ಠಾಕ್ರೆ ನಿಧನ: ರಾಜ್ಯದ ಗಡಿಭಾಗದಲ್ಲಿ ಕಟ್ಟೆಚ್ಚರ

ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಅಥಣಿ, ನಿಪ್ಪಾಣಿ, ಖಾನಾಪುರ, ಗೋಕಾಕ್ ಮುಂತಾದ ಕಡೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಜನತೆ ಶಾಂತ ರೀತಿಯಿಂದ ವರ್ತಿಸಿ ತಾಳ್ಮೆಯಿಂದ ಇರಬೇಕೆಂದು ಎಸ್ಪಿ ಜನತೆಗೆ ಕರೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಎರಡು ಕೆಎಸ್ಆರ್ಪಿ ತುಕುಡಿಯನ್ನು ನಿಯೋಜಿಸಲಾಗಿದೆ. ಬೆಳಗಾವಿ ನಗರದ ಪ್ರಮುಖ ಪ್ರದೇಶಗಳಲ್ಲಿ ಮತ್ತು ಮಹಾರಾಷ್ಟ್ರ ಸಂಪರ್ಕಿಸುವ ಗಡಿ ಭಾಗದಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಜನತೆ ವದಂತಿಗಳಿಗೆ ಕಿವಿಗೊಡಬಾರದು. ಯಾವುದೇ ರೀತಿಯ ಘಟನೆಯನ್ನು ಎದುರಿಸಲು ಸಜ್ಜಾಗುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಲಾಗಿದೆ ಎಂದು ಸಂದೀಪ್ ಪಾಟೀಲ್ ಹೇಳಿದ್ದಾರೆ.
ಇದೇ ವೇಳೆ, ಶನಿವಾರ ನಗರದ ಮಾರುತಿ ಮಂದಿರದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ ಮರಾಠಿ ಸಂಘಟನೆಗಳು, ನಾಳೆ ಅಂದರೆ ಭಾನುವಾರ ಬೆಳಗಾವಿ ಬಂದ್ ಗೆ ಕರೆ ಕೊಟ್ಟಿವೆ.
ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಳಗಾವಿಯಲ್ಲಿ ತುರ್ತು ಸಭೆ ನಡೆಸಿ ಠಾಕ್ರೆ ನಿಧಾನಕ್ಕೆ ಸಂತಾಪ ಸೂಚಿಸಿದೆ. ಠಾಕ್ರೆ ಹಾಕಿಕೂಟ್ಟ ಹೋರಾಟದ ಹಾದಿಯಲ್ಲೇ ನಾವು ಮುಂದುವರಿಯುತ್ತೇವೆ ಎಂದು ಮರಾಠ ಮುಖಂಡ ಸಂಭಾಜಿರಾವ್ ಪಾಟೀಲ್ ಹೇಳಿದ್ದಾರೆ.
ಕನ್ನಡಿಗರು, ಗುಜರಾತಿ, ಬಿಹಾರಿ, ಮಾರ್ವಾಡಿಗಳ ವಿರುದ್ದ ಪದೇ ಪದೇ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದ ಕಟ್ಟಾ ಹಿಂದೂತ್ವವಾದಿ ಬಾಳ್ ಠಾಕ್ರೆ ಇಂದು (ನ. 17) ಅಪರಾಹ್ನ 3.30ರ ಸುಮಾರಿಗೆ ಮುಂಬೈ ನಲ್ಲಿ ನಿಧನ ಹೊಂದಿದರು..












Click it and Unblock the Notifications