ಗಾಲಿ ರೆಡ್ಡಿ ಗಣಿ ಆಸ್ತಿಯೆಲ್ಲ ಸರಕಾರಕ್ಕೆ ಹೋಯ್ತು

ರೆಡ್ಡಿಗೆ ಜಾಮೀನು ಹೊಂದಿಸಲು ಮನೆಯಲ್ಲಿದ್ದ ಬಂಗಾರವನ್ನು ಮಾರಿಕೊಂಡರು ಎಂಬ ಮಾಹಿತಿಯಿರುವಾಗ ಈಗ ಇದ್ದಬದ್ದ ಆಸ್ತಿಯೂ ಸರಕಾರದ ಸ್ವಾಧೀನಕ್ಕೆ ಹೋಗಿರುವುದು ಚುನಾವಣೆಗೆ ಸಿದ್ಧವಾಗುತ್ತಿರುವ ಜನಾರ್ದನ ರೆಡ್ಡಿಗೆ ಕಂಟಕಪ್ರಾಯವಾಗಿದೆ.
ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮೀ ಅವರ ಮಾಲೀಕತ್ವದ ಬ್ರಹ್ಮಣಿ ಇಂಡಸ್ಟ್ರೀಸ್‌ಗೆ ಸೇರಿದ ಸುಮಾರು 88 ಕೋಟಿ ರೂ ಷೇರುಗಳೂ ಇದರಲ್ಲಿ ಸೇರಿವೆ.
ರೆ್ಡಿಯ ಒಟ್ಟು 884.13 ಕೋಟಿ ರೂ. ಮೌಲ್ಯದ ಗಣಿ ಆಸ್ತಿಯನ್ನು ಅಕ್ರಮ ಲೇವಾದೇವಿ ತಡೆ ಕಾಯಿದೆಯ ಅನ್ವಯ (Prevention of Money Laundering Act) ಅನುಸಾರ ಕೇಂದ್ರ ಹಣಕಾಸು ಇಲಾಖೆಯ ಜಾರಿ ನಿರ್ದೇಶನಾಲಯ ಬುಧವಾರ ಮುಟ್ಟುಗೋಲು ಹಾಕಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಕಂಪನಿಯ ಯಂತ್ರೋಪಕರಣಗಳನ್ನು ಸ್ಥಳಾಂತರಿಸುವುದಾಗಲಿ, ಷೇರು ಬಂಡವಾಳದ ಸ್ವರೂಪವನ್ನು ಮಾರ್ಪಾಡು ಮಾಡುವುದಾಗಲಿ, ಸಂಸ್ಥೆಯನ್ನು ಬಾಡಿಗೆ, ಭೋಗ್ಯಕ್ಕೆ ನೀಡುವುದು, ಜಮೀನು ಪರಭಾರೆ ಮಾಡುವಂತಿಲ್ಲ ಎಂಬ ಮಹತ್ವದ ಆದೇಶ ಹೊರಡಿಸಿದೆ.
ಇದಿಷ್ಟೂ ಆಸ್ತಿ ಓಬಳಾಪುರಂ ಮೈನಿಂಗ್ ಕಂಪನಿಗೆ (ಒಎಂಸಿ) ಸೇರಿದ್ದು. ಅಕ್ರಮ ಅದಿರು ರಫ್ತು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಒಡೆತನದ ಒಎಂಸಿಗೆ ಸೇರಿದ ಆಸ್ತಿ ಮತ್ತು ಷೇರುಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯದ ಬೆಂಗಳೂರು ವಲಯ ಕಚೇರಿಯ ಪ್ರಕಟಣೆ ತಿಳಿಸಿದೆ.












Click it and Unblock the Notifications