ಮೈಸೂರು ಭೂ ಹಗರಣ, ಸಿಐಡಿ ತನಿಖೆ ಬೇಡ

Mysore Land Scam
ಮೈಸೂರು, ಡಿ.2: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ 9 ಸಾವಿರ ಎಕರೆ ಭೂ ಹಗರಣ ನಡೆದಿದೆ. ಇದರಲ್ಲಿ ಯಾವ ಪಕ್ಷಗಳ ಪ್ರಭಾವಿ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂಬ ಮಾಹಿತಿಯನ್ನು ಶೀಘ್ರದಲ್ಲಿಯೇ ದಾಖಲೆ ಸಮೇತ ಬಿಡುಗಡೆ ಮಾಡುವುದಾಗಿ ನಗರದ ಪ್ರಜ್ಞಾವಂತ ನಾಗರಿಕ ವೇದಿಕೆಯ ಸಂಚಾಲಕ ಎಂ.ಲಕ್ಷಣ್ ಹೇಳಿದರು.

ಈ ಅಕ್ರಮ ಕಬಳಿಕೆಯಲ್ಲಿ 16 ಮಂದಿ ಪ್ರಭಾವಿ ರಾಜಕಾರಣಿಗಳ ಕೈವಾಡವಿದೆ. ಈ ಕುರಿತು ತಾವು ದಾಖಲೆಗಳನ್ನು ಸಂಗ್ರಹಿಸುತ್ತಿದ್ದು, ಭೂ ಹಗರಣದಲ್ಲಿ ಯಾರು ಯಾರು ಇದ್ದಾರೆ ಎಂಬುದನ್ನು ಬಹಿರಂಗಪಡಿಸುವುದಾಗಿ ತಿಳಿಸಿದರು.

1973 ರ ದಾಖಲೆಗಳ ಪ್ರಕಾರ ಚಾಮುಂಡಿ ಬೆಟ್ಟದಲ್ಲಿ ಸರ್ಕಾರದ ಆಸ್ತಿಯಾಗಿ 9 ಸಾವಿರ ಎಕರೆ ಭೂಮಿ ಇತ್ತು. ಆದರೆ ಇದು 2011ರ ವೇಳೆಗೆ 2,200 ಎಕರೆಗೆ ಇಳಿದಿದೆ.

ಸುಮಾರು 7 ಸಾವಿರ ಎಕರೆ ಸರ್ಕಾರಿ ಭೂಮಿ ಭೂಗಳ್ಳರ ಪಾಲಾಗಿದೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸಾವಿರಾರು ಎಕರೆ ಸರ್ಕಾರಿ ಭೂಮಿಗಳ ಬಗ್ಗೆ ನಗರಾಭಿವೃದ್ಧಿ ಪ್ರಾಧಿಕಾರ, ನಗರ ಪಾಲಿಕೆಯ ಬಳಿ ಯಾವುದೇ ದಾಖಲೆಗಳಿಲ್ಲ.

ಇದನ್ನೇ ದುರುಪಯೋಗಪಡಿಸಿಕೊತ್ತಿರುವ ಭೂಗಳ್ಳರು ಭೂಮಿಯನ್ನು ಕಬಳಿಸುತ್ತಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರ ಸರ್ಕಾರಿ ಸಂಸ್ಥೆಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಬದಲಾಗಿ ಭೂಗಳ್ಳರಿಗೆ ಅನುಕೂಲವಾಗುವಂತೆ ಏಜೆನ್ಸಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು.

ಚಾಮುಂಡಿ ಬೆಟ್ಟದ ತಪ್ಪಲಿನ ಭೂ ವಿವಾದಕ್ಕೆ ಸಂಬಂದಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರ ಒತ್ತಾಯಕ್ಕೆ ಮಣಿದು ಸರ್ಕಾರ ಪ್ರಕರಣವನ್ನು ಸಿಓಡಿ ತನಿಖೆಗೆ ಆದೇಶಿಸಿದೆ.

ಇದರಿಂದ ಯಾವುದೇ ಪ್ರಯೋಜನವಿಲ್ಲ. ಸಿಓಡಿಯಲ್ಲಿ ಕಂದಾಯ ಇಲಾಖೆಯ ಸೇರಿದಂತೆ ವಿವಿಧ ಇಲಾಖೆಗಳ ತಜ್ಞರ ವಿಭಾಗಗಳಲ್ಲಿಲ್ಲ. ಆದ ಕಾರಣ ಸಿಓಡಿ ತನಿಖೆಯನ್ನು ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ. ಜನತೆಯನ್ನು ದಾರಿ ತಪ್ಪಿಸಲೆಂದು ಹಾಗೂ ನ್ಯಾಯಲಯಕ್ಕೆ ಮರೆಮಾಚಲೆಂದು ಸಿಓಡಿ ತನಿಖೆಗೆ ಆದೇಶಿಸಲಾಗಿದೆ ಎಂದು ದೂರಿದರು.

ಲೋಕಾಯುಕ್ತರಿಗೆ ದೂರು ಸಲ್ಲಿಕೆ ಚಾಮುಂಡಿ ಬೆಟ್ಟದ ತಪ್ಪಲಿನ 2200 ಎಕರೆ ಭೂಮಿ ಕುರಿತು ಆದೇಶ ಹೊರಡಿಸಿರುವ ಬಗ್ಗೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ವಿರುದ್ಧ ತನಿಖೆ ನಡೆಸುವಂತೆ ಕೋರಿ ಲೋಕಾಯುಕ್ತರಲ್ಲಿ ದೂರು ದಾಖಲಿಸಿದ್ದೇನೆ.

ಲೋಕಾಯುಕ್ತ ಸಂಸ್ಥೆಯಲ್ಲಿ ವಿವಿಧ ಸರ್ಕಾರಿ ವಿಭಾಗಗಳ ತಜ್ಞರ ತಂಡವಿದೆ. ಭೂಹಗರಣದ ಕುರಿತು ತನಿಖೆ ನಡೆಸುವ ಸಾಮಾರ್ಥ್ಯ ಲೋಕಾಯುಕ್ತ ಸಂಸ್ಥೆ ಇರುವುದರಿಂದ ತಾವು ದೂರು ದಾಖಲಿಸಿರುವುದಾಗಿ ಸ್ಪಷ್ಟಪಡಿಸಿದರು.

ಹೈಕೋರ್ಟ್ ಮೊರೆ ಈ ಸಂಬಂಧ ಸರ್ಕಾರ ತಕ್ಷಣವೇ ಹಾಲಿ ನ್ಯಾಯ ಮೂರ್ತಿಯೊಬ್ಬರಿಂದ ತನಿಖೆ ನಡೆಸಲು ಆದೇಶಿಸಬೇಕು. ತನಿಖೆ ನಡೆಸಲು ಸಮಯ ನಿಗದಿಪಡಿಸಬೇಕು. ತನಿಖೆಗೆ ಆದೇಶಿಸದಿದ್ದರೆ ಹೈಕೋರ್ಟ್‌ನ ಮೊರೆ ಹೋಗಿ ಸಿಬಿಐ ತನಿಖೆ ನಡೆಸಲು ಆದೇಶಿಸಬೇಕೆಂದು ಕೋರಲಾಗುವುದು ಎಂದರು.

ಚಾಮುಂಡೇಶ್ವರಿ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ ಎನ್ನಲಾದ ಭೂ ಹಗರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಸಚಿವ ಎಸ್. ಎ. ರಾಮದಾಸ್ ಅವರ ವಿರುದ್ಧ ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಗುರುವಾರ(ನ.28) ಆದೇಶಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+