ದೀಪಾವಳಿ ಕೊಡುಗೆ: ಜೇಠ್ಮಲಾನಿಗೆ ಉಗಿದರೆ 5 ಲಕ್ಷ ರೂ.

ram-bad-husband-spit-on-jethmalani-face-get-r-5-lakh
ಜಬಲ್ಪುರ, ನ.13: ಮರ್ಯಾದಾ ಪುರುಷೋತ್ತಮ ಶ್ರೀರಾಮ ಒಬ್ಬ ಕೆಟ್ಟ ಗಂಡ ಎಂದು ಕುಹಕವಾಡಿರುವ ಬಿಜೆಪಿ ನಾಯಕ 'ರಾಮ' ಜೇಠ್ಮಲಾನಿಯ ಮುಖಕ್ಕೆ ಉಗಿದರೆ ದೀಪಾವಳಿಯ ಕೊಡುಗೆಯಾಗಿ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.

'ರಾಮ ಒಬ್ಬ ಕೆಟ್ಟ ಗಂಡ. ಅವನ ತಮ್ಮ ಲಕ್ಷ್ಮಣ ತನ್ನಣ್ಣನಿಗಿಂತ ಕೆಟ್ಟವ ಎಂದೆಲ್ಲ ಬಡಬಡಾಯಿಸಿರುವ ಜೇಠ್ಮಲಾನಿಗೆ ಈ ಶಿಕ್ಷೆ ಘೋಷಿಸಿರುವವರು ಮಹಾಮಂಡಲೇಶ್ವರ ಸ್ವಾಮಿ ಶ್ಯಾಮದಾಸ್ ಮಹಾರಾಜ.

ಮಧ್ಯಪ್ರದೇಶ ಜಬಲ್ಪುರದ ಈ ಧಾರ್ಮಿಕ ನಾಯಕ 'ಜೇಠ್ಮಲಾನಿಯ ಮುಖಕ್ಕೆ ಯಾರೆಲ್ಲ ಉಗಿಯುತ್ತಾರೋ ಅವರಿಗೆ 5 ಲಕ್ಷ ರೂ. ಬಹುಮಾನ' ನೀಡುವುದಾಗಿ ಭಾನುವಾರ ಪ್ರಕಟಿಸಿದ್ದಾರೆ.

'ಉಗುಳುವುದು ಅಹಿಂಸಾತ್ಮಕ ಕ್ರಿಯೆ. ಭಕ್ತರು ವ್ಯಕ್ತಪಡಿಸುವ ಆಕ್ರೋಶದ ಸಂಕೇತ ಇದಾಗಲಿದೆ. ಆದ್ದರಿಂದ ಇದು ಹಿಂಸಾಚಾರಕ್ಕೆ ಪ್ರೇರೇಪಿಸುವುದಂತಾಗುವುದಿಲ್ಲ. ಆದರೂ ಜೇಠ್ಮಲಾನಿಯ ಈ ಅಕ್ಷ್ಯಮ್ಯ ಅಪರಾಧಕ್ಕೆ ಇದು ಸಣ್ಣ ಶಿಕ್ಷೆಯಾಗುತ್ತದೆ' ಎಂದು ಮಹಾಮಂಡಲೇಶ್ವರ ಸ್ವಾಮಿ ಶ್ಯಾಮದಾಸ್ ಅವರು ಜೇಠ್ಮಲಾನಿಗೆ ಸಲ್ಲಿಸುವ 'ಬಹುಮಾನ'ದ ಕುರಿತು ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+