ಧರ್ಮಸ್ಥಳ ಹೆಸರಿಗೆ ಮಸಿ ಬಳಿಯುತ್ತಿರುವವರು ಯಾರು

ನಮ್ಮ ರಕ್ಷಣೆಗಳಿಗೆ ನಾವು ನಮ್ಮ ನಮ್ಮಲ್ಲೇ ಕೆಲವೊಂದು ನಿಯಮಗಳನ್ನು ಹಾಕಿಕೊಂಡಿದ್ದೇವೆ. ಇದಕ್ಕೆ ಊರಿನ ಮತ್ತು ಇತರ ಸ್ಥಳದ ಜನರ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ. ಇದಕ್ಕೆ ಅಪವಾದ ಎನ್ನುವಂತೆ ಕೆಲವರು ಇಲ್ಲಿ ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ.
ಇವರ ವಿರುದ್ದ ತಾಲೂಕಿನ ಜನತೆ ಒಗ್ಗಟ್ಟಾಗಿ ಪ್ರತಿಭಟಿಸುತ್ತಿದ್ದಾರೆ. ಎಸ್ಎಂಎಸ್ ಮತ್ತು ಕೆಲವೊಂದು ಪತ್ರಿಕೆಗಳಲ್ಲಿ ಬರುವ ಸುಳ್ಳು ಸುದ್ದಿಯನ್ನು ನಂಬಬೇಡಿ. ಶ್ರೀಕ್ಷೇತ್ರ ಮತ್ತು ಮತ್ತು ಧರ್ಮಸ್ಥಳ ಗ್ರಾಮ ಎಂದಿನಂತೆ ಶುಭ್ರವಾಗಿದೆ , ಮಂಜುನಾಥ ಸ್ವಾಮಿಯ ರಕ್ಷೆ ಎಲ್ಲರ ಮೇಲಿದೆ ಎಂದು ಹೆಗ್ಗಡೆ ಜನತೆಗೆ ಅಭಯ ನೀಡಿದ್ದಾರೆ.
ಏನಿದು ಘಟನೆ: ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಕೊಲೆ ಪ್ರಕರಣ ನಡೆದಿತ್ತು. ಒಂದು ಪ್ರಕರಣದಲ್ಲಿ ಬುದ್ದಿಮಾಂದ್ಯ ಅಣ್ಣ ಮತ್ತು ತಂಗಿಯನ್ನು ಕಲ್ಲಿನಿಂದ ಜಜ್ಜಿ ಕೊಲೆಗಯ್ಯಲಾಗಿತ್ತು. ಇನ್ನೊಂದು ಘಟನೆಯಲ್ಲಿ ಉಜಿರೆ ಕಾಲೇಜಿನಿಂದ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು.
ಈ ಎರಡು ಘಟನೆ ನಡೆದ ನಂತರ ಧರ್ಮಸ್ಥಳ ಗ್ರಾಮದ ಮನೆಗಳಲ್ಲಿ ರಾತ್ರಿ ಹೊತ್ತು ಬಾಗಿಲು ತಟ್ಟಿ, ವಿಚಿತ್ರವಾಗಿ ಶಬ್ದ ಮಾಡಿ ಭಯದ ವಾತಾವರಣ ಸೃಷ್ಟಿ ಮಾಡುವ ಪ್ರಯತ್ನ ನಡೆದಿತ್ತು. ಸೌಜನ್ಯ ನಾಪತ್ತೆಯಾದ ಕೆಲವೇ ಹೊತ್ತಿನಲ್ಲಿ ಆಕೆಯ ಪೋಷಕರು ಹೆಗ್ಗಡೆಯವರನ್ನು ಭೇಟಿ ಮಾಡಿದ್ದರು.
ಈ ಎರಡು ಕೊಲೆ ಘಟನೆಯ ನಂತರ ಇಡೀ ಧರ್ಮಸ್ಥಳ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ತುಪ್ಪ ಸುರಿಯುವಂತೆ ಕಿಡಿಗೇಡಿಗಳು ಗ್ರಾಮದಲ್ಲಿ ದೆವ್ವದ ಕಾಟ, ಪಿಶಾಚಿ ಕಾಟ, ಧರ್ಮಸ್ಥಳದಲ್ಲಿ ಅಶಾಂತಿ ಎಂದು ಇಲ್ಲ ಸಲ್ಲದ ಊಹಾಪೋಹಗಳನ್ನು ಹರಿದು ಬಿಡುತ್ತಿದ್ದಾರೆ.
ಬುದ್ದಿಮಾಂದ್ಯ ಜೋಡಿ ಕೊಲೆಯ ಹಂತಕರ ಸುಳಿವು ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ. ಸೌಜನ್ಯ ಕೊಲೆ ಸಂಬಂಧ ಒಬ್ಬ ವ್ಯಕ್ತಿಯನ್ನು ಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಈ ಎರಡೂ ಘಟನೆಯನ್ನು ಸಿಬಿಐಗೆ ವಹಿಸಬೇಕೆಂದು ವೀರೇಂದ್ರ ಹೆಗ್ಗಡೆ ಮನವಿ ಮಾಡಿದ್ದಾರೆ.
ಹದಿನೇಳು ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾಳನ್ನು ಉಸಿರುಗಟ್ಟಿಸಿ ಧರ್ಮಸ್ಥಳದಿಂದ ಎಂಟು ಕಿ.ಮೀ ದೂರದ ಉಜಿರೆಯ ಬಳಿ ಅಕ್ಟೋಬರ್ 9ರಂದು ಹತ್ಯೆ ಮಾಡಲಾಗಿತ್ತು. ಉಜಿರೆಯ ಎಸ್‌ಡಿಎಮ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಈಕೆ ಗುತ್ತಿಗೆದಾರರೊಬ್ಬರ ಮಗಳು.












Click it and Unblock the Notifications