ಸಿದ್ದರಾಮಯ್ಯ ಪುತ್ರ ರಾಕೇಶ್ ವಿಧಾನಸಭೆ ಚುನಾವಣೆಗೆ
ಬೆಂಗಳೂರು,
ಡಿ.3: ಮುಖ್ಯಮಂತ್ರಿ ಖುರ್ಚಿ ಮೇಲೆ ಟವಲ್ ಹಾಕಿಯೇ ಕಾಂಗ್ರೆಸ್ ಪ್ರವೇಶಿಸಿದ್ದ ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಎದ್ದಿದೆ ಎಂದು ಭಾವಿಸಿಕೊಂಡು ತಮ್ಮ ಪುತ್ರ ರಾಕೇಶ್ ಅವರನ್ನು ಕಣಕ್ಕಿಳಿಸಲು ಆಲೋಚಿಸಿದ್ದಾರೆ. id="toptextpromo">ಸಿದ್ದರಾಮಯ್ಯ
ಅವರು ತಾವು ಈ ಹಿಂದೆ ಪ್ರತಿನಿಧಿಸುತ್ತಿದ್ದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ತಮ್ಮ ಪುತ್ರನನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ಟಿವಿ9 ವರದಿ ಮಾಡಿದೆ. ತಮ್ಮ ಮೂರು ದಶಕಗಳ ರಾಜಕೀಯ ಅನುಭವವನ್ನು ಮಗನಿಗೆ ಧಾರೆಯೆರೆದು ಆತನಿಗೆ ರಾಜಕೀಯ ನೆಲೆ ಒದಗಿಸುವುದು ಸಿದ್ದರಾಮಯ್ಯನವರ ಇರಾದೆಯಾಗಿದೆ. id='are-slot-1' class='oiad oi-axt oiadv'> id='top-searched-articles'>32
ವರ್ಷದ ರಾಕೇಶ್, ಸಿದ್ದರಾಮಯ್ಯನವರ ಹಿರಿಯ ಪುತ್ರ. ಬಿಎ ಪದವೀಧರ ರಾಕೇಶ್, ಆಗಾಗ್ಗೆ ಅಪ್ಪನ ಜತೆಗೂಡಿ ರಾಜಕೀಯವಾಗಿ ಗುರುತಿಸಿಕೊಂಡಿದ್ದಾರೆ. 2 ಚುನಾವಣೆಗಳ ಹಿಂದೆಯೇ ಚಾಮುಂಡಿ ಕ್ಷೇತ್ರದಲ್ಲಿ ಅಪ್ಪನ ಪರ ಪ್ರಚಾರ ಕಾರ್ಯದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ರಾಕೇಶ್, ಹೀರೋ ಆಗಿ ಕನ್ನಡ ಚಿತ್ರವೊಂದರಲ್ಲಿ ನಟಿಸಿದ್ದಾರೆ.











Click it and Unblock the Notifications