ಬಿಜೆಪಿಯವರು ರೇಪಿಸ್ಟುಗಳು, ಹೆಣ್ಣು ಮಕ್ಕಳೇ ಹುಷಾರ್

ಬಿಜೆಪಿಯವರಿಗೆ ಎರಡು ನಾಲಿಗೆ. ಅವರು ವಚನ ಭ್ರಷ್ಟರು. ಈಶ್ವರಪ್ಪ ಅವರಿಗೆ ಬಾಯಿಗೆ ಬಂದಂತೆ ಮಾತನಾಡುವುದು ಅಭ್ಯಾಸವಾಗಿದೆ. ಸರಕಾರದಲ್ಲಿ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
'ಕಾಂಗ್ರೆಸ್ ಪಕ್ಷಕ್ಕೆ ಬನ್ನಿ, ಬದಲಾವಣೆ ತನ್ನಿ' ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಸಚಿವ ಸಿ ಎಂ ಉದಾಸಿ ಮತ್ತು ಅವರ ಮಗ ಶಿವಕುಮಾರ್ ಲೋಕೋಪಯೋಗಿ ಇಲಾಖೆಯನ್ನು ದಿವಾಳಿ ಮಾಡಿದ್ದಾರೆ.
ಲೋಕೋಪಯೋಗಿ ಇಲಾಖೆಯೇ ಯಡಿಯೂರಪ್ಪ ಹಾವೇರಿಯಲ್ಲಿ ನಡೆಸುತ್ತಿರುವ ಸಮಾವೇಶದ ಖರ್ಚು ವೆಚ್ಚವನ್ನು ಭರಿಸಲಿದೆ ಎಂದು ಆರೋಪಿಸಿದ್ದಾರೆ.
ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರು ರಾಜ್ಯ ಬೊಕ್ಕಸಕ್ಕೆ 80 ಸಾವಿರ ಕೋಟಿ ನಷ್ಟ ಮಾಡಿದ್ದಾರೆ. ಹಣವನ್ನು ನುಂಗಿ ತೇಗಿ ರಾಜ್ಯ ಬಿಜೆಪಿ ಈಗ ಮೂರು ಭಾಗವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರೈತರಿಗೆ ಗುಂಡೇಟು ನೀಡಿದ ಜಾಗದಿಂದ ಯಡಿಯೂರಪ್ಪ ಹೊಸ ಪಕ್ಷ ಸ್ಥಾಪಿಸಲಿದಾರೆ. ರೈತರಿಗೆ ಕಣ್ಣೀರು ತರಿಸಿದವರು ಯಾರೇ ಆಗಲಿ ಉದ್ದಾರವಾಗುವುದಿಲ್ಲ ಎಂದು ಸಿದ್ದು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಜನಾರ್ಧನ ರೆಡ್ಡಿ ಮತ್ತು ಯಡಿಯೂರಪ್ಪ ಅವರ ಹಗರಣವನ್ನು ಬಯಲುಗೆಳೆದು ಅವರನ್ನು ಜೈಲಿಗೆ ಕಳುಹಿಸಿದ್ದು ಕಾಂಗ್ರೆಸ್ ಪಕ್ಷದ ಸಾಧನೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಜನ ಮೆಚ್ಚುವ ಆಡಳಿತ ನೀಡುತ್ತೇವೆ ಎಂದು ಹಾವೇರಿ ಜನತೆಗೆ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಬಿಎಸ್ವೈ ನೂತನ ಪಕ್ಷಕ್ಕೆ ಸಿದ್ದರಾಮಯ್ಯ ಹೊಸ ಹೆಸರಿನ ಮೂಲಕ ಜರಿದಿದ್ದಾರೆ. ಕೆಜೆಪಿ ಪಕ್ಷವನ್ನು 'ಕಳ್ಳ ಗಂಟಿನ ಪಕ್ಷ' ಎಂದು ಹೆಸರಿಡುವುದು ಸೂಕ್ತ. ತನ್ನ ಅಧಿಕಾರದ ಅವಧಿಯಲ್ಲಿ ಮಾಡಿದ ಭ್ರಷ್ಟಾಚಾರದ ಮೂಲಕ ಸಂಪಾದಿಸಿದ ಹಣದಿಂದ ಯಡಿಯೂರಪ್ಪ ಹೊಸ ಪಕ್ಷ ಸ್ಥಾಪಿಸುತ್ತಿದ್ದಾರೆ, ಹಾಗಾಗಿ ಆ ಹೆಸರಿನಿಂದ ಕರೆಯುವುದು ಪ್ರಶಸ್ತ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications