ಬಿಎಸ್ವೈ ಜೈಲಿಗೆ ಹೋಗಲು ಕಾರಣರಾದ ಶಾಸಕರು

Yeddyurappa went to jail because of four BJP MLAS
ಬೆಂಗಳೂರು, ನ 27: ಕರ್ನಾಟಕ ಜನತಾ ಪಕ್ಷ ಅಸ್ತಿತ್ವಕ್ಕೆ ಬರುವ ಮುನ್ನವೇ, ಬಿಜೆಪಿ ಮತ್ತು ಕೆಜೆಪಿ ನಾಯಕರುಗಳ ಮಾತಿನ ಚಕಮಕಿ ಮುಂದುವರಿದಿದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜೈಲಿಗೆ ಹೋಗಲು ಬಿಜೆಪಿಯ ಒಬ್ಬ ಸಚಿವ ಸೇರಿದಂತೆ ಅದೇ ಪಕ್ಷದ ಮೂವರು ಶಾಸಕರು ಕಾರಣ ಎಂದು ಕೆಜೆಪಿ ಅಧ್ಯಕ್ಷ ಧನಂಜಯ ಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ನಮ್ಮ ನಾಯಕ ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಿನಿಂದ ಅವರ ಹೆಸರಿಗೆ ಮಸಿ ಬಳೆಯುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿತ್ತು.

ಯಡಿಯೂರಪ್ಪ ಜೈಲಿಗೆ ಹೋಗಲು ನನ್ನ ಹಿಂದಿನ ಮಾತೃ ಪಕ್ಷವಾದ ಬಿಜೆಪಿಯ ಶಾಸಕರುಗಳೇ ಕಾರಣ ಎಂದು ಧನಂಜಯ ಕುಮಾರ್ ಆರೋಪಿಸಿದ್ದಾರೆ.

ಧನಂಜಯ ಕುಮಾರ್ ಪ್ರಕಾರ ಯಡಿಯೂರಪ್ಪ ಜೈಲಿಗೆ ಹೋಗಲು ಕಾರಣರಾದವರ ಪಟ್ಟಿ ಇಂತಿದೆ:

1. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ, ಮಹದೇವಪುರ ಕ್ಷೇತ್ರದ ಶಾಸಕ - ಅರವಿಂದ ಲಿಂಬಾವಳಿ
2. ಯಲಹಂಕ ಕ್ಷೇತ್ರದ ಶಾಸಕ - ವಿಶ್ವನಾಥ್
3. ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ - ಸತೀಶ್ ರೆಡ್ಡಿ
4. ಕೃಷ್ಣರಾಜಪುರಂ ಕ್ಷೇತ್ರದ ಶಾಸಕ - ನಂದೀಶ್ ರೆಡ್ಡಿ

ಎಚ್ ಡಿ ಕುಮಾರಸ್ವಾಮಿ ಮಾಡಿದ ನಂಬಿಕೆ ದ್ರೋಹಕ್ಕಿಂತ ಬಿಜೆಪಿಯವರೇ ಮಾಡಿದ ದ್ರೋಹ ದೊಡ್ಡದು ಎಂದು ಮಾಜಿ ಸಿಎಂ ಯಡಿಯೂರಪ್ಪ ಬೀದರ್ ನಲ್ಲಿ ನೀಡಿದ ಹೇಳಿಕೆಯ ಬೆನ್ನಲ್ಲೇ ಧನಂಜಯ ಕುಮಾರ್, ಬಿಜೆಪಿಯವರ ಮೇಲೆ ಹರಿಹಾಯ್ದಿದ್ದಾರೆ.

ಹಾವೇರಿಯಲ್ಲಿ ನಡೆಯುವ ಸಮಾವೇಶಕ್ಕೆ ಬಿಜೆಪಿಯಿಂದ ಕನಿಷ್ಠ 50 ಶಾಸಕರಾದರೂ ಬರುತ್ತಾರೆ. ಬಿಜೆಪಿಯ ಯಾವುದೇ ಬೆದರಿಕೆಗೆ ಇವರುಗಳು ಜಗ್ಗುವುದಿಲ್ಲ. ಡಿಸೆಂಬರ್ 9ರಂದು ರಾಜ್ಯ ಬಿಜೆಪಿ ಇಬ್ಭಾಗವಾಗಲಿದೆ ಎಂದು ಧನಂಜಯ್ ಕುಮಾರ್ ಭವಿಷ್ಯ ನುಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+