ನಾರ್ವೆ ಪೊಲೀಸರ ಅತಿರೇಕದ ಕ್ರಮಕ್ಕೆ ಹೊಸ ತಿರುವು

norway-charges-indian-couple-family-approach-nri-cell
ಹೈದರಾಬಾದ್, ಡಿ.1: ಮಗನನ್ನು ದಂಡಿಸಿ, ಬೆದರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಆಂಧ್ರದ ಟೆಕ್ಕಿ ಚಂದ್ರಶೇಖರ್ ದಂಪತಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈಗಾಗಲೇ ನಾರ್ವೆ ಪೊಲೀಸರ ಅತಿರೇಕದ ಕ್ರಮದ ಬಗ್ಗೆ ಟೀಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲೇ ಬಂಧನಕ್ಕೀಡಾಗಿರುವ ದಂಪತಿ ನಿರೀಕ್ಷೆಯಂತೆ ಇಲ್ಲಿನ ಎನ್ನಾರೈ ಶಾಖೆಯ ಕದ ತಟ್ಟಿದ್ದಾರೆ.

ಅನುಪಮಾ ಚಂದ್ರಶೇಖರ್ ಅವರ ತಂದೆ ಮತ್ತು ಚಂದ್ರಶೇಖರ್ ಅವರ ಸಂಬಂಧಿ ವಿ ಶೈಲೇಂದರ್ ಅವರು ಹೈದರಾಬಾದಿನಲ್ಲಿರುವ NRI ವಿಶೇಷ ಘಟಕದ ಕಾರ್ಯದರ್ಶಿಯನ್ನು ಭೇಟಿಯಾಗಿ ಪ್ರಕರಣವನ್ನು ವಿವರಿಸಿ, ನ್ಯಾಯ ದೊರಕಿಸಿಕೊಡುವಂತೆ ಕೋರಿದ್ದಾರೆ. ಈ ಮಧ್ಯೆ, ಟೆಕ್ಕಿ ಚಂದ್ರಶೇಖರ್ ಕುಟಂಬಸ್ಥರು ಪೊಲೀಸರ ಅತಿರೇಕದ ಕ್ರಮವನ್ನು ಪ್ರತಿಭಟಿಸಿ, ಕೇಂಧ್ರ ಸಚಿವೆ ಡಿ. ಪುರಂದೇಶ್ವರಿ ಅವರನ್ನೂ ಭೇಟಿ ಮಾಡಲು ನಿರ್ಧರಿಸಿದೆ.

ತಕ್ಷಣ ಇದಕ್ಕೆ ಸ್ಪಂದಿಸಿದ NRI ವಿಶೇಷ ಘಟಕ ನಾರ್ವೆಯಲ್ಲಿರುವ ಭಾರತೀಯ ರಾಯಭಾರಿ ಮತ್ತು ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದೆ. ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿಯಾಗೂ ಮನವಿ ಸಲ್ಲಿಸಲಾಗಿದೆ.

ಹಿಂದಿನ ಸುದ್ದಿ: ನಾರ್ವೆ ಟಿಸಿಎಸ್ ಕಂಪನಿಯಲ್ಲಿ ಟೆಕ್ಕಿಗಳಾಗಿರುವ ಆಂಧ್ರ ಮೂಲದ ದಂಪತಿಯನ್ನು ಅಲ್ಲಿನ ಪೊಲೀಸರು ಬಂಧಿಸಿದ್ದು, ದಂಪತಿಯು ತಮ್ಮ ಮಗುವಿಗೆ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿದೆ. ನಾರ್ವೆಯಲ್ಲಿ ಇಂತಹ ಕೌಟುಂಬಿಕ ಕಿರುಕುಳ ಪ್ರಕರಣ 2ನೆಯ ಬಾರಿಗೆ ನಡೆದಿದ್ದು ನಾರ್ವೆ ಪೊಲೀಸರ ಕ್ರಮದ ಬಗ್ಗೆ ಎನ್ನಾರೈಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಈಗಿನ ಪ್ರಕರಣ ಏನೆಂದರೆ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ದೊಂಡಪಡು ಮೂಲದ ವಿ ಚಂದ್ರಶೇಖರ್ ಮತ್ತು ಅವರ ಪತ್ನಿ ಅನುಪಮಾ ಅವರು ಓಸ್ಲೊ ಕಂಪನಿಯೊಂದರಲ್ಲಿ ಸಾಫ್ಟವೇರ್ ಇಂಜಿನಿಯರುಗಳಾಗಿದ್ದಾರೆ. ಈ ದಂಪತಿ ತಮ್ಮ 7 ವರ್ಷದ ಮಗನಿಗೆ ಶಿಸ್ತು ಕಲಿಸಲು ಕಠಿಣ ಶಿಕ್ಷೆ ನೀಡಿದ್ದಾರೆ ಎಂಬುದು ಆರೋಪ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+