ಹಾವೇರಿಗೆ 60 ಶಾಸಕರು, 5 ಲಕ್ಷ ಜನ- ಬಿಎಸ್‌ವೈ ಕನಸು

ಕರ್ನಾಟಕ ಜನತಾ ಪಕ್ಷಕ್ಕೆ ಅಧಿಕೃತ ಚಾಲನೆ ನೀಡಿ, ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸಲು ಯಡಿಯೂರಪ್ಪ ಅವರು ಸಿದ್ಧತೆ ನಡೆಸಿದ್ದಾರೆ. ಈ ಮಧ್ಯೆ, ಸಮಾವೇಶವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಲು ಬಿಎಸ್‌ವೈ ಬೆಂಬಲಿಗರು ಕಂಕಣಬದ್ಧರಾಗಿದ್ದಾರೆ. 60 ಶಾಸಕರು/ಸಚಿವರು, 15 ಸಂಸದರು ಮತ್ತು 5 ಲಕ್ಷ ಬೆಂಬಲಿಗರು ಹಾಜರಾಗಲಿದ್ದಾರೆ ಎನ್ನಲಾಗಿದೆ.
ಕೆಜೆಪಿ ಮಹಾಕಾರ್ಯದರ್ಶಿ ಲಕ್ಷ್ಮಿನಾರಾಯಣ, ಶಾಸಕರಾದ ನೆಹರೂ ಓಲೆಕಾರ್, ಜಿ ಶಿವಣ್ಣ ಮತ್ತು ಶಿವರಾಜ ಸಜ್ಜನ್ ಅವರುಗಳು ಸಮಾವೇಶದ ಉಸ್ತುವಾರಿ ಹೊತ್ತಿದ್ದಾರೆ.
ಗುದ್ಲೆಪ್ಪ ಹಳ್ಳಿಕೇರಿ ಕಾಲೇಜು ಆವರಣದಲ್ಲಿರುವ 40 ಎಕರೆ ಮೈದಾನ ಮತ್ತು ಪಕ್ಕದಲ್ಲೇ ಇರುವ 21 ಎಕರೆ ವಿಶಾಲ ಜಾಗವನ್ನು ಸಮಾವೇಶಕ್ಕಾಗಿ ಸಜ್ಜುಗೊಳಿಸಲಾಗಿದೆ. ಸುಮಾರು 5 ಲಕ್ಷ ಮಂದಿಗಾಗಿ ಬೇರೆ ಬೇರೆ ಸ್ಥಳಗಳಲ್ಲಿ ಐದು ಕಡೆ ಊಟೋಪಚಾರ ವ್ಯವಸ್ಥೆಯನ್ನೂ ಮಾಡಲಾಗಿದೆ.
ಈ ಮಧ್ಯೆ ಬೆಂಗಳೂರಿನಲ್ಲಿ ಬಿಎಸ್‌ವೈ ಬೆಂಬಲಿಗರು ಇಂದು ಮಂಗಳವಾರ ಸಭೆಯೊಂದನ್ನು ನಡೆಸಿದ್ದು, ಹಾವೇರಿ ಸಮಾವೇಶಕ್ಕಾಗಿ ರಾಜಕೀಯ ಕಾರ್ಯತಂತ್ರ ರೂಪಿಸುತ್ತಿದ್ದಾರೆ.












Click it and Unblock the Notifications