ಮಹಿಳೆ ಮೊಬೈಲ್ ಬಳಸಿದರೆ 10 ಸಾವಿರ ದಂಡ

Women Banned from using Mobilephone Bihar village
ಪಾಟ್ನಾ, ಡಿ.3: ಬಿಹಾರದ ಗ್ರಾಮ ಪಂಚಾಯಿತಿಯಿಂದ ಕಠಿಣ ಸಂದೇಶ ಹೊರಬಿದ್ದಿದೆ. ಗ್ರಾಮದ ಮಹಿಳೆಯರು ಮೊಬೈಲ್ ಫೋನ್ ಬಳಸುವಂತಿಲ್ಲ ಎಂದು ನಿಷೇಧ ಹೇರಲಾಗಿದೆ.

ಮಹಿಳೆಯರು ಮೊಬೈಲ್ ಹಿಡಿದುಕೊಂಡು ಹರಟುವುದು ಕಂಡು ಬಂದರೆ ಸಾವಿರಾರು ರು ದಂಡ ತೆರಬೇಕಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಘೋಷಿಸಿದೆ.

ಕಿಶನ್ ಗಂಜ್ ಜಿಲ್ಲೆಯ ಕೊಚಾಧಾಮ್ ಬ್ಲಾಕಿನ ಸುಂದರ್ ಬಾಡಿ ಗ್ರಾಮ ಪಂಚಾಯಿತಿಯ ಸಮಾಜ ಸುಧಾರಕರು ಈ ರೀತಿ ವಿಚಿತ್ರ ನಿಯಮವನ್ನು ಗ್ರಾಮದ ಮಹಿಳೆಯರಿಗೆ ವಿಧಿಸಿದೆ.

ಯುವತಿಯರು ಮೊಬೈಲ್ ನಲ್ಲಿ ಸಂಭಾಷಿಸುತ್ತಿದ್ದರೆ 10,000 ರು ದಂಡ ಕಟ್ಟಬೇಕಾಗುತ್ತದೆ. ವಿವಾಹಿತ ಮಹಿಳೆಯರಿಗೆ ದಂಡದ ಪ್ರಮಾಣ ತಗ್ಗಿಸಲಾಗಿದ್ದು 2,000 ರು ದಂಡ ಕಟ್ಟಬೇಕಾಗುತ್ತದೆ, ಗೃಹಿಣಿಯರು ಮನೆಯೊಳಗೆ ಕುಳಿತು ಹರಟುತ್ತಿದ್ದರೂ ದಂಡ ಖಾಯಂ ಎಂದು ಪಂಚಾಯಿತಿ ಮುಖ್ಯಸ್ಥರು ಹೇಳಿದ್ದಾರೆ.

ಬಿಹಾರ ಗ್ರಾಮ ಪಂಚಾಯಿತಿಯಲ್ಲಿ ತೆಗೆದುಕೊಂಡ ನಿರ್ಣಯದ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಅಧಿಅಕರಿಗಳು ಹೇಳಿದ್ದಾರೆ.

ಪಂಚಾಯಿತಿ ಸದಸ್ಯರು ಹಾಗೂ ಎಲ್ಲಾ ವರ್ಗದ ಮುಖ್ಯಸ್ಥರು ಸಭೆ ಸೇರಿ ಈ ನಿರ್ಣಯ ಕೈಗೊಳ್ಳಲಾಗಿದೆ. ಇದರ ಜೊತೆಗೆ ಮಹಿಳೆಯರು ರಸ್ತೆ ಬದಿಯಲ್ಲಿ ಸ್ನಾನ ಮಾಡುವುದನ್ನು ಕೂಡಾ ನಿಷೇಧಿಸಲಾಗಿದೆ ಎಂದು ಪಂಚಾಯಿತಿ ಸದಸ್ಯ ಅಲಂ ಅವರು ಹೇಳಿದ್ದಾರೆ.

ಹಿರಿಯ ಸದಸ್ಯರ ಒಪ್ಪಿಗೆ ಪಡೆದು ಮೊಬೈಲ್ ಫೋನ್ ಬಳಕೆ ನಿಷೇಧದ ನಿರ್ಣಯ ಕೈಗೊಳ್ಳಲಾಗಿದೆ. ಸಮಾಜದ ಎಲ್ಲಾ ಅನೈತಿಕ, ಅನಾಗರಿಕ ಘಟನೆಗಳಿಗೆ ಮೊಬೈಲ್ ಫೋನ್ ಮೂಲವಾಗಿದೆ.

ಸಮಾಜಕ್ಕೆ ಒಂದು ಪೀಡೆಯಾಗಿರುವ ಮೊಬೈಲ್ ಫೋನ್ ಬಳಸಿ ಮಹಿಳೆಯರು ಹಾಳಾಗುವುದನ್ನು ತಪ್ಪಿಸಬೇಕಿದೆ. ಪ್ರೀತಿ ಪ್ರೇಮ, ಅನೈತಿಕ ಸಂಬಂಧ ಚಟುವಟಿಕೆಗಳನ್ನು ಇದರಿಂದ ಹತ್ತಿಕ್ಕಬಹುದಾಗಿದೆ ಎಂದು ಅಲಂ ಹೇಳಿದ್ದಾರೆ.

ಮುಸ್ಲಿಂ ಸಮುದಾಯದವರೇ ಅಧಿಕವಾಗಿರುವ ಕಿಶನ್ ಗಂಜ್ ಜಿಲ್ಲೆ, ಬಿಹಾರದ ಅತ್ಯಂತ ಹಿಂದುಳೀದ ಜಿಲ್ಲೆಗಳಲ್ಲಿ ಒಂದೆನಿಸಿದೆ. ಶೇ 60ಕ್ಕೂ ಅಧಿಕ ಜನ ಇಲ್ಲಿ ಬಡತನದ ರೇಖೆಗಿಂತ ಕೆಳಮಟ್ಟದ ಜೀವನ ಸಾಗಿಸುತ್ತಿದ್ದಾರೆ.

ಭಾರತದಲ್ಲಿ ಎಸ್ಎಂಎಸ್, ಎಂಎಂಎಸ್ ಗೆ ಕಡಿವಾಣ ಹಾಕುವುದು ಮಾಮೂಲಿಯಾದರೂ ಮೊಬೈಲ್ ಫೋನ್ ಬಳಕೆ ನಿಷೇಧಿಸಿರುವ ಉದಾಹರಣೆ ಕಮ್ಮಿ. ವಿಶ್ವದಲ್ಲೂ ಕೆಲವೆಡೆ ಸಾಂದರ್ಭಿಕವಾಗಿ ಮಾತ್ರ ಮೊಬೈಲ್ ಫೋನ್ ಬಳಕೆ ನಿಷೇಧ ಹೇರಲಾಗಿದ್ದನ್ನು ಕಾಣಬಹುದು.

ಉತ್ತರ ಕೊರಿಯಾದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಬಗ್ಗೆ ಲಿಬಿಯಾ ಮತ್ತು ಈಜಿಪ್ಟ್ ದೇಶಗಳಿಗೆ ತಿಳಿಯಬಾರದು ಎಂದು ಉತ್ತರ ಕೊರಿಯಾದ ನಾಗರಿಕರಿಗೆ ನೂರು ದಿನಗಳ ಮೊಬೈಲ್ ಫೋನ್ ಬಳಕೆ ನಿಷೇಧ ಹೇರಲಾಗಿತ್ತು.

ಸಿರಿಯಾ ಬಂಡುಕೋರರ ಕುಮ್ಮಕ್ಕಿನಿಂದ ಕೆಲವರು ಸರ್ಕಾರಿ ವಿರೋಧಿ ಚಿತ್ರಗಳನ್ನು ಹಾಗೂ ವಿಡಿಯೋ ತುಣುಕುಗಳನ್ನು ಇಂಟರ್ ನೆಟ್ ಗೆ ಅಪ್ ಲೋಡ್ ಮಾಡುತ್ತಿದ್ದಾರೆ ಎಂದು ಹೇಳಿ ಸಿರಿಯಾದಲ್ಲಿ ಜನಪ್ರಿಯ ಸ್ಮಾರ್ಟ್ ಫೋನ್ ಐಫೋನ್ ಬಳಕೆ ನಿಷೇಧಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+