಯದಲ್ಲಿ ಸವಿಯಾದ ಭೋಜನ ಮಾಡುವುದೇ ಒಂದು ವಿಶಿಷ್ಟವಾದ ಅನುಭವ. ಇಂಥ ಹೋಟೆಲೊಳಗೆ ಒಂದು ಸುತ್ತು ಹಾಕಿಬರೋಣ ಬನ್ನಿ.

ಶಿಲೆಯಲ್ಲಿ ಅರಳಿದಂತಹ ಪ್ರಾಚೀನ ಗುಹೆ

ಶಿಲೆಯಲ್ಲಿ ಅರಳಿದಂತಹ ಪ್ರಾಚೀನ ಗುಹೆ

ಒಳಗೆ ಕಾಲಿಟ್ಟೊಡನೆ ಥಟ್ಟನೆ ಆಗುವುದು ಪ್ರಾಚೀನ ಕಾಲದ ಗುಹೆಯೊಳಗೆಯೇ ತೆರಳಿದ್ದೇವೆಯೇ ಎಂಬ ಅನುಭವ. ಅಲ್ಲಿನ ಗತಕಾಲದ ಶಿಲ್ಪಗಳು, ಮ್ಯೂರಲ್‌ಗಳು, ವಿಶಿಷ್ಟ ವಿನ್ಯಾಸದ ವಿದ್ಯುತ್ ದೀಪಗಳು ಬೀರುವ ಮಂದ ಬೆಳಕಿನಲ್ಲಿ ಕಾಣಿಸುವ ಅತ್ಯಾಕರ್ಷಕ ಚಿತ್ರಗಳು, ಶಿಲ್ಪಗಳು ಮನಸ್ಸಿಗೆ ಅತ್ಯಂತ ಮುದ ಕೊಡುತ್ತವೆ. ಕಲಾ ರಸಿಗರಿಗಂತೂ ಇದು ಮನಸ್ಸನ್ನು ಮುಟ್ಟುವ ತಾಣ.

ಜೇಡರ ಬಲೆ, ಗೀಜಗನ ಗೂಡು, ಪೊಟರೆಗಳು

ಜೇಡರ ಬಲೆ, ಗೀಜಗನ ಗೂಡು, ಪೊಟರೆಗಳು

ಗುಹೆಯಲ್ಲಿ ಜೇಡರ ಬಲೆಗಳು, ಗೀಜಗನ ಗೂಡಿನಂತಹ ಗೂಡುಗಳು, ಪೊಟರೆಗಳು, ಕೊರಕಲುಗಳು, ಬಿಲಗಳು, ಗಿಡಗಂಟಿಗಳು ಸಹಜವಲ್ಲವೇ? ಅಂತಹ ಸನ್ನಿವೇಶವನ್ನೆಲ್ಲಾ ಇಲ್ಲಿ ಸೃಷ್ಟಿಸಲಾಗಿದೆ. ಥಟ್ಟನೆ ನೊಡಿದರೆ ಇದೊಂದು ಸಿನಿಮಾ ಸೆಟ್ ಅನ್ನಿಸಬಹುದು. ಆದರೆ ಇದು ಒಮ್ಮೆ ಸಿದ್ಧಪಡಿಸಿ ನಾಳೆ ತೆಗೆದುಬಿಡುವ ಸೆಟ್ ಅಲ್ಲ, ಕಾಯಂ ಆಗಿ ಗ್ರಾಹಕರಿಗೆ ಖುಷಿ ನೀಡುವ ಗುಹಾಂತರ ಹೋಟೆಲ್.

ಇಂಡಿಯನ್, ಚೈನೀಸ್, ಕರಾವಳಿ ಖಾದ್ಯ

ಇಂಡಿಯನ್, ಚೈನೀಸ್, ಕರಾವಳಿ ಖಾದ್ಯ

ಕೇವಲ ಗುಹೆಯಲ್ಲಿ ಏಕಾಂತದಲ್ಲಿ ಉಣ್ಣುವ ಅನುಭವಕ್ಕಷ್ಟೇ ಇದು ಸೀಮಿತವಲ್ಲ, ಫೈನ್‌ಡೈನ್ ಊಟೋಪಚಾರದ ವ್ಯವಸ್ಥೆಯೂ ಇಲ್ಲಿದೆ. 250ರಿಂದ 300 ಮಂದಿ ಒಮ್ಮೆಲೇ ಕುಳಿತು ಊಟ ಮಾಡಬಹುದಾದ ವಿಶಾಲ ಬ್ಯಾಂಕ್ವೆಟ್ ಹಾಲ್ ಇದೆ. ಇಂಡಿಯನ್, ಚೈನೀಸ್ ಮತ್ತು ಕರಾವಳಿ ಭಾಗದ ವಿವಿಧ ಬಗೆಯ ಖಾದ್ಯಗಳು, ಪಾನೀಯಗಳು ಇಲ್ಲಿ ಲಭ್ಯವಿದೆ ಎನ್ನುತ್ತಾರೆ ಈ ರೆಸ್ಟೋರೆಂಟ್‌ನ ಮಾಲೀಕ ಹಾಗೂ ವಿಶಿಷ್ಟ ಪರಿಕಲ್ಪನೆಯ ರೂವಾರಿಗಳು ನಗರದ ಯುವ ಉದ್ಯಮಿಗಳಾದ ಉಪೇಂದ್ರ ಶೆಟ್ಟಿ, ಆನಂದರಾಮ್‌ಶೆಟ್ಟಿ, ತಾರಾನಾಥ ಶೆಟ್ಟಿ ಹಾಗೂ ಪ್ರಶಾಂತ್.

ಭಾನುವಾರದವರೆಗೆ ರುಮಾಲಿ ರೋಟಿ ಉತ್ಸವ

ಭಾನುವಾರದವರೆಗೆ ರುಮಾಲಿ ರೋಟಿ ಉತ್ಸವ

ಕೇವ್ ಎನ್ ಡೈನ್ ಫ್ಯಾಮಿಲಿ ರೆಸ್ಟೋರೆಂಟ್‌ನ ಉದ್ಘಾಟನೆ ಪ್ರಯುಕ್ತ ಗ್ರಾಹಕರಿಗಾಗಿ 'ರುಮಾಲಿ ರೋಟಿ ಫೆಸ್ಟ್' ಎಂಬ ವಿಶಿಷ್ಟ ಆಹಾರ ಉತ್ಸವವನ್ನು ಡಿಸೆಂಬರ್ 6ರಿಂದ 9 ಭಾನುವಾರದವರೆಗೆ ಹಮ್ಮಿಕೊಳ್ಳಲಾಗಿದೆ.

ರೋಟಿ ತಯಾರಿ ನೋಡುವುದೇ ಒಂದು ಥ್ರಿಲ್

ರೋಟಿ ತಯಾರಿ ನೋಡುವುದೇ ಒಂದು ಥ್ರಿಲ್

ರುಮಾಲಿ ರೋಟಿ ತಯಾರು ಮಾಡುವುದನ್ನು ನೋಡುವುದೇ ಒಂದು ಥ್ರಿಲ್. ಅನುಭವಿ ಬಾಣಸಿಗರಿಗಷ್ಟೇ ಈ ಕಲೆ ಸಿದ್ಧಿಸಿರುತ್ತದೆ. ಗಜಗಾತ್ರದ ರುಮಾಲಿ ರೋಟಿಯನ್ನು ಸಿದ್ಧಗೊಳ್ಳುವುದಕ್ಕೆ ಮೊದಲು ಹಿಟ್ಟನ್ನು ಹದಗೊಳಿಸಿ ಜಿಮ್ನಾಸ್ಟಿಕ್‌ನಂತೆ ಅದನ್ನು ಉದ್ದವಾಗಿ ಎಳೆದು, ಗರಗರನೆ ತಿರುಗಿಸಿ ರೋಟಿ ತಟ್ಟುವ ಬಗೆ ವಿಶಿಷ್ಟ. ನಮ್ಮ ಕಣ್ಣೆದುರಲ್ಲೇ ನಾಲ್ಕಾರು ಬಾಣಸಿಗರು ಮಾಡುವ ರುಮಾಲಿ ರೋಟಿಗಳನ್ನು ನೋಡುತ್ತಲೇ ಅದನ್ನು ಸವಿಯುವ ಅವಕಾಶ ಈ ಉತ್ಸವದ ಸಂದರ್ಭದಲ್ಲಿ ಲಭ್ಯವಾಗಲಿದೆ.

ಸಸ್ಯಾಹಾರದ ಜೊತೆ ಮಾಂಸಾಹಾರವೂ ಉಂಟು

ಸಸ್ಯಾಹಾರದ ಜೊತೆ ಮಾಂಸಾಹಾರವೂ ಉಂಟು

ರೋಟಿಯೊಂದಿಗೆ 10ಕ್ಕೂ ಹೆಚ್ಚು ಬಗೆಯ ಪ್ರತ್ಯೇಕವಾಗಿ ಸಸ್ಯಾಹಾರ ಮತ್ತು ಮಾಂಸಾಹಾರ ಗ್ರೇವಿಗಳಿರುತ್ತವೆ. ಹೀಗಾಗಿ ಗ್ರಾಹಕರಿಗೆ ಅವರ ಆಯ್ಕೆಯ ಗ್ರೇವಿಯ ಜತೆಗೆ ರುಮಾಲಿ ರೋಟಿಯ ಸವಿ ಸವಿಯಬಹುದು. ಉತ್ಸವದ ಈ ನಾಲ್ಕೂ ದಿನ ವಿಶೇಷ ರಿಯಾಯಿತಿ ಇರುತ್ತದೆ. ಜತೆಗೆ ಈ ಗುಹಾಂತರ ಹೋಟೆಲ್‌ನಲ್ಲಿ ಇತರ ಸಾಮಾನ್ಯ ಊಟದ ವ್ಯವಸ್ಥೆಯೂ ಇರುತ್ತದೆ.

ಮನಸೆಳೆಯುವ ವಿಶಿಷ್ಟ ವಿನ್ಯಾಸ

ಮನಸೆಳೆಯುವ ವಿಶಿಷ್ಟ ವಿನ್ಯಾಸ

ಕೇವ್ ಎನ್ ಡೈನ್ ಇತರ ಹೋಟೆಲ್‌ಗಳಂತಲ್ಲ ಎಂಬುದಕ್ಕೆ ಇದರ ವಿಶಿಷ್ಟ ವಿನ್ಯಾಸವೇ ಸಾಕ್ಷಿ. ಇಲ್ಲಿನ ಆಹಾರ ಮಾತ್ರವಲ್ಲ, ಇಲ್ಲಿನ ವಿಶಿಷ್ಟ ವಿನ್ಯಾಸಕ್ಕೆ ಮನಸೋತು ಗ್ರಾಹಕರು ಮತ್ತೆ ಮತ್ತೆ ಇಲ್ಲಿಗೆ ಬರುವುದು ನಿಶ್ಚಿತ. ನಗರದ ಯಾಂತ್ರಿಕ ಜೀವನದಿಂದ ಒಂದಿಷ್ಟು ವಿರಾಮ ಪಡೆದುಕೊಳ್ಳಲು, ಹೊಟ್ಟೆಯನ್ನು ತುಂಬಿಕೊಳ್ಳಲು ಮತ್ತು ಮನಸ್ಸನ್ನು ನಿರಾಳ ಮಾಡಿಕೊಳ್ಳಲು ಕಾಯುತ್ತಿದೆ ಕೇವ್ ಎನ್ ಡೈನ್ ಫ್ಯಾಮಿಲಿ ರೆಸ್ಟೋರೆಂಟ್.

ಕೇವ್ ಎನ್ ಡೈನ್ ಎಲ್ಲಿದೆ?

ಕೇವ್ ಎನ್ ಡೈನ್ ಎಲ್ಲಿದೆ?

ಶ್ರೀ ರಮಣ ಮಹರ್ಷಿ ಹಾಸ್ಪಿಟಾಲಿಟಿ ಪ್ರೈ.ಲಿ, ಕೇವ್ ಎಂಡ್ ಡೈನ್, 4ನೇ ಹಂತ, 3ನೇ ಬ್ಲಾಕ್, ಬಸವೇಶ್ವರನಗರ, ಬೆಂಗಳೂರು. ಮಾಹಿತಿಗೆ ಸಂಪರ್ಕಿಸಿ : Phone: 9900055032, 080-23102051, ಈಮೇಲ್ : cavendine@yahoo.com

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Our ancestors were living inside the caves during Stone Age. Many of us would love to have an experience of residing, dining inside a cave. Here is Cave N Dine Family Restaurant in Basaveshwaranagara in Bangalore which is of its kind, themed like a natural cave.
Please Wait while comments are loading...