ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

65 ಸಾವಿರ ಮಹಿಳೆಯರಿಗೆ ಜೀವ ವಿಮೆ ಖೋತಾ

By Mahesh
|
Google Oneindia Kannada News

 American Women Insurance
ನ್ಯೂಯಾರ್ಕ್, ನ.15: ಬರಾಕ್ ಒಬಾಮಾ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಖುಷಿಯ ಬೆನ್ನಲ್ಲೇ ಹಲವಾರು ಹೊಸ ನಿಯಮಗಳು, ಕಾನೂನುಗಳು ಜಾರಿಗೆ ಬರುತ್ತಿದೆ. ವಿಮೆ ಕ್ಷೇತ್ರದಲ್ಲಿ ಬಾರಿ ಬದಲಾವಣೆ ಕಂಡು ಬರಲಿದೆ ಎಂದು ಮಿಚಿಗನ್ ವಿವಿ ಅಧ್ಯಯನ ಹೇಳಿದೆ.

ಮಿಚಿಗನ್ ವಿಶ್ವ ವಿದ್ಯಾಲಯದ ಅಂದಾಜಿನ ಪ್ರಕಾರ ಸುಮಾರು 65,000 ವಿವಾಹ ವಿಚ್ಛೇದನಗೊಂಡ ಮಹಿಳೆಯರು ಖಾಸಗಿ ಜೀವ ವಿಮೆ ಲಾಭದಿಂದ ವಂಚಿತರಾಗಲಿದ್ದಾರೆ.

ಮದುವೆ ಸಂದರ್ಭದಲ್ಲಿ ಆರೋಗ್ಯ ವಿಮೆ ಪಡೆದು ನಂತರ ವಿವಾಹ ವಿಚ್ಛೇದನ ಪಡೆದ ಮಹಿಳೆಯರು ವಿಮೆ ಸೌಲಭ್ಯ ಕಳೆದುಕೊಳ್ಳಲಿದ್ದಾರೆ. ಖಾಸಗಿ ವಿಮೆ ಹಾಗೂ ಸಾರ್ವಜನಿಕ ವಿಮೆ ನಡುವೆ ಭಾರಿ ಅಂತರ ಕಂಡು ಬರಲಿದೆ.

ಪ್ರತಿ ವರ್ಷ ಸುಮಾರು 115,000 ಮಹಿಳೆಯರು ಖಾಸಗಿ ವಿಮೆಯನ್ನು ಕಳೆದುಕೊಳ್ಳಲಿದ್ದಾರೆ. ಮದುವೆ ಸಂದರ್ಭದಲ್ಲಿ ಅವಲಂಬಿತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯರಿಗೆ ವಿಚ್ಛೇದನ ಪಡೆದ ಮೇಲೆ ಜೀವನ ಕಷ್ಟಕರವಾಗಲಿದೆ.

ಕಳೆದ ವರ್ಷ ಸುಮಾರು 48.6 ಮಿಲಿಯನ್ ಜೀವ ವಿಮೆ, ಆರೋಗ್ಯ ವಿಮೆಯಿಂದ ವಂಚಿತರಾಗಿದ್ದಾರೆ ಎಂದು ವಿವಿಯ ದಾಖಲೆಗಳು ಹೇಳಿದೆ.

ಅಂದಾಜಿನ ಪ್ರಕಾರ ಪ್ರತಿ ವರ್ಷ 1 ಮಿಲಿಯನ್ ವಿವಾಹ ವಿಚ್ಛೇದನ ಪ್ರಕಾರಗಳು ಯುಎಸ್ ನಲ್ಲಿ ಕಾಣಬಹುದಾಗಿದೆ. ಮದುವೆ ಸಂದರ್ಭದಲ್ಲಿ ಗಂಡನ ಕೃಪೆಯಿಂದ ಪತ್ನಿಗೂ ಆರೋಗ್ಯ ವಿಮೆ ಸೌಲಭ್ಯ ಸಿಗಲಿದೆ.

1996 ರಿಂದ 2007 ರ ತನಕ ಮಿಚಿಗನ್ ವಿವಿಯ ಬ್ರಿಡ್ಜೆಟ್ ಲ್ಯಾವೆಲ್ಲೆ ಹಾಗೂ ಪಮೇಲಾ ಸ್ಮೊಕ್ ಅವರು ಅಧ್ಯಯನ ನಡೆಸಿ ವರದಿ ನೀಡಿದ್ದಾರೆ.

ಮಧ್ಯಮ ವರ್ಗ ಅಥವಾ ಕಡಿಮೆ ಆದಾಯವುಳ್ಳ ಮಹಿಳೆಯರು ವಿಚ್ಛೇದನದಿಂದ ಭಾರಿ ನಷ್ಟ ಅನುಭವಿಸಲಿದ್ದಾರೆ. ಮದುವೆಯಾದ ಮೇಲೆ ಪಾರ್ಟ್ ಟೈಂ ಉದ್ಯೋಗದಲ್ಲಿದ್ದು ಅಲ್ಲಿ ಪ್ರತ್ಯೇಕ ಆರೋಗ್ಯ ವಿಮೆ ಪಡೆಯದಿದ್ದರೆ ಅದು ಕೂಡಾ ವಿವಾಹ ವಿಚ್ಛೇದನ ನಂತರ ಮಾರಕವಾಗಲಿದೆ.

ಒಟ್ಟಾರೆ, ವಿವಾಹ ಸಂಬಂಧ ಕಡಿತದಿಂದ ಸ್ವಾವಲಂಬಿ ಯಲ್ಲದ ಮಹಿಳೆಯರ ಬದುಕು ಕಷ್ಟಕರವಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

English summary
A new University of Michigan study estimates that 65,000 American women become uninsured each year as a result of marital dissolution author Bridget Lavelle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X