ಶಿಕ್ಷಕರ ಆಕ್ರೋಶಕ್ಕೆ 10 ವರ್ಷದ ಬಾಲಕ ಬಲಿ

10-year-old boy dies after teachers beat him up
ಭೋಪಾಲ್, ಡಿ.5: ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರ ಆಕ್ರೋಶಕ್ಕೆ 10 ವರ್ಷ ವಯಸ್ಸಿನ ವಿದ್ಯಾರ್ಥಿ ಬಲಿಯಾದ ಘಟನೆ ಇಲ್ಲಿನ ಬೀಟುಲ್ ಜಿಲ್ಲೆಯ ಪಥಾಖೆಡ ಎಂಬಲ್ಲಿ ನಡೆದಿದೆ. ಇಬ್ಬರು ಶಿಕ್ಷಕರು ವಿದ್ಯಾರ್ಥಿಯೊಬ್ಬನನ್ನು ಮನಬಂದಂತೆ ಥಳಿಸಿದ ಪರಿಣಾಮ ತೀವ್ರ ಅಸ್ವಸ್ಥಗೊಂಡ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಕರ್ನಾಟಕ ಬಿಜಾಪುರದ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರ ಕಿರುಕುಳ ತಾಳಲಾರದೆ ವಿದ್ಯಾರ್ಥಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿ, ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಘಟನೆ ಇಲ್ಲಿ ಸ್ಮರಿಸಬಹುದು.

ಮಧ್ಯಪ್ರದೇಶದ ಈ ಘಟನೆಯಲ್ಲಿ ಇಬ್ಬರು ಶಿಕ್ಷಕರು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಅಸ್ಲಾಮ್ ಅನ್ಸಾರಿ ಬಲಿ ತೆಗೆದುಕೊಂಡಿದ್ದಾರೆ.

ಶಿಕ್ಷಕರ ಹೊಡೆತ ತಾಳದೆ ಕುಸಿದು ಬಿದ್ದಿದ್ದ ಅಸ್ಲಾಂಗೆ ಹಮಿದಿಯಾ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗಿತ್ತು. ಆದರೆ, ಮಂಗಳವಾರ ರಾತ್ರಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದರು.

ಬಿರ್ಜು ಕುಮಾರ್ ಸೋನಾರಿಯಾ ಹಾಗೂ ವಿಜಯ್ ರಾಮ್ ಭಾಗತ್ ಎಂಬ ಇಬ್ಬರು ಶಿಕ್ಷಕರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ನವೆಂಬರ್ 16 ರಿಂದ ಪ್ರತಿದಿನ ಏಟು ಹೆಚ್ಚಾಗಿ ಬಿದ್ದಿತ್ತು. ಇತ್ತೀಚೆಗೆ ಅಸ್ಲಾಂನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

ಅಸ್ಲಾಂ ಬೆನ್ನುಮೂಳೆ ಹಾಗೂ ಕುತ್ತಿಗೆ ಮೂಳೆ ಮುರಿದಿರುವುದು ಕಂಡು ಬಂದಿದೆ. ಈ ಪ್ರಕರಣದ ಸಂಬಂಧ ಬಿರ್ಜು ಕುಮಾರ್ ಅವರನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ವಿಜಯ್ ರಾಮ್ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಹೇಳಿದ್ದಾರೆ.

ಶಾಲೆಯಲ್ಲಿನ ಬಕೇಟ್ ಮುರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕರು ಅಸ್ಲಾಂ ಮೇಲೆ ಅನುಮಾನಪಟ್ಟು ಏಕಾಏಕಿ ಹೊಡೆದಿದ್ದಾರೆ. ಅಸ್ಲಾಂ ಈ ಬಗ್ಗೆ ತನ್ನ ಪೋಷಕರಲ್ಲಿ ಹೇಳಿಕೊಂಡಿದ್ದಾನೆ.

ಅಸ್ಲಾಂ ಪೋಷಕರು ಶಾಲೆಗೆ ಬಂದು ಕೇಳಿದಾಗ ಚಿಕಿತ್ಸೆ ಖರ್ಚಿಗೆಂದು 200 ರು ನೀಡಿದ ಶಿಕ್ಷಕರಿಬ್ಬರು ಏನೂ ನಡೆದಿಲ್ಲ ಎಂಬಂತೆ ವರ್ತಿಸಿದ್ದಾರೆ.

ಹೆಚ್ಚಿನ ಚಿಕಿತ್ಸೆಗಾಗಿ ನಾಗಪುರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ನಂತರ ಭೋಪಾಲ್ ನ ಹಮಿದಿಯಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು,

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಸ್ಲಾಂ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಅಸ್ಲಾಂ ಸಾವನ್ನಪ್ಪಿದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮತ್ತೊಬ್ಬನ ಹುಡುಕಾಟದಲ್ಲಿ ತೊಡಗಿದ್ದಾರೆ,

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+